ನವದೆಹಲಿ,ಆ.7- ಕಳೆದ ಹಲವಾರು ವರ್ಷಗಳಿಂದ ಒಂದಿಲ್ಲೊಂದು ಕಾರಣಗಳಿಂದ ಮುಂದೂಡಲ್ಪಟ್ಟಿದ್ದ ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಮುಂದಿನ ತಿಂಗಳು ವಿಧಾನಸಭೆಗೆ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಜ್ಜಾಗಿದೆ.
ಪ್ರಾಯೋಗಿಕವಾಗಿ, ಭಾರತದ ಚುನಾವಣಾ ಆಯೋಗದ (ಇಸಿಐ) ಪೂರ್ಣ ತಂಡವು ಆ.8 ರಿಂದ ಮೂರು ದಿನಗಳ ಕಾಲ ಜಮು-ಕಾಶೀರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಬಳಿಕ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರ ಜೊತೆ ಸಭೆ ನಡೆಸಿ ನಂತರ ದಿನಾಂಕವನ್ನು ನಿಗದಿಪಡಿಸಲಿದೆ.
ಜಮ್ಮು-ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 30ರ ಗಡುವನ್ನು ನಿಗದಿಪಡಿಸಿದೆ. ಈ ಹಿನ್ನೆಲೆಯಲ್ಲಿ ಆಯೋಗವು ಭದ್ರತಾ ವ್ಯವಸ್ಥೆ, ಕಾನೂನು ಸುವ್ಯವಸ್ಥೆ ಕುರಿತಂತೆ ಹಲವು ಸುತ್ತಿನ ಸಭೆಯನ್ನು ನಡೆಸಲು ಮುಂದಾಗಿದೆ.
ಮೂಲಗಳ ಪ್ರಕಾರ, ಕಣಿವೆ ರಾಜ್ಯದಲ್ಲಿ ಒಟ್ಟು 5 ರಿಂದ 6 ಹಂತದ ಚುನಾವಣೆ ಜರುಗಲಿದೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾರರು ಹೆಚ್ಚು ಸಕ್ರಿಯವಾಗಿ ಪಾಲ್ಗೊಂಡು ತಮ ಹಕ್ಕು ಚಲಾಯಿಸಿದ್ದರು.ಇದರಿಂದ ಉತ್ತೇಜನಗೊಂಡಿರುವ ಆಯೋಗವು ಎಷ್ಟು ಸಾಧ್ಯವೋ ಅಷ್ಟು ಶೀಘ್ರ ಚುನಾವಣೆ ನಡೆಸಲು ತೀರ್ಮಾನಿಸಿದೆ.
ಚುನಾವಣೆ ನಡೆಸಲು ಅನುಕೂಲವಾಗುವಂತೆ ಭಾರತೀಯ ವಾಯುಪಡೆಯ ಕೆಲವು ಹೆಲಿಕಾಫ್ಟರ್‌ಗಳನ್ನು ಮತ್ತು ಸುಸಜ್ಜಿತ ಸೌಲಭ್ಯವಿರುವ ಆ್ಯಂಬುಲೆನ್ಸ್ ಗಳನ್ನು ಸಜ್ಜಾಗಿಡುವಂತೆ ಆಯೋಗವು ಸರ್ಕಾರಕ್ಕೆ ಕೋರಿ ಪತ್ರ ಬರೆದಿದ್ದಾರೆ.
ಕೆಲವೆಡೆ ಭಯೋತ್ಪಾದಕರ ಹಾವಳಿ ಇರುವುದರಿಂದ ಅಂತಹ ಕಡೆ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸೇನೆಯು ಸಜ್ಜಾಗಿದೆ.ಮೂಲಗಳ ಪ್ರಕಾರ, ಜಮು-ಕಾಶೀರಕ್ಕೆ ಭಾರತೀಯ ವಾಯುಪಡೆಗೆ ಸೇರಿದ 5 ಹೆಲಿಕಾಫ್ಟರ್ ಹಾಗೂ 10 ಆ್ಯಂಬುಲೆನ್‌್ಸಗಳನ್ನು ಒದಗಿಸಲು ಸೇನಾಪಡೆ ಮುಂದಾಗಿದೆ.