Thursday, December 12, 2024
Homeಬೆಂಗಳೂರುನಮ್ಮ ಮೆಟ್ರೋ ಮಾರ್ಗದ ಕೆಳಗಡೆ ಸಂಚರಿಸುವಾಗ ಹುಷಾರ್..!

ನಮ್ಮ ಮೆಟ್ರೋ ಮಾರ್ಗದ ಕೆಳಗಡೆ ಸಂಚರಿಸುವಾಗ ಹುಷಾರ್..!

Be careful while traveling under our metro line..!

ಬೆಂಗಳೂರು,ನ.26– ಚಲಿಸುತ್ತಿದ್ದ ಕಾರಿನ ಮೇಲೆ ಮೆಟ್ರೋ ಪಿಲ್ಲರ್ ಮೇಲಿಂದ ಸಿಮೆಂಟ್ ತುಂಡು ಬಿದ್ದ ಪರಿಣಾಮ ಕಾರಿನ ಗಾಜು ಪುಡಿಯಾದ ಘಟನೆ ಮೈಸೂರು ರಸ್ತೆಯ ಬಿಎಚ್ಇಎಲ್ ಮುಂಭಾಗ ನಡೆದಿದೆ.

ಕಾರಿನ ಒಳಗಿದ್ದವರು ಅಪಾಯದಿಂದ ಪಾರಾಗಿದ್ದಾರೆ.ಯಲಹಂಕದ ಬಾಗಲೂರಿ ನಿಂದ ಮೈಸೂರಿಗೆ ಕಾರ್ಯಕ್ರಮಕ್ಕೆ ನವೀನ್ ರಾಜ್ ಮತ್ತು ಕುಟುಂಬ ಹೋಗುತ್ತಿದ್ದಾಗ ಪಿಲ್ಲರ್ ನಂಬರ್ 393 ಬಳಿ ಈ ಘಟನೆ ನಡೆದಿದೆ.

ಮೆಟ್ರೋ ರೈಲು ಹೋಗುತ್ತಿದ್ದಂತೆ ಸಿಮೆಂಟ್ ತುಂಡು ಕಳಚಿ ಬಿದ್ದಿದೆ. ಖರೀ ದಿಸಿ ಒಂದು ತಿಂಗಳು ಕೂಡ ಆಗದ ಮಹೇಂದ್ರಎಸ್ಯುವಿ 700 ಕಾರಿನ ಮುಂದಿನ ಗ್ಲಾಸ್ ಒಡೆದಿದ್ದು, ಕಾರಿನ ಮೇಲ್ಭಾಗ ಹಾನಿಯಾಗಿದೆ.

ಏಕಾಏಕಿ ಕಾರಿನ ಮೇಲೆ ಕಲ್ಲು ಬಿದ್ದ ರಭಸಕ್ಕೆ ಕಾರಿನಲ್ಲಿದ್ದವರು ಭಯಗೊಂಡು ಕಾರು ನಿಲ್ಲಿಸಿ ನೋಡಿದಾಗ ಸಿಮೆಂಟ್ ಪುಡಿ ಉದುರುತ್ತಿರುವುದು ನೋಡಿ ಅಲ್ಲಿಂದ ದೂರ ಸರಿದಿದ್ದಾರೆ. ಮೆಟ್ರೋ ಅಧಿಕಾರಿಗಳು ಸರಿಯಾಗಿ ಸ್ಪಂಧಿಸದ ಕಾರಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News