ನವದೆಹಲಿ, ಏ. 22- ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ 1 ರನ್ನಿಂದ ರೋಚಕ ಸೋಲು ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲೆಸಿಸ್ಗೆ 12 ಲಕ್ಷ ದಂಡ ವಿಧಿಸಲಾಗಿದೆ. ಐಪಿಎಲ್ ನಿಯಮದ ಪ್ರಕಾರ ನಿಗತ ಸಮಯದ ವೇಳೆಗೆ ಆರ್ಸಿಬಿ ಒಂದು ಓವರ್ ಕಡಿಮೆ ಮಾಡಿದ್ದ ಪ್ರಮಾದಕ್ಕಾಗಿ ಡುಪ್ಲೆಸಿಸ್ಗೆ ದಂಡ ವಿಧಿಸಲಾಗಿದೆ.
` ಕೋಲ್ಕತ್ತಾದ ಈಡೆನ್ ಗಾರ್ಡನ್ನಲ್ಲಿ ಕೆಕೆಆರ್ ವಿರುದ್ಧ ನಡೆದಿದದ ಟೂರ್ನಿಯ 36ನೇ ಪಂದ್ಯದಲ್ಲಿ ಆರ್ಸಿಬಿ ಒಂದು ಓವರ್ ಸ್ಲೋ ಓವರ್ರೇಟ್ ಮಾಡಿದ್ದು, ಪ್ರಸಕ್ತ ಟೂರ್ನಿಯಲ್ಲಿ ತಂಡವೆಸಗಿರುವ ಮೊದಲ ಅಪರಾಧ ಆಗಿರುವುದರಿಂದ ತಂಡದ ನಾಯಕರಾಗಿರುವ ಫಾಫ್ ಡುಪ್ಲೆಸಿಸ್ ಅವರಿಗೆ 12 ಲಕ್ಷ ದಂಡ ವಿಧಿಸಲಾಗಿದೆ’ ಎಂದು ಐಪಿಎಲ್ ವರದಿ ತಿಳಿಸಿದೆ.
ಸ್ಯಾಮ್ ಕರ್ರನ್ಗೆ ಶೇ.50ರಷ್ಟು ದಂಡ
ನಿನ್ನೆ ನಡೆದ ಮತ್ತೊಂದು ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಗುಜರಾತ್ ಟೈಟನ್ಸ್ ವಿರುದ್ಧ 3 ವಿಕೆಟ್ಗಳ ಸೋಲು ಕಂಡಿದ್ದು, ಪಂದ್ಯದ ವೇಳೆ ಪಂಜಾಬ್ ಕಿಂಗ್ಸ್ ನಾಯಕ ಲೆವೆಲ್1 ಅಪರಾಧವೆಸಗಿರುವುದರಿಂದ ಐಪಿಎಲ್ ನಿಯಮದ 2.8 ಆರ್ಟಿಕಲ್ ಪ್ರಕಾರ ಸ್ಯಾಮ್ ಕರ್ರನ್ ಪಂದ್ಯದ ಶೇ.50ರಷ್ಟು ದಂಡ ವಿಧಿಸಲಾಗಿದೆ. ಪಂದ್ಯದಲ್ಲಿ ಸ್ಯಾಮ್ ಕರ್ರನ್ ಅವರು ಅಂಪೈರ್ ನೀಡಿದ್ದ ತೀರ್ಪುನ್ನು ಪ್ರಶ್ನಿಸಿ ಅವರ ಜೊತೆಗೆ ವಾಗ್ವಾದಕ್ಕಿಳಿದ ಕಾರಣ ಅವರಿಗೆ ಈ ಶಿಕ್ಷೆ ವಿಧಿಸಲಾಗಿದೆ.