Saturday, February 24, 2024
Homeರಾಷ್ಟ್ರೀಯಶ್ರೀರಾಮ ಪ್ರಾಣ ಪ್ರತಿಷ್ಠಾ ವಿಧಿ ವಿಧಾನಗಳಿಗೆ ಇಂದಿನಿಂದ ಚಾಲನೆ

ಶ್ರೀರಾಮ ಪ್ರಾಣ ಪ್ರತಿಷ್ಠಾ ವಿಧಿ ವಿಧಾನಗಳಿಗೆ ಇಂದಿನಿಂದ ಚಾಲನೆ

ನವದೆಹಲಿ,ಜ.16- ಆಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಗಳ ವಿಧಿ ವಿಧಾನಗಳಿಗೆ ಇಂದಿನಿಂದ ಚಾಲನೆ ದೊರೆಯಲಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಭರದ ಸಿದ್ಧತೆಗಳು ನಡೆಯುತ್ತಿದ್ದು, ಇಂದು ರಾಮಲಲ್ಲಾ ಮಂದಿರದಲ್ಲಿ ಇಂದಿನಿಂದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

ಜ. 22 ರಂದು ಅಯೋಧ್ಯೆಯಲ್ಲಿನ ಅವರ ಹೊಸ ಭವ್ಯ ಮಂದಿರದಲ್ಲಿ ರಾಮ್ ಲಲ್ಲಾ ಅವರ ಕಾರ್ಯಕ್ರಮ ಮತ್ತು ಪೂಜಾ ವಿಧಿವಿಧಾನಗಳು ಇಂದಿನಿಂದ ಪ್ರಾರಂಭವಾಗಲಿದ್ದು, ಜನವರಿ 18 ರಂದು ಗರ್ಭಗುಡಿಯಲ್ಲಿ ವಿಗ್ರಹವನ್ನು ಇರಿಸಲಾಗುವುದು.

ರಾಮಮಂದಿರ ಉದ್ಘಾಟನೆ ಸಮಾರಂಭದಲ್ಲಿ ಕರ್ನಾಟಕದ ವೀಣಾವಾದನ

ದೇವಾಲಯದ ಟ್ರಸ್ಟ್‍ನಿಂದ 7,000 ಕ್ಕೂ ಹೆಚ್ಚು ಜನರನ್ನು ಆಹ್ವಾನಿಸಲಾಗಿದೆ ಮತ್ತು ಅವರಲ್ಲಿ ಕ್ರಿಕೆಟ್ ದಂತಕಥೆಗಳಾದ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ, ಬಾಲಿವುಡ್ ಸೂಪರ್‍ಸ್ಟಾರ್ ಅಮಿತಾಬ್ ಬಚ್ಚನ್ ಸೇರಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳಲಿರುವ ದೇವಸ್ಥಾನದಲ್ಲಿ ನಡೆಯುವ ಅದ್ಧೂರಿ ಸಮಾರಂಭಕ್ಕೆ ನಗರ ಸಜ್ಜುಗೊಳ್ಳುತ್ತಿದೆ.

RELATED ARTICLES

Latest News