Tuesday, May 28, 2024
Homeರಾಷ್ಟ್ರೀಯಸಾಂಬಾರ್ ಜಿಂಕೆ ಡಿಕ್ಕಿ ಹೊಡೆದು ಆಟೋರಿಕ್ಷಾ ಚಾಲಕ ಸಾವು

ಸಾಂಬಾರ್ ಜಿಂಕೆ ಡಿಕ್ಕಿ ಹೊಡೆದು ಆಟೋರಿಕ್ಷಾ ಚಾಲಕ ಸಾವು

ಕೊಚ್ಚಿ, ಮಾ 12: ಎರ್ನಾಕುಲಂ ಜಿಲ್ಲೆಯ ಕೋತಮಂಗಲಂ ಬಳಿ ಪ್ರಯಾಣಿಕರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಆಟೋಗೆ ವನ್ಯ ಮೃಗ ಸಾಂಬಾರ್ ಜಿಂಕೆಯೊಂದು ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟಿದ್ದಾನೆ.

ಬೆಳಗಿನ ಜಾವ 2.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಂಕೆ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದಾಗ ವಾಹನ ಪಲ್ಟಿಯಾಗಿ ಅದರಡಿ ಸಿಲುಕಿದ ಚಾಲಕನನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದು, ಅದೃಷ್ಟವಶಾತ್ ಆಟೋದಲ್ಲಿದ್ದ ಮೂವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಾಹನಕ್ಕೆ ಡಿಕ್ಕಿ ಹೊಡೆದ ನಂತರ ಜಿಂಕೆ ಅರಣ್ಯಕ್ಕೆ ಪರಾರಿಯಾಗಿದೆ ಅಪಘಾತ ಸಂಭವಿಸಿದ ರಸ್ತೆಯು ಎರಡೂ ಬದಿಗಳಲ್ಲಿ ಅರಣ್ಯದಿಂದ ಆವೃತವಾಗಿದ್ದು, ಆನೆಗಳು ಸೇರಿದಂತೆ ಪ್ರಾಣಿಗಳು ಸಾಮಾನ್ಯವಾಗಿ ಇದನ್ನು ದಾಟುತ್ತವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಪಘಾತದ ಕುರಿತು ಸ್ಥಳೀಯ ನಿವಾಸಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದರು, ಇಂತಹ ಘಟನೆಗಳನ್ನು ತಡೆಯಲು, ಜನರು ರಸ್ತೆಯುದ್ದಕ್ಕೂ ಕೆಲವು ರೀತಿಯ ಬೇಲಿಗಳನ್ನು ನಿರ್ಮಿಸಲು ಪ್ರಯತ್ನಿಸಿದರು, ಆದರೆ ಅಧಿಕಾರಿಗಳು ನಮ್ಮ ಪ್ರಯತ್ನಕ್ಕೆ ಸಹಕರಿಸುತ್ತಲ್ಲ , ಕಿವಿಗೊಡಲಿಲ್ಲ ಎಂದು ಆರೋಪಿಸಿದ್ದಾರೆ.

RELATED ARTICLES

Latest News