Friday, January 17, 2025
Homeರಾಷ್ಟ್ರೀಯ | Nationalಚುನಾವಣೆ ಪ್ರಚಾರದ ವೇಳೆ ಆರ್ಥಿಕ ಸಮೀಕ್ಷೆ ಕುರಿತ ಹೇಳಿಕೆ : ರಾಹುಲ್‌ ಗಾಂಧಿಗೆ ಸಮನ್ಸ್

ಚುನಾವಣೆ ಪ್ರಚಾರದ ವೇಳೆ ಆರ್ಥಿಕ ಸಮೀಕ್ಷೆ ಕುರಿತ ಹೇಳಿಕೆ : ರಾಹುಲ್‌ ಗಾಂಧಿಗೆ ಸಮನ್ಸ್

Bareilly Court summons Rahul Gandhi for remarks made against Economic Survey

ನವದೆಹಲಿ,ಡಿ.23- ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಆರ್ಥಿಕ ಸಮೀಕ್ಷೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ ಕಾಂಗ್ರೆಸ್‌‍ ನಾಯಕ ರಾಹುಲ್‌ ಗಾಂಧಿ ಅವರಿಗೆ ಉತ್ತರ ಪ್ರದೇಶದ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಜನವರಿ 7 ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ರಾಹುಲ್ಗೆ ಸೂಚಿಸಲಾಗಿದೆ. ಅಖಿಲ ಭಾರತ ಹಿಂದೂ ಮಹಾಸಂಘದ ಅಧ್ಯಕ್ಷ ಪಂಕಜ್‌ ಪಾಠಕ್‌ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸುಧೀರ್‌ ಕುಮಾರ್‌ ಅವರು ಸಮನ್ಸ್ ಜಾರಿ ಮಾಡಿದ್ದಾರೆ.

ಪಾಠಕ್‌ ಅವರನ್ನು ಪ್ರತಿನಿಧಿಸಿದ ವಕೀಲ ವೀರೇಂದ್ರ ಪಾಲ್‌ ಗುಪ್ತಾ ಪ್ರತಿಕ್ರಿಯಿಸಿ, ರಾಹುಲ್‌ ಗಾಂಧಿ ಬಡ ವರ್ಗಗಳನ್ನು ಪ್ರಚೋದಿಸಲು ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗಳು ರಾಜಕೀಯ ಲಾಭಕ್ಕಾಗಿ ವರ್ಗ ದ್ವೇಷವನ್ನು ಸೃಷ್ಟಿಸುವ ಗುರಿಯನ್ನು ಹೊಂದಿವೆ ಎಂದು ಆರೋಪಿಸಿದರು.

ತನ್ನ ವೈಯಕ್ತಿಕ ಹಿತಾಸಕ್ತಿಗಾಗಿ ಉದ್ದೇಶಪೂರ್ವಕವಾಗಿ ಆರ್ಥಿಕವಾಗಿ ದುರ್ಬಲ ವರ್ಗಗಳ ನಡುವೆ ಹಗೆತನ ಮತ್ತು ದ್ವೇಷವನ್ನು ಬಿತ್ತಲು ಕಾಂಗ್ರೆಸ್‌‍ ಪ್ರಯತ್ನಿಸಿದೆ ಎಂದು ದೂರಿದರು.
ರಾಹುಲ್‌ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಲು ನಿರ್ದೇಶನ ನೀಡುವಂತೆ ಕೋರಿ ಆಗಸ್ಟ್ನಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆಗಸ್ಟ್‌‍ 27 ರಂದು ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿತ್ತು. ನಂತರ ಪಾಠಕ್‌ ಅವರು ಸೆಷನ್ಸ್‌‍ ನ್ಯಾಯಾಲಯದಲ್ಲಿ ಪರಿಷ್ಕರಣೆ ಅರ್ಜಿಯನ್ನು ಸಲ್ಲಿಸಿದ್ದರು.

ರಾಹುಲ್‌ ಗಾಂಧಿ ಹೇಳಿದ್ದೇನು? :
ಬಡವರ ಶೇಕಡಾವಾರು ಮತ ಪ್ರಮಾಣ ಹೆಚ್ಚಿದ್ದರೂ, ಅವರು ಹೊಂದಿರುವ ಆಸ್ತಿಯ ಶೇಕಡಾವಾರು ಪ್ರಮಾಣವು ತುಂಬಾ ಕಡಿಮೆಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಹೆಚ್ಚಿನ ಜನಸಂಖ್ಯೆ ಹೊಂದಿರುವವರು ಹೆಚ್ಚಿನ ಆಸ್ತಿಗೆ ಬೇಡಿಕೆ ಸಲ್ಲಿಸಬಹುದು. ಹಿಂದುಳಿದ ಜಾತಿಗಳು, ಪರಿಶಿಷ್ಟ ಜಾತಿಗಳು (ಎಸ್ಸಿಗಳು), ಪರಿಶಿಷ್ಟ ಪಂಗಡಗಳು (ಎಸ್ಟಿಗಳು), ಅಲ್ಪಸಂಖ್ಯಾತರು ಮತ್ತು ಇತರ ಸಮುದಾಯಗಳ ಜನಸಂಖ್ಯೆ ಮತ್ತು ಸ್ಥಿತಿಯನ್ನು ನಿಖರವಾಗಿ ನಿರ್ಣಯಿಸಲು ಜಾತಿ ಗಣತಿಯನ್ನು ನಡೆಸಬೇಕು ಎಂದು ಹೇಳಿದ್ದರು.

RELATED ARTICLES

Latest News