Thursday, September 19, 2024
Homeಮನರಂಜನೆಖ್ಯಾತ ಹಿರಿಯ ಗಾಯಕಿ ಪಿ.ಸುಶೀಲ ಆಸ್ಪತ್ರೆಗೆ ದಾಖಲು

ಖ್ಯಾತ ಹಿರಿಯ ಗಾಯಕಿ ಪಿ.ಸುಶೀಲ ಆಸ್ಪತ್ರೆಗೆ ದಾಖಲು

ಚೆನ್ನೈ, ಆ.18– ಪದಭೂಷಣ ವಿಜೇತೆ, ಜನಪ್ರಿಯ ಹಿರಿಯ ಗಾಯಕಿ ಪಿ.ಸುಶೀಲ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಕಾವೇರಿ ಆಸ್ಪತ್ರೆಯ ವೈದ್ಯರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪಿ.ಸುಶೀಲಾ (86) ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ನಿನ್ನೆ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡ ಪರಿಣಾಮ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುಮಧುರ ಕಂಠದ ಗಾಯಕಿ ಪಿ.ಸುಶೀಲಾ ಅವರು ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿರುವ ವಿಷಯ ತಿಳಿದ ಅಭಿಮಾನಿಗಳು, ಅವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕಾವೇರಿ ಆಸ್ಪತ್ರೆಯ ವೈದ್ಯರು ಸುದ್ದಿಗಾರರೊಂದಿಗೆ ಮಾತನಾಡಿ, `ಹಿರಿಯ ಗಾಯಕಿ ಪಿ.ಸುಶೀಲಾ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಶೀಘ್ರ ಗುಣಮುಖರಾಗುತ್ತಾರೆ, ಯಾರೂ ಭಯಪಡಬೇಕಿಲ್ಲ’ ಎಂದು ತಿಳಿಸಿದ್ದಾರೆ.

ಸಾವಿರಾರು ಹಾಡುಗಳಿಗೆ ತಮ ಸುಶ್ರಾವ್ಯವಾದ ಧ್ವನಿ ನೀಡಿರುವ ಪಿ.ಸುಶೀಲಾ ಅವರಿಗೆ 5 ರಾಷ್ಟ್ರಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ಖ್ಯಾತ ಗಾಯಕ ಎ.ರಾಜಾ ಅವರ ಜೊತೆಗೆ `ಪೆತ್ರ ತಾಯ್‌’ ಚಿತ್ರದ ಡುಯೆಟ್‌ ಗೀತೆ ಹಾಡುವ ಮೂಲಕ ಚಿತ್ರರಂಗದಲ್ಲಿ ಗಾಯಕಿಯಾಗಿ ತಮ ಪಯಣ ಆರಂಭಿಸಿದ ಪಿ.ಸುಶೀಲಾ, ತಮಿಳು, ತೆಲುಗು, ಕನ್ನಡ, ಹಿಂದಿ, ಬೆಂಗಾಲಿ, ಸಂಸ್ಕೃತ ಸೇರಿ ಹಲವು ಭಾಷೆಗಳಲ್ಲಿ ಆಡುವ ಮೂಲಕ ಸಂಗೀತ ಸಾಮ್ರಾಜ್ಞೆಯಾಗಿ ಮೆರೆದಿದ್ದಾರೆ.

ಕನ್ನಡದಲ್ಲೂ ತಮ ಗಾನಲಹರಿ ಹರಿಸಿರುವ ಪಿ.ಸುಶೀಲಾ ಅವರು ಮಣ್ಣಿನ ಮಗ ಚಿತ್ರದ ಇದೇನ ಸಭ್ಯತೆ ಇದೇನ ಸಂಸ್ಕೃತಿ...', ಶರಪಂಜರದಹದಿನಾಲ್ಕು ವರ್ಷ ವನವಾಸದಿಂದ ಮರಳಿ ಬಂದಳು ಸೀತೆ…’, ಸಾಕ್ಷಾತ್ಕಾರ ಚಿತ್ರದ ಒಲವೇ ಜೀವನ ಸಾಕ್ಷಾತ್ಕಾರ... ಹಾಗೂಫಲಿಸಿತು ಒಲವಿನ ಪೂಜಾಫಲ…’ ಸೇರಿದಂತೆ 5000ಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ.

RELATED ARTICLES

Latest News