Sunday, September 15, 2024
Homeಮನರಂಜನೆಮತ್ತೆ ಸೇರಿದ ಸುದೀಪ್ - ಅನೂಪ್

ಮತ್ತೆ ಸೇರಿದ ಸುದೀಪ್ – ಅನೂಪ್

ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಅನೂಪ್ ಭಂಡಾರಿ ಕಾಂಬಿನೇಷನಲ್ಲಿ ಬಂದಿದ್ದ ವಿಕ್ರಾಂತ್ ರೋಣ ದೊಡ್ಡ ಯಶಸ್ಸನ್ನ ತಂದುಕೊಟ್ಟಿತ್ತು. ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆದಿತ್ತು ಕೂಡ. ಸದ್ಯ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಅದು ಮತ್ತೆ ಇವರಿಬ್ಬರ ಕಾಂಬಿನೇಷನ್ನಲ್ಲಿ ಮತ್ತೊಂದು ಚಿತ್ರಕ್ಕೆ ತಯಾರಿ ನಡೆಯುತ್ತಿದೆ ಎಂದು.

ಕಿಚ್ಚ ಸುದೀಪ್ ಮ್ಯಾಕ್ಸ್ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಮುಂದಿನ ಸಿನಿಮಾ ಯಾವುದೆಂದು ಅಭಿಮಾನಿಗಳಲ್ಲಿ ಕುತೂಹಲ ಮೂಡಿತು ಅದಕ್ಕೆ ಉತ್ತರ ಸಿಕ್ಕಿದೆ. ಅನೂಪ್ ಬಂಡಾರಿ ಸುದೀಪ್ ಗಾಗಿ ಹೊಸ ಕಥೆಯೊಂದನ್ನು ಕಟ್ಟಿದ್ದಾರೆ. ಇದಕ್ಕೆ ಸುದೀಪ್ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಸೆಪ್ಟೆಂಬರ್ 2 ಬೆಳಗ್ಗೆ 10 ಗಂಟೆಗೆ ಟೈಟಲ್ ರಿವಿಲ್ ಅಗಲಿದಯಂತೆ. ಅಂದು ಸುದೀಪ್ ಹುಟ್ಟುಹಬ್ಬ ಇದ್ದು ಅಭಿಮಾನಿಗಳಿಗೆ ಹುಡುಗರೆಯಾಗಿ ಕೊಡಲು ನಿರ್ಧರಿಸಿದ್ದಾರೆ.

ವಿಕ್ರಾಂತ ರೋಣ ಸಿನಿಮಾ ಆದಮೇಲೆ ಅನುಪಂಡಾರಿ, ಬಿಲ್ಲರಂಗ ಭಾಷಾ ಚಿತ್ರಕ್ಕೆ ಮತ್ತೆ ಸುದೀಪರೊಂದಿಗೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ಸುದ್ದಿ ಇತ್ತು. ಅದಾದಮೇಲೆ ಅದರ ಕುರಿತು ವಿಚಾರ ಹೊರ ಬಂದಿರಲಿಲ್ಲ. ಈಗ ಕಿಚ್ಚ ಸುದೀಪ್ ಜೊತೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿರುವ ‘ಅನೂಪ್ ದ ಮೆನ್ ಇನ್ ಬ್ಲಾಕ್ ವಿಲ್ ಬಿ ರೈಟ್ ಬ್ಯಾಕ್’ ಎಂದು ಬರೆದುಕೊಂಡಿದ್ದಾರೆ. ಈ ಹೊಸ ಸಿನಿಮಾದ ಕುರಿತು ಮತ್ತಷ್ಟು ಮಾಹಿತಿಗಳು ಸೆಪ್ಟೆಂಬರ್ 2ರಂದು ಹೊರಬೀಳುವ ಸಾಧ್ಯತೆ ಇದೆ.

RELATED ARTICLES

Latest News