Monday, February 26, 2024
Homeಬೆಂಗಳೂರುಪಶ್ಚಿಮ ವಿಭಾಗ ಪೊಲೀಸರ ಭರ್ಜರಿ ಬೇಟೆ : 2.75 ಕೋಟಿ ರೂ.ಮೌಲ್ಯದ ವಾಹನಗಳ ವಶ

ಪಶ್ಚಿಮ ವಿಭಾಗ ಪೊಲೀಸರ ಭರ್ಜರಿ ಬೇಟೆ : 2.75 ಕೋಟಿ ರೂ.ಮೌಲ್ಯದ ವಾಹನಗಳ ವಶ

ಬೆಂಗಳೂರು,ಡಿ.1-ಪಶ್ಚಿಮ ವಿಭಾಗದ ಪೊಲೀಸ್ ಠಾಣೆಗಳಲ್ಲಿ ವರದಿಯಾಗಿದ್ದ ದ್ವಿಚಕ್ರ ವಾಹನ ಕಳವು ಪ್ರಕರಣಗಳ ಪೈಕಿ 83 ಪ್ರಕರಣಗಳಲ್ಲಿ 118 ಮಂದಿಯನ್ನು ಬಂಧಿಸಿ 2.75 ಕೋಟಿ ರೂ. ಮೌಲ್ಯದ 426 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ 291 ದ್ವಿಚಕ್ರ ವಾಹನಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಗಿದೆ.

ಇಂದು ನಗರದ ಸಿಎಆರ್ ಕೇಂದ್ರ ಸ್ಥಾನದಲ್ಲಿ ನಡೆದ ಪ್ರಾಪರ್ಟಿ ಪರೇಡ್‍ನಲ್ಲಿ ಪಶ್ಚಿಮ ವಿಭಾಗದ 133 ದ್ವಿಚಕ್ರ ವಾಹನಗಳು, ಕೇಂದ್ರ ವಿಭಾಗದ 38 ವಾಹನಗಳು, ಉತ್ತರ ವಿಭಾಗದ 163, ದಕ್ಷಿಣ ವಿಭಾಗದ 88, ಪೂರ್ವ ವಿಭಾಗದ 37, ಈಶಾನ್ಯ ವಿಭಾಗದ 5, ಆಗ್ನೇಯ ವಿಭಾಗದ 78 ಮತ್ತು ವೈಟ್‍ಫೀಲ್ಡ್ ವಿಭಾಗದ 77 ವಾಹನಗಳು ಸೇರಿದಂತೆ ಒಟ್ಟು 619 ವಾಹನಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಉಪ್ಪಾರಪೇಟೆ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿ 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡರೆ ಸಿಟಿ ಮಾರ್ಕೆಟ್ ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿ 13 ವಾಹನಗಳು, ಕಲಾಸಿಪಾಳ್ಯ 7 ಮಂದಿಯನ್ನು ಬಂಧಿಸಿ 18 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಕಾಟನ್‍ಪೇಟೆ ಠಾಣೆ ಪೊಲೀಸರು 13 ಮಂದಿಯನ್ನು ಬಂಧಿಸಿ 55 ವಾಹನಗಳನ್ನು ವಶಪಡಿಸಿಕೊಂಡರೆ ಚಾಮರಾಜಪೇಟೆ ಆರು ಮಂದಿಯನ್ನು ಬಂಧಿಸಿ ಆರು ವಾಹನಗಳು, ಜೆಜೆನಗರ ಠಾಣೆ ಪೊಲೀಸರು 9 ಮಂದಿಯನ್ನು ಬಂಧಿಸಿ 37 ವಾಹನಗಳನ್ನು, ಬ್ಯಾಟರಾಯನಪುರ ಠಾಣೆ ಪೊಲೀಸರು 5 ಮಂದಿಯನ್ನು ಬಂಧಿಸಿ 47 ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಚಂದ್ರಲೇಔಟ್ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ 14 ವಾಹನಗಳು, ಆರ್‍ಆರ್‍ನಗರ ಠಾಣೆ ಪೊಲೀಸರು ಏಳು ಮಂದಿಯನ್ನು ಬಂಧಿಸಿ 16 ವಾಹನಗಳು, ಕೆಂಗೇರಿ ಠಾಣೆ ಪೊಲೀಸರು 12 ಮಂದಿಯನ್ನು ಬಂಧಿಸಿ 22 ವಾಹನಗಳು, ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಆರು ಮಂದಿಯನ್ನು ಬಂಧಿಸಿ 30 ವಾಹನಗಳು, ಬ್ಯಾಡರಹಳ್ಳಿ ಠಾಣೆ ಪೊಲೀಸರು ಐದು ಮಂದಿಯನ್ನು ಬಂಧಿಸಿ 25 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಜ್ಞಾನಭಾರತಿ ಠಾಣೆ ಪೊಲೀಸರು 9 ಮಂದಿಯನ್ನು ಬಂಸಿ 25 ವಾಹನಗಳನ್ನು, ವಿಜಯನಗರ ಠಾಣೆ ಪೊಲೀಸರು 7 ಮಂದಿಯನ್ನು ಬಂಧಿಸಿ 29 ವಾಹನಗಳು, ಮಾಗಡಿ ರಸ್ತೆ ಠಾಣೆ ಪೊಲೀಸರು ಒಬ್ಬನನ್ನು ಏಳು ವಾಹನಗಳನ್ನು ಹಾಗೂ ಕೆಪಿ ಅಗ್ರಹಾರ ಠಾಣೆ ಪೊಲೀಸರು ಮೂವರನ್ನು ಬಂಧಿಸಿ 13 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬಸವೇಶ್ವರನಗರ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿ 11 ವಾಹನಗಳನ್ನು ವಶಕ್ಕೆ ಪಡೆದುಕೊಂಡರೆ ಕಾಮಾಕ್ಷಿ ಠಾಣೆ ಪೆಪೊಲೀಸರು 11 ಮಂದಿಯನ್ನು ಬಂಧಿಸಿ 36 ವಾಹನಗಳು ಹಾಗೂ ಗೋವಿಂದರಾಜನಗರ ಠಾಣೆ ಪೊಲೀಸರು 6 ಮಂದಿಯನ್ನು ಬಂಧಿಸಿ 15 ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ನಿಜ್ಜಾರ್ ಹತ್ಯೆ ಹಿಂದೆ ಭಾರತದ ಕೈವಾಡವಿಲ್ಲ : ಶ್ರೀನಿವಾಸನ್


ದ್ವಿಚಕ್ರ ವಾಹನ ಪಾರ್ಕಿಂಗ್ ವೇಳೆ ಇರಲಿ ಎಚ್ಚರ:ಆಯುಕ್ತರು
ಬೆಂಗಳೂರು,ಡಿ.1- ದ್ವಿಚಕ್ರ ವಾಹನಗಳನ್ನು ನಿಲ್ಲಿಸುವ ಸಂದರ್ಭದಲ್ಲಿ ಸುರಕ್ಷತೆ ಬಗ್ಗೆ ಸಾರ್ವಜನಿಕರು ಮುಂಜಾಗೃತೆ ಕ್ರಮ ವಹಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ದ್ವಿಚಕ್ರವಾಹನಗಳ ಕಳ್ಳತನ ಹೆಚ್ಚಾಗಿದ್ದು, ಕಳ್ಳತನವಾಗುವ ವಾಹನಗಳನ್ನು ಸರಗಳ್ಳತನ , ಮೊಬೈಲ್ ಕಳ್ಳತನ, ದರೋಡೆ ಸೇರಿದಂತೆ ಹಲವು ಅಪರಾಧ ಕೃತ್ಯಗಳಿಗೆ ಆರೋಪಿಗಳು ಬಳಕೆ ಮಾಡುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ 658ಕ್ಕೂ ಹೆಚ್ಚು ದ್ವಿಚಕ್ರವಾಹನಗಳನ್ನು ಪತ್ತೆ ಮಾಡಿದ್ದಾರೆ ಎಂದು ಅವರು ವಿವರಿಸಿದರು.

ಪತ್ತೆಹಚ್ಚಿರುವ ವಾಹನಗಳ ಪೈಕಿ ಐಷಾರಾಮಿ ಹಾಗೂ ದೊಡ್ಡ ಮೊತ್ತದ ಸುಮಾರು 40-50 ಲಕ್ಷ ಬೆಲೆ ಬಾಳುವ ಡಿಕ್ಯುಟಿ ವಾಹನಗಳು ಇವೆ ಎಂದು ಹೇಳಿದರು.

ಸಾರ್ವಜನಿಕರು ದ್ವಿಚಕ್ರ ವಾಹನಗಳನ್ನು ನಿಲ್ಲಿಸುವಾಗ ಸುರಕ್ಷತೆ ಬಗ್ಗೆ ಗಮನಹರಿಸಬೇಕು. ಸರಿಯಾದ ರೀತಿ ಲಾಕ್ ಮಾಡುವುದು, ರಾತ್ರಿ ವೇಳೆ ಮನೆ ಮುಂದೆ ಅಥವಾ ರಸ್ತೆ ಬದಿ ವಾಹನ ನಿಲ್ಲಿಸುವರು ಅಲಾರಾಮ್, ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕು. ಇಂತಹ ಕ್ರಮಗಳಿಂದ ಕಳವಾದ ವಾಹನಗಳ ಪತ್ತೆಗೆ ಸಹಾಯವಾಗಲಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

RELATED ARTICLES

Latest News