Friday, May 3, 2024
Homeರಾಷ್ಟ್ರೀಯತೆರಿಗೆ ಪಾವತಿಸದ ರಾಕ್‍ಲೈನ್ ಮಾಲ್‍ಗೆ ಬೀಗ

ತೆರಿಗೆ ಪಾವತಿಸದ ರಾಕ್‍ಲೈನ್ ಮಾಲ್‍ಗೆ ಬೀಗ

ಬೆಂಗಳೂರು,ಫೆ.ಐ14-ಕೋಟ್ಯಂತರ ರೂ. ತೆರಿಗೆ ಬಾಕಿ ಉಳಿಸಿಕೊಂಡಿರುವ ನಗರದ ರಾಕ್‍ಲೈನ್ ಮಾಲ್‍ಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಜಡಿದಿದ್ದಾರೆ. ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿ ಬರುವ ರಾಕ್‍ಲೈನ್ ಮಾಲ್ ಬಾಕಿ ತೆರಿಗೆ ಪಾವತಿಸದ ಕಾರಣ ಇಂದು ಪಾಲಿಕೆ ಕಂದಾಯ ಅಧಿಕಾರಿಗಳು ಇಂದು ತುಮಕೂರು ರಸ್ತೆಯ ಪ್ರಶಾಂತ್ ನಗರದಲ್ಲಿರುವ ರಾಕ್ ಲೈನ್ ಮಾಲ್ ಅನ್ನು ಸೀಜ್ ಮಾಡಿದ್ದಾರೆ.

ರಾಕ್ ಲೈನ್ ಮಾಲ್ ನಿಂದ 2011 ರಿಂದ 2022-23 ರವರೆಗೆ ಬಾಕಿ ಉಳಿಸಿಕೊಂಡಿರುವ 11.51 ಕೋಟಿ ರೂ. ಆಸ್ತಿ ತೆರಿಗೆಯನ್ನು ಪಾಲಿಕೆಗೆ ಪಾವತಿಸಬೇಕಿದೆ. 2011 ರಿಂದ 2023ರವರೆಗೆ ಸರಿ ಸುಮಾರು 11.51 ಕೋಟಿ ರೂ.ಗಳ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದರು. ಬಾಕಿ ತೆರಿಗೆ ಪಾವತಿಸಲು ಡಿಮ್ಯಾಂಡ್ ನೋಟೀಸ್ ಜಾರಿ ಮಾಡಿದ್ದರು ಮಾಲ್ ಮಾಲೀಕರು ತಲೆ ಕೆಡಿಸಿಕೊಂಡಿರಲಿಲ್ಲ.

ಮಾಜಿ ಸಚಿವ ಕೆ.ಗೋಪಾಲಯ್ಯಗೆ ಕೊಲೆ ಬೆದರಿಕೆ

ಹೀಗಾಗಿ ವಲಯ ಆಯುಕ್ತೆ ಪ್ರೀತಿ ಗೆಹ್ಲೋಟ್, ವಲಯ ಜಂಟಿ ಆಯುಕ್ತ ಬಾಲಶೇಖರ್ ಮತ್ತಿತರ ಅಧಿಕಾರಿಗಳು ಮಾರ್ಷಲ್‍ಗಳು ಹಾಗೂ ಪೊಲೀಸ್ ಭದ್ರತೆಯೊಂದಿಗೆ ಇಂದು ಮಾಲ್‍ಗೆ ತೆರಳಿ ಬೀಗ ಜಡಿದಿದ್ದಾರೆ.

RELATED ARTICLES

Latest News