Monday, December 2, 2024
Homeರಾಷ್ಟ್ರೀಯ | Nationalಉಲ್ಫಾ ಮೇಲಿನ ನಿಷೇಧ ಮತ್ತೆ 5 ವರ್ಷಗಳವರೆಗೆ ವಿಸ್ತರಣೆ

ಉಲ್ಫಾ ಮೇಲಿನ ನಿಷೇಧ ಮತ್ತೆ 5 ವರ್ಷಗಳವರೆಗೆ ವಿಸ್ತರಣೆ

Centre extends ban on Ulfa (I) for another five years

ನವದೆಹಲಿ,ನ.26- ಭಾರತದಿಂದ ಅಸ್ಸಾಂ ಪ್ರತ್ಯೇಕಗೊಳಿಸುವ ಉದ್ದೇಶದ ಕೆಲಸ ಮುಂದುವರಿಕೆ ಮತ್ತು ಸುಲಿಗೆ, ಹಿಂಸಾಚಾರಕ್ಕಾಗಿ ಇತರ ದಂಗೆಕೋರ ಗುಂಪುಗಳೊಂದಿಗೆ ಸಂಪರ್ಕದಲ್ಲಿರುವುದಕ್ಕಾಗಿ ಬಂಡುಕೋರ ಸಂಘಟನೆ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್ ಉಲ್ಫಾ ಮೇಲಿನ ನಿಷೇಧವನ್ನು ಕೇಂದ್ರ ಸರ್ಕಾರ ಮತ್ತೆ ಐದು ವರ್ಷಗಳವರೆಗೆ ವಿಸ್ತರಿಸಿದೆ.

ಉಲ್ಫಾವನ್ನು 1990ರಲ್ಲಿ ಮೊದಲ ಬಾರಿಗೆ ನಿಷೇಧಿತ ಸಂಘಟನೆ ಎಂದು ಘೋಷಿಸಲಾಗಿತ್ತು. ಅಂದಿನಿಂದ ನಿಷೇಧವನ್ನು ನಿಯತಕಾಲಿಕವಾಗಿ ವಿಸ್ತರಿಸಲಾಗಿದೆ. ಉಲ್ಫಾ ತನ್ನ ಎಲ್ಲಾ ಬಣಗಳು ಮತ್ತು ಮುಂಚೂಣಿ ಸಂಘಟನೆಗಳೊಂದಿಗೆ ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಹಾನಿಯಾಗುವಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂದು ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆಯಲ್ಲಿ ಹೇಳಿದೆ.

ಅಸ್ಸಾಂ ಅನ್ನು ಭಾರತದಿಂದ ಪ್ರತ್ಯೇಕಿಸುವುದು ತನ್ನ ಉದ್ದೇಶವೆಂದು ಉಲ್ಫಾ ಘೋಷಿಸಿದೆ. ತಮ ಸಂಘಟನೆಗೆ ಹಣಕ್ಕಾಗಿ ಸುಲಿಗೆ ಮತ್ತು ಬೆದರಿಕೆಯನ್ನು ಮುಂದುವರೆಸಿದೆ. ಹಿಂಸಾಚಾರ ನಡೆಸಲು ಇತರ ಬಂಡಾಯ ಗುಂಪುಗಳೊಂದಿಗೆ ಸಂಪರ್ಕವನ್ನು ಹೊಂದಿದೆ ಎಂದು ಹೇಳಿದೆ.

ಅಸ್ಸಾಂನಲ್ಲಿ 2019ರ ನವೆಂಬರ್ 27ರಿಂದ, 2024ರ ಜುಲೈ 1ರ ಅವಧಿಯಲ್ಲಿ ಹಲವಾರು ಸ್ಫೋಟಗಳು ಅಥವಾ ಸ್ಫೋಟಕ ಅಳವಡಿಕೆಯ ಹಲವಾರು ಪ್ರಕರಣಗಳು ಸೇರಿದಂತೆ 16 ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಈ ಸಂಘಟನೆಯು ಅಕ್ರಮ ಶಸಾ್ತ್ರಸ್ತ್ರ ಮತ್ತು ಮದ್ದುಗುಂಡುಗಳನ್ನು ಹೊಂದಿದೆ ಮತ್ತು ಅಸ್ಸಾಂನಾದ್ಯಂತ 2024ರ ಸ್ವಾತಂತ್ರ್ಯ ದಿನದವರೆಗೂ ಹಲವು ಸ್ಫೋಟಗಳನ್ನು ನಡೆಸಿದೆ ಎಂದು ಅಧಿಸೂಚನೆ ಹೇಳಿದೆ.

ಕಳೆದ ಐದು ವರ್ಷಗಳಲ್ಲಿ ಮೂರು ಉಲ್ಫಾ ಕಾರ್ಯಕರ್ತರು ಪೊಲೀಸ್ ಅಥವಾ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಹತ್ಯೆಯಾಗಿದ್ದಾರೆ. ಅದರ ಕಾರ್ಯಕರ್ತರ ವಿರುದ್ಧ 15 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಮೂರು ಆರೋಪಪಟ್ಟಿಗಳನ್ನು ದಾಖಲಿಸಲಾಗಿದೆ ಮತ್ತು ಮೂರು ಕೇಡರ್ಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಉಲ್ಫಾ ಇತರ 27 ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಅದರ 56 ಕಾರ್ಯಕರ್ತರನ್ನು ಬಂಧಿಸಲಾಗಿದೆ ಮತ್ತು 63 ಕಾರ್ಯಕರ್ತರು ಶರಣಾಗಿದ್ದಾರೆ.

ಉಲ್ಫಾ ಸದಸ್ಯರಿಂದ 27 ಶಸಾ್ತ್ರಸ್ತ್ರಗಳು, 550 ಗುಂಡಿನ ಸುತ್ತುಗಳು, ಒಂಬತ್ತು ಗ್ರೆನೇಡ್ಗಳು ಮತ್ತು ಎರಡು ಸುಧಾರಿತ ಸ್ಫೋಟಕ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, 1967 (1967ರ 37) ನಿಬಂಧನೆಗಳ ಅಡಿಯಲ್ಲಿ ಉಲ್ಫಾವನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಲು ಅಸ್ಸಾಂ ಸರ್ಕಾರವು ಶಿಫಾರಸು ಮಾಡಿದೆ ಎಂದು ಸಚಿವಾಲಯ ತಿಳಿಸಿದೆ.

RELATED ARTICLES

Latest News