Thursday, December 5, 2024
Homeರಾಷ್ಟ್ರೀಯ | Nationalದುಷ್ಮನ್‌ಗಳಾಗಿದ್ದ ಸಲ್ಮಾನ್-ಶಾರುಖ್​ರನ್ನ ಒಂದು ಮಾಡಿದ್ದ ಬಾಬಾ ಸಿದ್ದಿಕ್

ದುಷ್ಮನ್‌ಗಳಾಗಿದ್ದ ಸಲ್ಮಾನ್-ಶಾರುಖ್​ರನ್ನ ಒಂದು ಮಾಡಿದ್ದ ಬಾಬಾ ಸಿದ್ದಿಕ್

Baba Siddique was instrumental in Shah Rukh Khan-Salman Khan patch up

ಮುಂಬೈ,ಅ.13- ಬಾಲಿವುಡ್‌ನ ಇಬ್ಬರು ಘಟಾನುಘಟಿ ನಾಯಕ ನಟರಾಗಿರುವ ಸಲ್ಮಾನ್‌ಖಾನ್ ಮತ್ತು ಶಾರುಖ್ ಖಾನ್ ನಡುವಿನ ದ್ವೇಷ ಕೊನೆಗಾಣಿಸುವಲ್ಲಿ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಪ್ರಮುಖರಾಗಿದ್ದರು ಎನ್ನುವ ಅಂಶ ಇದೀಗ ಗೊತ್ತಾಗಿದೆ.

ನಿನ್ನೆ ಹಂತಕರ ಗುಂಡಿಗೆ ಬಲಿಯಾದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಅವರು ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅವರ ಹೋರಾಟವನ್ನು ಕೊನೆಗೊಳಿಸುವಲ್ಲಿ ಯಶಸ್ವಿಯಾಗಿದ್ದರು.

2008 ರಲ್ಲಿ ಕತ್ರಿನಾ ಕೈಫ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಲ್ಮಾನ್‌ಖಾನ್ ಮತ್ತು ಶಾರುಖ್ ಖಾನ್ ನಡುವಿನ ಸಂಘರ್ಷ ಉಂಟಾಗಿ ಇಬ್ಬರು ಪರಸ್ಪರ ದ್ವೇಷ ಬೆಳೆಸಿಕೊಂಡಿದ್ದರು. ಇಬ್ಬರ ನಡುವಿನ ತೀವ್ರ ವಾಗ್ವಾದದ ನಂತರ ಅವರು ಬಹಳ ವರ್ಷಗಳ ಕಾಲ ಪರಸ್ಪರ ಮಾತನಾಡಿರಲಿಲ್ಲ. 2013 ರಲ್ಲಿ, ಬಾಬಾ ಸಿದ್ದಿಕ್ ಅವರನ್ನು ಮತ್ತೆ ಒಟ್ಟಿಗೆ ಸೇರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

2013 ರಲ್ಲಿ, ಬಾಬಾ ಸಿದ್ದಿಕ್ ಇಫ್ಥಾರ್ ಕೂಟವನ್ನು ಆಯೋಜಿಸಿದ್ದರು, ಇದರಲ್ಲಿ ಅನೇಕ ಉದ್ಯಮಿಗಳು ಭಾಗವಹಿಸಿದ್ದರು. ಇಲ್ಲಿ ಸಲ್ಮಾನ್ ಮತ್ತು ಶಾರುಖ್ ಖಾನ್ ಕೂಡ ಅಗಮಿಸಿದ್ದರು. ಆಗ ಸಿದ್ದಿಕ್ ಅವರು ಇಬ್ಬರ ನಡುವಿನ ವೈಷಮ್ಯವನ್ನು ಕೊನೆಗಾಣಿಸಿ ಇಬ್ಬರು ಮತ್ತೆ ಮಾತನಾಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಈ ಘಟನೆಯು ಇಬ್ಬರು ನಟರ ಐದು ವರ್ಷಗಳ ಸುದೀರ್ಘ ವೈಷಮ್ಯವನ್ನು ಕೊನೆಗೊಳಿಸಿತ್ತು.

RELATED ARTICLES

Latest News