Friday, May 24, 2024
Homeಅಂತಾರಾಷ್ಟ್ರೀಯನ್ಯೂಯಾರ್ಕ್‌ನ ಕೊಲಂಬಿಯಾ ವಿವಿಯಲ್ಲಿ ಆಜಾದಿ ಘೋಷಣೆ ಕೂಗಿದ ವಿದ್ಯಾರ್ಥಿಗಳ ಸೆರೆ

ನ್ಯೂಯಾರ್ಕ್‌ನ ಕೊಲಂಬಿಯಾ ವಿವಿಯಲ್ಲಿ ಆಜಾದಿ ಘೋಷಣೆ ಕೂಗಿದ ವಿದ್ಯಾರ್ಥಿಗಳ ಸೆರೆ

ವಾಷಿಂಗ್ಟನ್, ಏ.23- ಕೊಲಂಬಿಯಾ ವಿಶ್ವವಿದ್ಯಾನಿಯದಲ್ಲಿ ಪ್ಯಾಲೆಸ್ತೈನ್ ಪರ ಪ್ರತಿಭಟನೆಯಲ್ಲಿ ಆಜಾದಿ ಘೋಷಣೆಗಳು ಮೊಳಗಿವೆ. ಕೊಲಂಬಿಯಾ ವಿಶ್ವವಿದ್ಯಾನಿಲಯವು ನ್ಯೂಯಾರ್ಕ್ ನಗರದಲ್ಲಿ ಪ್ಯಾಲೆಸ್ತೈನ್ ಪರ ಪ್ರತಿಭಟನೆಗಳ ಕೇಂದ್ರವಾಗಿದೆ. ಈ ವಾರದ ಆರಂಭದಲ್ಲಿ ವಿವಿಯ ಆವರಣದಿಂದ ನೂರೆಂಟು ಪ್ರತಿಭಟನಾಕಾರರನ್ನು ಬಂಧಿಸಿದ ಬಳಿಕ ಪ್ರತಿಭಟನೆಗಳು ಐವಿ ಲೀಗ್ ಯೂನಿವರ್ಸಿಟಿಯಲ್ಲಿ ಮುಂದುವರೆದಿವೆ.

ಈಗ ಎಕ್ಸ್ (ಹಿಂದಿನ ಟ್ವೀಟರ್) ವೇದಿಕೆಯಲ್ಲಿ ಕಾಣಿಸಿಕೊಂಡಿರುವ ವಿಡಿಯೋವೊಂದು ಕೊಲಂಬಿಯಾ ವಿಶ್ವವಿದ್ಯಾನಿಲಯ ಆವರಣದಲ್ಲಿ ಸ್ವಾತಂತ್ರ್ಯ ಘೋಷಣೆಗಳು ಅನುರಣಿಸುತ್ತಿರುವುದನ್ನು ತೋರಿಸುತ್ತಿವೆ.

ದಿನಾಂಕ ನಮೂದಿಸಿಲ್ಲದ ಈ ವಿಡಿಯೋವನ್ನು ಯಹೂದಿಗಳ ಮೇಲಿನ ದ್ವೇಷ ವನ್ನು ದಾಖಲಿಸುವಂತೆ ಪೊಸ್ಟ್ ಮಾಡಲಾಗಿದ್ದು, ಮಹಿಳೆಯೊಬ್ಬರು ಹಿಂದಿಯಲ್ಲಿ ಪ್ಯಾಲಸ್ತೈನ್ ಪರ ಘೋಷಣೆಗಳನ್ನು ಕೂಗುತ್ತಿರುವುದನ್ನು ಮತ್ತು ಸಹ ಪ್ರತಿಭಟನಾಕಾರರು ಆಅಜಾದಿ ಘೋಷಣೆಯನ್ನು ಒಕ್ಕೊರಲಿನಿಂದ ಕೂಗುತ್ತಿರುವುದನ್ನು ಪ್ರದರ್ಶಿಸುತ್ತದೆ.

ಅರೆ ಹಂ ಕ್ಯಾ ಚಾಹತೇ, ಆಜಾದಿ… ಪ್ಯಾಲಸ್ತೀನ್ಕೀ ಆಜಾದಿ, ಅರೆ ಚೀನ್ ಕೇ ಲೈಂಗ್ಹೇ ಆಜಾದಿ.. ಹೈ ಹಕ್ ಹಮಾರಾ ಆಜಾದಿ… (ನಮಗೇನು ಬೇಕು, ಸ್ವಾತಂತ್ರ್ಯ… ಪ್ಯಾಲಸ್ತೈನ್ ಸ್ವಾತಂತ್ರ್ಯ, ನಮ್ಮ ಹಕ್ಕಿನೊಂದಿಗೆ ನಮ್ಮ ಈ ಸ್ವಾತಂತ್ರ್ಯವನ್ನು ಪಡೆದುಕೊಳ್ಳುತ್ತೇವೆ) ಎಂದು ಈ ಮಹಿಳೆ ಕೂಗುತ್ತಿರುವುದು ವಿಡಿಯೋದಲ್ಲಿ ಗೋಚರಿಸುತ್ತದೆ. ಹಿನ್ನೆಲೆಯಲ್ಲಿ ಲೋ ಮೆಮೋರಿಯಲ್ ಗ್ರಂಥಾಲಯವಿದೆ.

ಭಾರತೀಯ ಮೂಲದವಳಂತೆ ಕಾಣುವ ಈ ಮಹಿಳೆ ಹಣೆಯಲ್ಲಿ ಬಿಂದಿ ಧರಿಸಿದ್ದಾಳೆ. ಬೈಡೆನ್ ಸುನ್ಲೇ ಆಜಾದಿ… ನೆತನ್ಯಾಹು ಸುನ್ಲೆ ಆಜಾದಿ… ಮೋದಿ ಸುನ್ಲೆ ಆಜಾದಿ… ಎಂದು ಘೋಷಣೆ ಕೂಗಿದ್ದಾಳೆ. ಇಂಡಿಯಾ ಟು ಡೇ ನಡೆಸಿರುವ ಈ ವಿಡಿಯೋದ ದಿನಾಂಕ ಮತ್ತು ಅಧಿಕೃತತೆ ದೃಢಪಟ್ಟಿಲ್ಲ.

ಇದೇ ರೀತಿಯ ಆಜಾದಿ ಘೋಷಣೆಯನ್ನು 2001ರ ಸಂಸತ್ ದಾಳಿಯ ರೂವಾರಿ ಕಾಶ್ಮೀರ್ ಪ್ರತ್ಯೇಕತಾವಾದಿ ಆಫ್ಜಲ್ ಗುರುವಿನ ಮರಣದಂಡನೆ ವಾರ್ಷಿಕೋತ್ಸವದಂದು ಎಡ ಪಂಥೀಯ ವಿದ್ಯಾರ್ಥಿಗಳು ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಮೊಳಗಿಸಿದ್ದರು. ಈ ಹಿಂದೆ ರಾಜ್ಯ ಸ್ಥಾನಮಾನ ಹೊಂದಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ಬಂಡುಕೋರತನ ಮಿತಿಮೀರಿದ್ದಾಗ ಕೂಡ ಈ ರೀತಿಯ ಘೋಷಣೆಗಳು ಮೊಳಗಿದ್ದವು.

ಈ ಮುನ್ನ ಕೊಲಂಬಿಯಾ ವಿವಿ ಅಧ್ಯಕ್ಷ ನೆಮಾತ್ ಮಿನೌಚೇ ಶಫೀಕ್ ಪ್ರತಿಭಟನಾ ಕಾರರನ್ನು ತೆರವು ಗೊಳಿಸುವಂತೆ ನ್ಯೂಯಾರ್ಕ್ ಪೊಲೀಸ್ ಇಲಾಖೆಗೆ ಮನವಿ ಮಾಡಿದ ಬಳಿಕ ಕಳೆದ ಗುರುವಾರದಂದು ನೂರೆಂಟು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿತ್ತು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕೆಲವು ವಿದ್ಯಾರ್ಥಿಗಳು ತಮ್ಮನ್ನು ಕೊಲಂಬಿಯಾ ವಿವಿಯ ಬರ್ನಾರ್ಡ್ ಕಾಲೇಜಿನಿಂದ ಅಮಾನತು ಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.ಈ ಪ್ರತಿಭಟನಾಕಾರರಲ್ಲಿ ಒಬ್ಬರಾಗಿರುವ ಇಸ್ರಾ ಹಿರ್ಸಿ ಅವರು ವಿವಾದಾತ್ಮಕ ಡೆಮೊಕ್ರಾಟ್ ಮುಖಂಡ ಇಲ್ಹಾನ್ ಓಮರ್ ಅವರ ಪುತ್ರಿಯಾಗಿದ್ದಾರೆ.

RELATED ARTICLES

Latest News