Saturday, July 27, 2024
Homeಜಿಲ್ಲಾ ಸುದ್ದಿಗಳುಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್‌ ನುಂಗಿದ ಕೈದಿ

ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್‌ ನುಂಗಿದ ಕೈದಿ

ಶಿವಮೊಗ್ಗ,ಮೇ.3-ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಕೈದಿಯೊಬ್ಬ ಮೊಬೈಲ್‌ ನುಂಗಿದ್ದ ಘಟನೆ ಬೆಳಕಿಗೆ ಬಂದಿದೆ. ಸದ್ಯ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆಪರೇಷನ್‌ ಮೂಲಕ ಹೊಟ್ಟೆಯಲ್ಲಿ ಪತ್ತೆಯಾದ ಮೊಬೈಲ್‌ ಹೊರತೆಗೆಯಲಾಗಿದೆ.

ಇತ್ತೀಚೆಗೆ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕೈದಿ ಪರಶುರಾಮ್‌ ಪರ್ಸು ಚಿಂಗಾರಿಹೊಟ್ಟೆ ನೋವು ಕಾಣಿಸಿಕೊಂಡು ಒದ್ದಾಡುತ್ತಿದ್ದನು ಕೂಡಲೆ ಆತನನ್ನು ಕಾರಾಗೃಹದ ವೈದ್ಯರ ಬಳಿ ತೋರಿಸಿ ನಂತರ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವೈದ್ಯರು ಪರೀಕ್ಷಿಸಿದಾಗ ಹೊಟ್ಟೆಯಲ್ಲಿ ಏನಿದೆ ಎಂದು ಕೇಳಿದಾಗ ಕಲ್ಲು ಇದೆ ಎಂದು ಹೇಳಿದ್ದ. ಎಕ್ಸರೇ ಮಾಡಿ ನೋಡಿದಾಗಲೂ ಹೊಟ್ಟೆಯಲ್ಲಿ ಏನಿದೆ ಎಂಬುದು ಸರಿಯಾಗಿ ತಿಳಿದು ಬಂದಿರಲಿಲ್ಲ,

ಕೊನೆಗೆ ಎಂಡೋಸ್ಕೊಪಿ ಮಾಡಲು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫಾರಸು ಮಾಡಲಾಗಿತ್ತು. ಇದರಿಂದ ಈತನನ್ನು ಶಿವಮೊಗ್ಗ ಕೇಂದ್ರ ಕಾರಾಗೃಹದ ವೈದ್ಯಾಧಿಕಾರಿ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿತ್ತು.

ಬೆಂಗಳೂರಿನ ಕೇಂದ್ರ ಕಾರಾಗೃಹದದಿಂದ ಹಿರಿಯ ಮುಖ್ಯ ವೈದ್ಯಾಧಿಕಾರಿಗಳು ಚಿಕಿತ್ಸೆನೀಡಿ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಬಳಿಕ ಪರಶುರಾಮ್‌ ಹೊಟ್ಟೆಯಲ್ಲಿ ಮೊಬೈಲ್‌ ಕಂಡುಬಂದ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಏಪ್ರಿಲ್‌ 25 ರಂದು ಶಸ್ತ್ರಚಿಕಿತ್ಸೆ ಮಾಡಿ, ಹೊಟ್ಟೆಯಿಂದ 1 ಮೊಬೈಲ್‌ ಫೋನ್‌ ಹೊರ ತೆಗೆದಿದ್ದಾರೆ. ಸದ್ಯ ಪರಶುರಾಮ್‌ ಚೇತರಿಕೆ ಕಂಡಿದ್ದಾನೆಂದು ಮೂಲಗಳು ತಿಳಿಸಿವೆ. ಈತ ಯಾವಾಗ ಯಾವ ಕಾರಣಕ್ಕೆ ಮೊಬೈಲ್‌ ನುಂಗಿದ್ದ ಎಂಬುದು ತಿಳಿದು ಬಂದಿಲ್ಲ ತನಿಖೆ ಆರಂಭಿಸಲಾಗಿದೆ.

RELATED ARTICLES

Latest News