Tuesday, December 3, 2024
Homeಬೆಂಗಳೂರುನಾಳೆ ಮಧ್ಯರಾತ್ರಿ ವಿಶ್ವ ವಿಖ್ಯಾತ ಬೆಂಗಳೂರು ಕರಗ ಮಹೋತ್ಸವ

ನಾಳೆ ಮಧ್ಯರಾತ್ರಿ ವಿಶ್ವ ವಿಖ್ಯಾತ ಬೆಂಗಳೂರು ಕರಗ ಮಹೋತ್ಸವ

ಬೆಂಗಳೂರು, ಏ.22- ವಿಶ್ವ ವಿಖ್ಯಾತ ಬೆಂಗಳೂರು ಕರಗಕ್ಕೆ ಕ್ಷಣಗಣನೆ ಆರಂಭವಾಗಿದೆ.ನಾಳೆ ರಾತ್ರಿ 12.30ಕ್ಕೆ ಧರ್ಮರಾಯಸ್ವಾಮಿ ದೇವಾಲಯದ ಆವರಣದಲ್ಲಿ ಆರಂಭವಾಗಲಿರುವ ದ್ರೌಪದಿ ಕರಗ ಉತ್ಸವಕ್ಕೆ ಜಿಲ್ಲಾಡಳಿತ, ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಕಳೆದ ಮೂರು ವರ್ಷಗಳಿಂದ ಸಾಧಾರಣವಾಗಿ ನಡೆದಿದ್ದ ಕರಗ ಉತ್ಸವವನ್ನು ಈ ಬಾರಿ ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಿರುವುದರಿಂದ ರಾಜ್ಯ, ಹೊರ ರಾಜ್ಯ ಹಾಗೂ ವಿದೇಶಗಳಿಂದ 8 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಕಳೆದೊಂದು ವಾರದಿಂದ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರುತ್ತಿದ್ದು ಧರ್ಮರಾಯಸ್ವಾಮಿ ದೇವಸ್ಥಾನ ನವ ವಧುವಿನಂತೆ ಕಂಗೊಳಿಸುತ್ತಿದೆ.

ಕರಗ ಸಾಗುವ ದಾರಿಯುದ್ದಕ್ಕೂ ರಸ್ತೆಯನ್ನ ಅಗಲೀಕರಣ ಮಾಡಿ ಸ್ವಚ್ಚಗೊಳಿಸಲಾಗಿದೆ, ವಿದ್ಯುತ್ ದೀಪ, ಹೂಗಳಿಂದ ಅಲಂಕಾರ ಮಾಡಲಾಗಿದೆ. ಈ ಭಾರಿಯೂ ಕೂಡ ಜ್ಞಾನೇಂದ್ರ ಅವರೇ 13 ನೇ ಬಾರಿ ಕರಗ ಹೊರಲಿದ್ದಾರೆ.

ಕಳೆದ ಬಾರಿ ಅದಂತಹ ಅಹಿತಕರ ಘಟನೆ ನಡೆಯದಂತೆ ಕರಗೋತ್ಸವ ನಡೆಸಲು ಕರಗ ಉತ್ಸವ ವ್ಯವಸ್ಥಾಪಕ ಸಮಿತಿ ನಿರ್ಧರಿಸಿದೆ. ಈ ಬಗ್ಗೆ ಮಾತನಾಡಿದ ಕರಗ ಉತ್ಸವ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಸತೀಶ್ ಅವರು ಈ ಬಾರಿ ಯಾವುದೇ ರೀತಿಯ ಗೊಂದಲ ಇಲ್ಲದಂತೆ ಅದ್ಧೂರಿಯಾಗಿ ಉತ್ಸವ ನಡೆಸಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದ್ದಾರೆ.

ದರ್ಗಾಗೆ ಕರಗ ಹೋಗುತ್ತೆ ಇದು ಹಲವು ವರ್ಷಗಳಿಂದ ನಡೆದುಕೊಂಡಿರುವ ಬಂದಿರುವ ಪದ್ಧತಿ. ಮಸ್ತಾನ್ ದರ್ಗಾ ಆಡಳಿತ ಮಂಡಳಿ ನಮ್ಮನ್ನು ಭೇಟಿ ಮಾಡಿದೆ. ಸಂಪ್ರದಾಯದಂತೆ ಕರಗ ದರ್ಗಾಕ್ಕೆ ಭೇಟಿ ನೀಡುವಂತೆ ಆಹ್ವಾನ ಕೊಟ್ಟಿದ್ದಾರೆ. ಅದರಂತೆಯೇ ಕರಗ ಮಸ್ತಾನ್ ದರ್ಗಾಕ್ಕೂ ಹೋಗುತ್ತೆ ಅದರಲ್ಲಿ ಯಾವುದೆ ಗೊಂದಲ ಇಲ್ಲ ಎಲ್ಲವೂ ಸುಸೂತ್ರವಾಗಿ ನಡೆಯಲಿದೆ ಎಂದಿದ್ದಾರೆ.

ನಾಳೆ ರಾತ್ರಿ 12.30 ಕ್ಕೆ ಸರಿಯಾಗಿ ಕರಗ ಆರಂಭವಾಗಲಿದ್ದು ಮೊದಲು ಧರ್ಮರಾಯ ದೇಗುಲ ಪ್ರದಕ್ಷಿಣೆ ಹಾಕಿ ನಂತರ ದೇಗುಲದ ರಸ್ತೆ ಮೂಲಕ ಕುಂಬಾರಪೇಟೆ ರಸ್ತೆ, ರಾಜ ಮಾರ್ಕೆಟ್ ಸರ್ಕಲï ಅಲ್ಲಿಂದ ಸಿಟಿ ಮಾರ್ಕೆಟ್ ಸರ್ಕಲ್ ಕಡೆ ಮೆರವಣಿಗೆ ಸಾಗಲಿವೆ.

ಬಳಿಕ ಕೋಟೆ ಆಂಜನೇಯ ಸ್ವಾಮಿ ದೇಗುಲ ತೆರಳಲಿರುವ ಕರಗ ವಾಪಾಸ್ ಸಿಟಿ ಮಾರ್ಕೆಟ್ ಸರ್ಕಲ್ ಮೂಲಕ ಕಾಟನ್ ಪೇಟೆ ಪೊಲೀಸ್ ಸ್ಟೇಷನ್ ರಸ್ತೆಯಿಂದ ಕಾಟನ್ ಪೇಟ್ ರಸ್ತೆಯಲ್ಲಿ ಸಾಗಿ ಅಲ್ಲಿರುವ ಮಸ್ತಾನ್ ಸಾಬ್ ದರ್ಗಾ ಕ್ಕೆ ತೆರಳಲಿದೆ.

ನಂತರ ಬಳೇಪೇಟೆ ಸರ್ಕಲ್ ಮೂಲಕ ಅಣ್ಣಮ್ಮ ದೇವಿಯ ದೇವಸ್ಥಾನದತ್ತ ತೆರಳಿ ಮಾರನೇ ದಿನ ಬೆಳಿಗ್ಗೆ 9 ಗಂಟೆಗೆ ಕಬ್ಬನ್ ಪೇಟೆ ಮುಖ್ಯ ರಸ್ತೆಯ ಮೂಲಕ ವಾಪಾಸ್ ಧರ್ಮರಾಯ ಸ್ವಾಮಿ ದೇಗುಲಕ್ಕೆ ವಾಪಸ್ಸಾಗಲಿದೆ.

ಬಿಗಿಬಂದೋಬಸ್ತ್: ಕರಗ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಡಿಸಿಪಿ ನೇತೃತ್ವದಲ್ಲಿ ದೇವಸ್ಥಾನದ ಸುತ್ತ ಮುತ್ತ ಹಾಗೂ ಕರಗ ಸಾಗುವ ಹಾದಿ ಉದ್ದಕ್ಕೂ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

ಸ್ಥಳೀಯ ಪೊಲೀಸರು ಹಾಗೂ ಮೂರು ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ಕರಗ ದೇವಸ್ಥಾನದ ವ್ಯಾಪ್ತಿಯ ಅಕ್ಕಪಕ್ಕದ ರಸ್ತೆಗಳಲ್ಲಿ ಇರೋ ಮದ್ಯಮಾರಾಟವನ್ನೂ ನಾಳೆ ಬೆಳಿಗ್ಗೆ 6 ರಿಂದ 24ರ ಬೆಳಿಗ್ಗೆ 10 ಗಂಟೆವರೆಗೆ ನಿಷೇದ ಏರಲಾಗಿದ್ದು, ಕರಗ ಸುಸೂತ್ರವಾಗಿ ನಡೆಯಲು ಪೊಲೀಸ್ ಇಲಾಖೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಹಬ್ಬದ ಕಳೆ: ನಾಳೆ ಕರಗ ಉತ್ಸವ ನೆರವೇರುತ್ತಿರುವುದರಿಂದ ಧರ್ಮರಾಯಸ್ವಾಮಿ ದೇವಾಲಯದ ಸುತ್ತಮುತ್ತ ಹಬ್ಬದ ಕಳೆ ಕಂಡುಬಂದಿದೆ. ರಸ್ತೆಗಳಲ್ಲಿ ಜಾತ್ರೆ ನಡೆಯುತ್ತಿದ್ದು ಅಲ್ಲಲ್ಲಿ ಅರವಟಿಗೆಗಳನ್ನು ಹಾಕಿಕೊಂಡು ಭಕ್ತಾ„ಗಳಿಗೆ ಮಜ್ಜಿಗೆ, ಪಾನಕ ವಿತರಿಸಲಾಗುತ್ತಿದೆ.

RELATED ARTICLES

Latest News