Sunday, September 15, 2024
Homeಜಿಲ್ಲಾ ಸುದ್ದಿಗಳು | District Newsಮೈಸೂರು | Mysuruಬ್ಲಾಕ್‌ಮೇಲ್‌ ಮಾಡಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಯುವಕನ ಬಂಧನ

ಬ್ಲಾಕ್‌ಮೇಲ್‌ ಮಾಡಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಯುವಕನ ಬಂಧನ

ಮೈಸೂರು, ಆ. 18-ತಾಯಿಯನ್ನು ಕೊಲೆ ಮಾಡುವುದಾಗಿ ಬ್ಲಾಕ್ಮೇಲ್ ಮಾಡಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ಆಕೆಯ ಬೆತ್ತಲೆ ಫೋಟೋಟೋಗಳನ್ನು ವೈರಲ್ ಮಾಡಿದ ಯುವಕನನ್ನು ನಂಜನಗೂಡು ಟೌನ್ ಪೊಲೀಸರು ಬಂಧಿಸಿದ್ದಾರೆ.

ನಂಜನಗೂಡಿನ ಹೌಸಿಂಗ್ ಬೋರ್ಡ್ ಕಾಲೋನಿಯ ನಿವಾಸಿ ಆದರ್ಶ ಬಂಧಿತ
ಯುವಕ. 15 ವರ್ಷದ ಅಪ್ರಾಪ್ತ ಬಾಲಕಿಗೆ ಬೆದರಿಕೆ ಹಾಕಿ ಕೃತ್ಯವೆಸಗಿದ್ದಲ್ಲದೆ ಆಕೆಯ ಬೆತ್ತಲೆ ಫೋಟೋಗಳನ್ನು ಶಾಲೆಯ ಮುಖ್ಯಸ್ಥರಿಗೆ ಕಳುಹಿಸಿದ್ದಾನೆ.ಖಾಸಗಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿರುವ ಬಾಲಕಿಯ ಹಿಂದೆ ಬೈಕ್ನಲ್ಲಿ ಫಾಲೋ ಮಾಡಿ ಆಕೆಯನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡಿದ್ದಾನೆ.

ಆದರ್ಶ ಪ್ರಯತ್ನಕ್ಕೆ ಸ್ಪಂದಿಸದಿದ್ದಾಗ ಹೇಳಿದಂತೆ ಕೇಳದಿದ್ದರೆ ನಿನ್ನ ತಾಯಿಯನ್ನು ಸಾಯಿಸುತ್ತೇನೆ ಎಂದು ಹೆದರಿಸಿದ್ದಾನೆ.ಆದರ್ಶ್ನ ಬೆದರಿಕೆಗೆ ಹೆದರಿದ ಬಾಲಕಿ ಕರೆದೆಡೆಗೆ ಹೋಗಿದ್ದಾಳೆ. ಆಗ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಅತ್ಯಾಚಾರವೆಸಗಿದ್ದಾನೆ.
ಅಲ್ಲದೆ ಆಕೆಯ ಬೆತ್ತಲೆ ಫೋಟೋಗಳನ್ನು ತೆಗೆದು ಶಾಲೆಯ ಮುಖ್ಯಸ್ಥರಿಗೆ ರವಾನಿಸಿದ್ದಾನೆ. ಶಾಲೆಯ ಮುಖ್ಯಸ್ಥರು ಬಾಲಕಿಯ ತಾಯಿಯನ್ನು ಕರೆದು ಮಾಹಿತಿ ನೀಡಿದ್ದಾರೆ.

ಮಗಳನ್ನು ಲೈಂಗಿಕವಾಗಿ ಬಳಸಿಕೊಂಡು ಬೆತ್ತಲೆ ಫೋಟೋಗಳನ್ನು ಶೇರ್ ಮಾಡಿದ ಆದರ್ಶ್ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ತಾಯಿ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಅತ್ಯಾಚಾರವೆಸಗಿದ ಆದರ್ಶನನ್ನು ಪೊಲೀಸರು ಬಂಧಿಸಿದ್ದಾರೆ.

RELATED ARTICLES

Latest News