Friday, October 4, 2024
Homeರಾಷ್ಟ್ರೀಯ | Nationalಉತ್ತರ ಪ್ರದೇಶದಲ್ಲಿ ರೈಲು ಹಳಿ ತಪ್ಪಿಸುವ ಮತ್ತೊಂದು ಯತ್ನ ವಿಫಲ

ಉತ್ತರ ಪ್ರದೇಶದಲ್ಲಿ ರೈಲು ಹಳಿ ತಪ್ಪಿಸುವ ಮತ್ತೊಂದು ಯತ್ನ ವಿಫಲ

Another Train Derailment Attempt? Suspicious object found on tracks in Kanpur

ಲಕ್ನೋ,ಸೆ.30- ರೈಲು ಹಳಿ ತಪ್ಪಿಸುವ ಮತ್ತೊಂದು ಯತ್ನ ವಿಫಲವಾಗಿದೆ. ಉತ್ತರ ಪ್ರದೇಶದ ಕಾನ್ಪುರದ ರೈಲ್ವೆ ಹಳಿಯಲ್ಲಿ ಅನುಮಾನಾಸ್ಪದ ವಸ್ತು ಕಂಡುಬಂದಾಗ ಲೋಕೊ ಪೈಲಟ್‌ ಬ್ರೇಕ್‌ ಹಾಕಿದ್ದರಿಂದ ಆಗಬಹುದಾದ ಭಾರಿ ಅನಾಹುತ ತಪ್ಪಿದೆ.ಹಳಿಯಲ್ಲಿ ಸಿಲಿಂಡರ್‌ ಪತ್ತೆಯಾಗಿದೆ, ದೇಶದ ಹಲವು ಕಡೆಗಳಲ್ಲಿ ರೈಲು ಹಳಿ ತಪ್ಪಿಸುವ ಸಾಕಷ್ಟು ಯತ್ನಗಳು ನಡೆದಿದೆ. ಪುಷ್ಪಕ್‌ ಎಕ್‌್ಸಪ್ರೆಸ್‌‍ನ ಲೊಕೊ ಪೈಲಟ್‌ ಟ್ರ್ಯಾಕ್‌ ಮೇಲೆ ಕೆಂಪು ಸಿಲಿಂಡರ್‌ ಬಿದ್ದಿರುವುದನ್ನು ಗಮನಿಸಿ ಸಮಯಕ್ಕೆ ಸರಿಯಾಗಿ ಬ್ರೇಕ್‌ ಹಾಕಿದರು.

ಸಿಲಿಂಡರ್‌ನಿಂದ ಸ್ವಲ್ಪ ದೂರದಲ್ಲಿ ರೈಲು ನಿಂತಿತು ಎಂದು ಪೊಲೀಸರು ತಿಳಿಸಿದ್ದಾರೆ.ರೈಲು ಹಳಿಗಳ ಮೇಲೆ ಅಪಾಯಕಾರಿ ವಸ್ತುಗಳನ್ನು ಇಡುವುದರಿಂದ ರೈಲು ಸಂಚಾರಕ್ಕೆ ಆಗಾಗ ಅಡ್ಡಿಯುಂಟಾಗುತ್ತಿದೆ, ರೈಲು ಹಳಿತಪ್ಪುವ ಅಥವಾ ಪ್ರಾಣಾಪಾಯವಾಗು ಸಾಧ್ಯತೆ ಹೆಚ್ಚಿದೆ.

ಇನ್ನೂ ಕುತೂಹಲಕಾರಿ ಸಂಗತಿಯೆಂದರೆ, ಈ ವಸ್ತುಗಳಲ್ಲಿ ಹೆಚ್ಚಿನವು, ಮುಖ್ಯವಾಗಿ ಗ್ಯಾಸ್‌‍ ಸಿಲಿಂಡರ್‌ಗಳು ಮತ್ತು ಕಾಂಕ್ರೀಟ್‌ ಕಂಬಗಳನ್ನು ಹಾಕುತ್ತಿರುವುದು ವಿಶೇಷವಾಗಿದೆ.

ನಿನ್ನೆ ರಾತ್ರಿ 8.25 ರ ಸುಮಾರಿಗೆ ಈ ಘಟನೆ ನಡೆದಿದ್ದು, ಕಾಳಿಂದಿ ಎಕ್ಸ್ ಪ್ರೆಸ್‌‍ ಬರಜ್‌ಪುರ ನಿಲ್ದಾಣದಿಂದ ಹೊರಟು 2.3 ಕಿಲೋಮೀಟರ್‌ ದೂರದಲ್ಲಿದ್ದಾಗ ಹಳಿಗಳ ಮೇಲೆ ಇರಿಸಲಾಗಿದ್ದ ಗ್ಯಾಸ್‌‍ ಸಿಲಿಂಡರ್‌ಗೆ ಡಿಕ್ಕಿ ಹೊಡೆದು ಸ್ಫೋಟ ಸಂಭವಿಸಿದೆ. ದೊಡ್ಡ ಶಬ್ದವನ್ನು ಕೇಳಿದ ಲೊಕೊ ಪೈಲಟ್‌ ತಕ್ಷಣ ತುರ್ತು ಬ್ರೇಕ್‌ ಹಾಕಿದ್ದಾರೆ.

ಬಳಿಕ ಇಳಿದು ನೋಡಿದಾಗ ಅಪಾಯಕಾರಿ ವಸ್ತುಗಳು ಹಳಿಯಲ್ಲಿರುವುದು ಕಂಡುಬಂದಿತ್ತು. ತಕ್ಷಣ ರೈಲ್ವೆ ಪೊಟೆಕ್ಷನ್‌ ಫೋರ್ಸ್‌ಗೆ ಮಾಹಿತಿ ನೀಡಲಾಗಿತ್ತು. ಪ್ರದೇಶದ ಸಂಪೂರ್ಣ ಶೋಧ ನಡೆಸಲಾಯಿತು. ರೈಲಿಗೆ ಡಿಕ್ಕಿಯಾದ ಕಾರಣ ಸಿಲಿಂಡರ್‌ ಹಳಿಯಿಂದ ತುಂಬಾ ದೂರ ಹೋಗಿ ಬಿದ್ದಿದೆ.

RELATED ARTICLES

Latest News