Tuesday, May 28, 2024
Homeಬೆಂಗಳೂರುಕ್ಷುಲ್ಲಕ ವಿಚಾರಕ್ಕೆ ಆರಂಭವಾದ ಜಗಳ ಆಟೋ ಚಾಲಕನ ಕೊಲೆಯಲ್ಲಿ ಅಂತ್ಯ

ಕ್ಷುಲ್ಲಕ ವಿಚಾರಕ್ಕೆ ಆರಂಭವಾದ ಜಗಳ ಆಟೋ ಚಾಲಕನ ಕೊಲೆಯಲ್ಲಿ ಅಂತ್ಯ

ಬೆಂಗಳೂರು, ಮೇ 3- ಕ್ಷುಲ್ಲಕ ವಿಚಾರಕ್ಕೆ ಆಟೋ ಚಾಲಕನೊಂದಿಗೆ ಜಗಳವಾಡಿದ ರೌಡಿ ಡ್ರಾಗರ್‌ನಿಂದ ಇರಿದು ಕೊಲೆ ಮಾಡಿರುವ ಘಟನೆ ಸಂಜಯನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮಧ್ಯ ರಾತ್ರಿ ನಡೆದಿದೆ. ನಾಗಶೆಟ್ಟಿಹಳ್ಳಿ ನಿವಾಸಿ ಮೂರ್ತಿ(42) ಕೊಲೆಯಾದ ಆಟೋ ಚಾಲಕ.

ಮಧ್ಯರಾತ್ರಿ 12 ಗಂಟೆ ಸುಮಾರಿನಲ್ಲಿ ನಾಗಶೆಟ್ಟಿಹಳ್ಳಿ ಬಸ್‌ ನಿಲ್ದಾಣದ ಬಳಿ ಮೂರ್ತಿ ಜೊತೆ ಸಚಿನ್‌ ಎಂಬಾತ ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿದ್ದಾನೆ. ಆ ವೇಳೆ ಮಾತಿಗೆ ಮಾತು ಬೆಳೆದಿದೆ.ಆ ಸಂದರ್ಭದಲ್ಲಿ ಸಚಿನ್‌ ಫೋನ್‌ ಮಾಡಿ ರೌಡಿ ಶರಣಪ್ಪನನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಈ ಹಿಂದೆ ಶರಣಪ್ಪನಿಗೂ ಹಾಗೂ ಮೂರ್ತಿ ನಡುವೆ ಜಗಳವಾಗಿತ್ತು.ಇವರೆಲ್ಲರೂ ಒಂದೇ ಏರಿಯಾದವರು.

ಶರಣಪ್ಪಗೆ ಮೂರ್ತಿ ವಿರುದ್ಧ ಹಳೆ ದ್ವೇಷವಿತ್ತು. ಇದೇ ಸಮಯಕ್ಕಾಗಿ ಕಾಯುತ್ತಿದ್ದ ಶರಣಪ್ಪ ಏಕಾಏಕಿ ಮೂರ್ತಿ ಜೊತೆ ಜಗಳವಾಡಿ ಡ್ರ್ಯಾಗರ್‌ನಿಂದ ಇರಿದು ಸ್ಥಳದಿಂದ ಸಚಿನ್‌ ಜೊತೆ ಪರಾರಿಯಾಗಿದ್ದಾನೆ.

ಇರಿತದಿಂದಾಗಿ ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದ ಮೂರ್ತಿಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ಸಂಜಯನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಆರೋಪಿಗಳ ಪತ್ತೆಗಾಗಿ ಶೋಧ ಕೈಗೊಂಡಿದ್ದಾರೆ.

RELATED ARTICLES

Latest News