ಬೆಂಗಳೂರು, ಏ.17- ಮಕ್ಕಳ ಅಶ್ಲೀಲ ವಿಡಿಯೋ ಮತ್ತು ಭಾವಚಿತ್ರಗಳನ್ನು ಅಂತರ್ಜಾಲದಲ್ಲಿ ಡೌನ್ಲೋಡ್ ಮಾಡಿಕೊಂಡು ವೀಕ್ಷಿಸುವುದರ ಜೊತೆಗೆ ವರ್ಗಾಯಿಸುತ್ತಿದ್ದ ಅಸ್ಸಾಂ ರಾಜ್ಯದ ಸೆಕ್ಯುರಿಟಿ ಗಾರ್ಡ್ನನ್ನು ಪೂರ್ವ ವಿಭಾಗದ ಸಿಇಎನ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂನ ಸುನೈ ಗ್ರಾಮದ ನೂರ್ ಇಸ್ಲಾಂ ಚೌದ್ರಿ(37) ಬಂಧಿತ ಆರೋಪಿ.
ಈತ ನಗರದ ಹೈನ್ಸ್ ರಸ್ತೆಯಲ್ಲಿ ವಾಸವಾಗಿದ್ದುಕೊಂಡು ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದನು.ಕೇಂದ್ರ ಗೃಹ ಇಲಾಖೆ ಅಡಿಯಲ್ಲಿ ಬರುವ ನ್ಯಾಷನಲ್ ಸೆಂಟರ್ ಪಾರ್ಕ್ ಮಿಸ್ಸಿಂಗ್ ಆಂಡ್ ಎಕ್ಸ್ಪೆಪೋಲೈಟೆಡ್ ಚಿಲ್ಡ್ರನ್ ಸಾಫ್ಟ್ವೇರ್ಯಡಿಯಲ್ಲಿ ಸೈಬರ್ ಟಿಪ್ಲೈನ್ಗೆ ಸಂಬಂಧಿಸಿದಂತೆ ಮಕ್ಕಳ ಅಶ್ಲೀಲ ವಿಡಿಯೋ ಮತ್ತು ಭಾವಚಿತ್ರಗಳನ್ನು ಅಂತರ್ಜಾಲದಿಂದ ಡೌನ್ಲೋಡ್ ಮಾಡುವುದು, ವೀಕ್ಷಿಸುವುದು, ವರ್ಗಾಯಿಸುವುದು ಸೆರೆ ಹಿಡಿಯುವ ಸಂಶಯಾಸ್ಪದ ವ್ಯಕ್ತಿಗಳ ಚಲನವಲನಗಳನ್ನು ಎಲೆಕ್ಟ್ರಾನಿಕ್ಸ್ ಸರ್ವೀಸ್ ಪ್ರವೈಡರ್ಸ್ಗಳು ಒದಗಿಸುತ್ತವೆ.
ಈ ಆಧಾರದ ಮೇಲೆ ಸೈಬರ್ ಟಿಪ್ಲೈನ್ನನ್ನು ಸಿಐಡಿ ಸ್ವೀಕರಿಸಿ ಪ್ರಕರಣ ದಾಖಲಿಸಿ ತಾಂತ್ರಿಕ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ ಕೃತ್ಯಕ್ಕೆ ಬಳಸಿದ ವಿವೋ ಕಂಪೆನಿಯ ಫೋನ್ ವಶಕ್ಕೆ ಪಡೆಯಲಾಗಿದೆ.
ಪೂರ್ವ ವಿಭಾಗದ ಉಪಪೊಲೀಸ್ ಆಯುಕ್ತರಾದ ಕುಲದೀಪ್ ಕುಮಾರ್ ಆರ್. ಜೈನ್ ಹಾಗೂ ಬಾಣಸವಾಡಿ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಉಮಾಶಂಕರ್ ಅವರ ಮಾರ್ಗದರ್ಶನದಲ್ಲಿ ಸಿಇಎನ್ ಕ್ರೈಂ ಪೂರ್ವ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಉಮೇಶ್ ಕುಮಾರ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದ್ದು, ತಂಡದ ಕಾರ್ಯವೈಖರಿಯನ್ನು ಹಿರಿಯ ಅಧಿಕಾರಿಗಳು ಪ್ರಶಂಸಿರುತ್ತಾರೆ.