Sunday, April 28, 2024
Homeಬೆಂಗಳೂರುಕೊರಿಯರ್ ಪಾರ್ಸಲ್ ಹೆಸರಲ್ಲಿ ಸೈಬರ್ ವಂಚನೆ : 8 ಮಂದಿ ಬಂಧನ

ಕೊರಿಯರ್ ಪಾರ್ಸಲ್ ಹೆಸರಲ್ಲಿ ಸೈಬರ್ ವಂಚನೆ : 8 ಮಂದಿ ಬಂಧನ

ಬೆಂಗಳೂರು,ಡಿ.1- ಫೆಡೆಕ್ಸ್ ಕೊರಿಯರ್ ಪಾರ್ಸಲ್ ಹೆಸರಿನಲ್ಲಿ ಸೈಬರ್ ವಂಚನೆ ಮಾಡುತ್ತಿದ್ದ 8 ಮಂದಿ ಆರೋಪಿಗಳನ್ನು ಉತ್ತರ ವಿಭಾಗದ ಸಿಇಎನ್ ಸೈಬರ್ ಕ್ರೈಮ್ ಠಾಣೆ ಪೊಲೀಸರು ಬಂಧಿಸಿ 13.17 ಲಕ್ಷ ಹಣ ಹಾಗೂ ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ 19 ಲಕ್ಷ ಹಣ ಪ್ರೀಜ್ ಮಾಡಿದ್ದಾರೆ.

ಅಲ್ಲದೆ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ 11 ಮೊಬೈಲ್, ವಿವಿಧ ಬ್ಯಾಂಕ್‍ನ 148 ಖಾತೆಗಳ ಪ್ರೀಜ್, ಚೆಕ್‍ಬುಕ್, ಪಾಸ್‍ಬುಕ್ ಮತ್ತು ಎಟಿಎಂ ಕಾರ್ಡ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಮಲ್ಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ.10ರಂದು ವಾಟ್ಸ್‍ಫ್ ಆಡಿಯೋ ಕಾಲ್‍ನಿಂದ ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿ, ತಾವು ಮುಂಬೈ ಕ್ರೈಂ ಬ್ಯ್ರಾಂಚ್ ಪೊಲೀಸರೆಂದು ಪರಿಚಯಿಸಿಕೊಂಡಿದ್ದಾರೆ.

ನಿಮ್ಮ ಪತ್ನಿಯ ಹೆಸರಿನಲ್ಲಿ ಫೆಡೆಕ್ಸ್ ಕೊರಿಯರ್‍ನಲ್ಲಿ ಮುಂಬೈನಿಂದ ಥೈಲ್ಯಾಂಡ್ ದೇಶಕ್ಕೆ ಕಾನೂನುಬಾಹಿರ ಪಾರ್ಸಲ್‍ಗಳಾದ 4 ಎಕ್ಪೈರಿ ಪಾಸ್‍ಪೋರ್ಟ್, 2.35 ಕೆ.ಜಿ ಬಟ್ಟೆಗಳು, 2 ಪೆನ್‍ಡ್ರೈವ್, 1 ಲ್ಯಾಪ್‍ಟಾಪ್ ಕ್ರೆಡಿಟ್ ಕಾರ್ಡ್ ಮತ್ತು ಬ್ಯಾಂಕ್ ದಾಖಲಾತಿಗಳು ಹಾಗೂ 140 ಗ್ರಾಂ ಎಂಡಿಎಂಎ ಮಾದಕ ವಸ್ತುಗಳು ಸಿಕ್ಕಿವೆ ಎಂದು ಹೇಳಿದ್ದಾರೆ.

ಅಲ್ಲದೆ ನಿಮ್ಮ ಹೆಸರಿನಲ್ಲಿ ಹಲವು ಬ್ಯಾಂಕ್ ಖಾತೆಗಳನ್ನು ತೆರೆದು ಅದರ ಮೂಲಕ ಮನಿ ಲಾಂಡರಿಂಗ್ ಆಗುತ್ತಿರುವ ಬಗ್ಗೆ ಮಾಹಿತಿ ಇದೆ. ಆದ ಕಾರಣ ನಿಮ್ಮ ಬ್ಯಾಂಕ್ ಖಾತೆಯನ್ನು ಆರ್.ಬಿ.ಐ ನವರು ಪ್ರೀಜ್ ಮಾಡುವ ಸಂಭವವಿದೆ ಎಂದಿದ್ದಾರೆ.

ಅಷ್ಟೇ ಅಲ್ಲದೆ ನಿಮ್ಮ ಬ್ಯಾಂಕ್ ಸ್ಟೆಟ್‍ಮೆಂಟ್‍ಅನ್ನು ತನಿಖೆಗಾಗಿ ವಿಚಾರಿಸಬೇಕಾಗಿದೆ ಎಂದು ಆ ವ್ಯಕ್ತಿಯನ್ನು ನಂಬಿಸಿ ಬ್ಯಾಂಕ್ ಖಾತೆ ಮಾಹಿತಿ ಪಡೆದು ಹಾಗೂ ತನಿಖಾ ವಿಚಾರಣಾ ಸಲುವಾಗಿ ನೀವು ಮುಂಗಡ ಹಣ ನೀಡಬೇಕು. ತನಿಖೆ ಮುಗಿದ ನಂತರ ಹಣವನ್ನು ವಾಪಸು ತಮ್ಮ ಖಾತೆಗೆ ಜಮಾ ಮಾಡುವುದಾಗಿ ಹೇಳಿದ್ದಾರೆ.
ವಂಚಕರು ಈ ವ್ಯಕ್ತಿಯಿಂದ ಹೆಚ್.ಡಿಎಫ್.ಸಿ ಬ್ಯಾಂಕ್ ಖಾತೆಯಿಂದ 66 ಲಕ್ಷ ಮತ್ತು ಜನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಖಾತೆಯಿಂದ 42 ಲಕ್ಷ ಸೇರಿದಂತೆ ಒಟ್ಟು 1 ಕೋಟಿ 8 ಲಕ್ಷ ರೂ.ಗಳನ್ನು ವರ್ಗಾಯಿಸಿಕೊಂಡು ವಂಚನೆ ಮಾಡಿದ್ದಾರೆ. ಈ ಬಗ್ಗೆ ವಂಚನೆಗೊಳಗಾದ ವ್ಯಕ್ತಿ ಸಿಇಎನ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಐಟಿ ಆಕ್ಟ್ ಮತ್ತು ವಂಚನೆ ಪ್ರಕರಣ ದಾಖಲಾಗಿತ್ತು.

ಬಾಂಬ್ ಬೆದರಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ : ಪರಮೇಶ್ವರ್

ತಂಡ ರಚನೆ: ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹಿರಿಯ ಅಧಿಕಾರಿಗಳು ಸಿಇಎನ್ ಕ್ರೈಂ ಪೊಲೀಸ್ ಇನ್ಸ್‍ಪೆಕ್ಟರ್ ಶಿವರತ್ನ ಅವರ ನೇತೃತ್ವದಲ್ಲಿ ಒಂದು ವಿಶೇಷ ತಂಡ ರಚಿಸಿದ್ದು, ಈ ತಂಡವು ಕಾರ್ಯ ಪ್ರವೃತ್ತರಾಗಿ ಪ್ರಕರಣದ ತನಿಖೆ ಕೈಗೊಂಡರು.

ಕಾರ್ಯಚರಣೆ ವೇಳೆ ದೊರೆತ ಮಾಹಿತಿ ಮೇರೆಗೆ ಫೆಡೆಕ್ಸ್ ಕೋರಿಯರ್ ಪಾರ್ಸಲ್ ಹೆಸರಿನಲ್ಲಿ ವಂಚಿಸಿ ಖಾತೆಯಿಂದ ವರ್ಗಾವಣೆ ಮಾಡಿಸಿಕೊಂಡಿದ್ದ 1.80 ಕೋಟಿ ರೂ.ಗಳನ್ನು ನಂತರ ಇದೇ ಖಾತೆಯಿಂದ 9.34 ಲಕ್ಷ ಅರೋಪಿಗಳ ಖಾತೆಗೆ ಜಮೆಯಾಗಿರುವುದನ್ನು ಪತ್ತೆಹಚ್ಚಿದ್ದಾರೆ.

ಆ ಹಣವನ್ನು ದಾವಣಗೆರೆಯ ಆರ್‍ಬಿಎಲ್ ಬ್ಯಾಂಕ್‍ನಲ್ಲಿ ವಿತ್ ಡ್ರಾ ಮಾಡಿದ್ದು, ಈ ಬಗ್ಗೆ ಸಿಸಿ ಟಿವಿ ದೃಶ್ಯಾವಳಿಯನ್ನು ಸಂಗ್ರಹಿಸಿ ಇದರ ಮಾಹಿತಿಯ ಆಧಾರದ ಮೇಲೆ ಈ ಕೃತ್ಯದಲ್ಲಿ ಭಾಗಿಯಾಗಿದ್ದ 8 ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಆರೋಪಿಗಳು ನೀಡಿದ ಮಾಹಿತಿ ಮೇರೆಗೆ 13.17 ಲಕ್ಷ ನಗದು, ವಿವಿಧ ಬ್ಯಾಂಕ್ ಖಾತೆಯಲ್ಲಿ 19 ಲಕ್ಷ ಹಣ ಹಾಗೂ ವಿವಿಧ ಬ್ಯಾಂಕ್‍ನ 148 ಖಾತೆಗಳ ಪ್ರೀಜ್ ಮಾಡಿದ್ದು, ಆ ಬ್ಯಾಂಕ್‍ಗಳ ಚೆಕ್ ಬುಕ್, ಪಾಸ್‍ಬುಕ್ ಮತ್ತು ಎಟಿಎಂ ಕಾರ್ಡ್‍ಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ 11 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳ ಬಂಧನದಿಂದ ಎನ್‍ಸಿಆರ್‍ಬಿ ಫೋರ್ಟಲ್‍ನಲ್ಲಿ ದಾಖಲಾಗಿದ್ದ ಸುಮಾರು 75 ಸೈಬರ್ ವಂಚನೆಯ ಪ್ರಕರಣಗಳು ಪತ್ತೆಯಾಗಿವೆ. ಸುಮಾರು 4,500 ರೂ. ಬೆಲೆ ಬಾಳುವ ಯುಎಸ್‍ಡಿಟಿಯನ್ನು ಪ್ರೀಜ್ ಮಾಡಲಾಗಿರುತ್ತದೆ. ಈ ಆರೋಪಿಗಳ ಬಂಧನದಿಂದ ಬೆಂಗಳೂರು ನಗರ ಉತ್ತರ ವಿಭಾಗದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯ 2 ಪ್ರಕರಣಗಳು ಪತ್ತೆಯಾಗಿರುತ್ತವೆ.

RELATED ARTICLES

Latest News