Saturday, July 27, 2024
Homeಬೆಂಗಳೂರುಬಿಬಿಎಂಪಿ ಶಾಲೆಗಳು ಸರ್ಕಾರದ ಸುಪರ್ದಿಗೆ

ಬಿಬಿಎಂಪಿ ಶಾಲೆಗಳು ಸರ್ಕಾರದ ಸುಪರ್ದಿಗೆ

ಬೆಂಗಳೂರು,ಡಿ.22- ಕೋಟಿ ಕೋಟಿ ಖರ್ಚು ಮಾಡಿದರೂ ರಿಸಲ್ಟ್ ಮಾತ್ರ ಹೆಚ್ಚಳವಾಗದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ ತನ್ನ ವ್ಯಾಪ್ತಿಯ ಶಾಲಾ-ಕಾಲೇಜುಗಳನ್ನು ಸರ್ಕಾರದ ಸುಪರ್ದಿಗೆ ವಹಿಸಲು ಮುಂದಾಗಿದೆ. ವರ್ಷಕ್ಕೆ ನೂರಾರು ಕೋಟಿ ಹಣವನ್ನು ಬಜೆಟ್ ನಲ್ಲಿ ಮೀಸಲಿಟ್ಟರೂ ಫಲಿತಾಂಶ ಮಾತ್ರ ಹೆಚ್ಚಳವಾಗದಿರುವುದು ಬಿಬಿಎಂಪಿಯ ಈ ತಿರ್ಮಾನಕ್ಕೆ ಕಾರಣ ಎನ್ನಲಾಗಿದೆ.

ಇಡಿ ನಗರದ ಆಡಳಿತವನ್ನೇ ತನ್ನ ಕೈಯಲ್ಲಿಟ್ಟುಕೊಂಡಿರುವ ಬಿಬಿಎಂಪಿ ಆಯುಕ್ತರಿಗೆ ಶಾಲಾ-ಕಾಲೇಜುಗಳ ಫಲಿತಾಂಶ ಹೆಚ್ಚಳ ಮಾಡಲು ಸಾಧ್ಯವಾಗದಿರುವುದು ಅವರಿಗೆ ಬೇಸರ ತರಿಸಿದೆ. ಬಿಬಿಎಂಪಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಿಗೆ ಸರಿ ಸಮನಾದ ಸವಲತ್ತು ನೀಡಿದರು ಈ ಬಾರಿ ಉತ್ತಮ ಫಲಿತಾಂಶ ಬಾರದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಇಂತಹ ನಿರ್ಧಾರ ಕೈಗೊಂಡಿರುವರೇ ಎಂಬ ಅನುಮಾನ ಕಾಡತೊಡಗಿದೆ.

ಎಷ್ಟೆ ಅನುದಾನ ನೀಡಿ ಅಗತ್ಯ ಸವಲತ್ತು ನೀಡಿದರೂ ಫಲಿತಾಂಶ ಬಾರದಿರುವುದೇ ಆಯುಕ್ತರ ಇಂತಹ ಕಟು ನಿರ್ಧಾರಕ್ಕೆ ಕಾರಣ ಎನ್ನುತ್ತಿವೆ ಬಿಬಿಎಂಪಿ ಮೂಲಗಳು. ಈ ಹಿನ್ನೇಲೆಯಲ್ಲಿ ಪಾಲಿಕೆಯ ಎಲ್ಲಾ ಶಾಲಾ ಕಾಲೇಜುಗಳನ್ನೂ ಸರ್ಕಾರದ ಸುಪರ್ದಿಗೆ ನೀಡೋದಕ್ಕೆ ಪಾಲಿಕೆ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ಬರ, ಐಷಾರಾಮಿ ವಿಮಾನದಲ್ಲಿ ಸಿದ್ದು-ಜಮೀರ್‌ ಆಡಂಬರ : ಬಿಜೆಪಿ ಟೀಕೆ

ಇಂದು ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್. ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಿಕ್ಷಣ ಇಲಾಖೆ ಅಯುಕ್ತರೊಂದಿಗೆ ಮಹತ್ವದ ಮಾತುಕತೆ ನಡೆಯಲಿದೆ. ಪಾಲಿಕೆ ವ್ಯಾಪ್ತಿಯಲ್ಲಿ 159 ಶಾಲೆಗಳು,,ಕಾಲೇಜುಗಳು ಇವೆ, ಇಷ್ಟು ಶಾಲೆಗಳು ಸರ್ಕಾರದ ಸುಪರ್ದಿಗೆ ಒಳಪಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಮುಂದಿನ ವರ್ಷದಿಂದಲ್ಲೆಪಾಲಿಕೆಯ ಎಲ್ಲಾ ಶಾಲಾ,ಕಾಲೇಜುಗಳನ್ನೂ ಹಸ್ತಾಂತರಕ್ಕೆ ಪಾಲಿಕೆ ಮುಂದಾಗಿದ್ದು, ಶಾಲೆಗೆ ಸಂಬಂದಪಟ್ಟ ಪೀಠೋಪಕಾರಣ,,ಕಟ್ಟಡ ,, ಶಾಲ,ಕಾಲೇಜಿನ ಶಿಕ್ಷಕರನ್ನ ನೇರವಾಗಿ ಸರ್ಕಾರಕ್ಕೆ ಹಸ್ತಾಂತರ ಮಾಡುವುದು ಖಚಿತಗೊಂಡಿದೆ. ಇದರ ಜೊತೆಗೆ ನಗರದಲ್ಲಿ ಹೆಚ್ಚಿನ ಕರ್ನಾಟಕ ಪಬ್ಲಿಕ್ ಶಾಲೆ ಅರಂಭಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಮೂಲಗಳು ಖಚಿತಪಡಿಸಿವೆ.

RELATED ARTICLES

Latest News