Thursday, December 12, 2024
Homeಬೆಂಗಳೂರುಮೊದಲೇ ಪ್ಲಾನ್ ಮಾಡಿ ಪ್ರೇಯಸಿಯನ್ನು ಲಾಡ್ಜ್‌ಗೆ ಕರೆಸಿ ಕೊಂದು ಪರಾರಿಯಾದ ಪ್ರಿಯತಮ

ಮೊದಲೇ ಪ್ಲಾನ್ ಮಾಡಿ ಪ್ರೇಯಸಿಯನ್ನು ಲಾಡ್ಜ್‌ಗೆ ಕರೆಸಿ ಕೊಂದು ಪರಾರಿಯಾದ ಪ್ರಿಯತಮ

Bengaluru apartment murder: 'Lover' kills woman, spends a day smoking next to corpse

ಬೆಂಗಳೂರು,ನ.27- ಆರೋಪಿ ತನ್ನ ಪ್ರಿಯತಮೆಯನ್ನು ಕೊಲೆ ಮಾಡಲು ಸಂಚು ರೂಪಿಸಿಕೊಂಡೇ ಬಂದು ಆಕೆಯನ್ನು ಲಾಡ್ಜ್ ಗೆ ಕರೆತಂದು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇಂದಿರಾನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರೇಮಿಗಳು ಉಳಿದುಕೊಂಡಿದ್ದ ರೂಮ್ ಪರಿಶೀಲನೆ ನಡೆಸಿದಾಗ ಸಿಗರೇಟ್ ತುಂಡುಗಳು ಕಂಡುಬಂದಿದೆ. ಆರೋಪಿಯು ಶವದ ಜೊತೆ ಕಾಲ ಕಳೆದು ಸಿಗರೇಟ್ ಸೇದಿದ್ದಾನೆಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಪ್ರೇಯಸಿಯನ್ನು ಕೊಲೆ ಮಾಡಲೆಂದೇ ಆರೋಪಿಯು ಚಾಕು ಒಂದನ್ನು ತನ್ನ ಜೊತೆ ತಂದಿದ್ದಾನೆ. ಆನ್ಲೈನ್ನಲ್ಲಿ ನೈಲಾನ್ದಾರ ತರಿಸಿಕೊಂಡಿದ್ದ ಮಾಹಿತಿ ಸಹ ಲಭ್ಯವಾಗಿದೆ. ಮೊದಲು ದಾರದಿಂದ ಪ್ರೇಯಸಿಯ ಕುತ್ತಿಗೆ ಬಿಗಿದು, ನಂತರ ಚಾಕುವಿನಿಂದ ಇರಿದು ಕೊಲೆ ಮಾಡಿರುವುದು ಕಂಡುಬಂದಿದೆ.

ನಿನ್ನೆ ಬೆಳಗ್ಗೆ 8.20ರಲ್ಲಿ ರೂಂನಿಂದ ಗಾಬರಿಯಲ್ಲೇ ಆರೋಪಿ ಹೊರಗೆ ಹೋಗಿರುವ ದೃಶ್ಯ ಲಾಡ್ಜ್‌ ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಹಲವು ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ. ಲಾಡ್ಜ್‌ ಹೊರಗೆ ಬಂದ ಆರೋಪಿ ಕ್ಯಾಬ್ ಬುಕ್ ಮಾಡಿಕೊಂಡು ನಗರದ ರೈಲು ನಿಲ್ದಾಣಕ್ಕೆ ಹೋಗಿ ನಂತರ ಕೇರಳಕ್ಕೆ ಪರಾರಿಯಾಗಿ ರುವ ಸಾಧ್ಯತೆಯಿದೆ.

ಕ್ಯಾಬ್ ಮಾಹಿತಿ ಕಲೆ:
ಆರೋಪಿಯು ಲಾಡ್ಜ್‌ ನಿಂದ ಹೋದ ಕ್ಯಾಬ್ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಕ್ಯಾಬ್ ನಂಬರ್ ಹಾಗೂ ಚಾಲಕನ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದು, ಕ್ಯಾಬ್ ಯಾವ ಯಾವ ಮಾರ್ಗಗಳಲ್ಲಿ ತೆರಳಿದೆ, ಆರೋಪಿ ಯಾವ ಸ್ಥಳದಲ್ಲಿ ಇಳಿದುಕೊಂಡ, ಎಲ್ಲಿಗೆ ಹೋದ ಎಂಬುದನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಕಾರ್ಯೋನುಖರಾಗಿದ್ದು, ಆರೋಪಿ ಬಂಧನಕ್ಕೆ ಶೋಧ ಕಾರ್ಯ ಮುಂದುವರೆದಿದೆ.

ಮೂರು ತಂಡ ರಚನೆ: ಆರೋಪಿ ಪತ್ತೆಗಾಗಿ ಈಗಾಗಲೇ 3 ತಂಡಗಳನ್ನು ರಚಿಸಲಾಗಿದ್ದು, ಒಂದು ತಂಡ ಕೇರಳಕ್ಕೆ, ಮತ್ತೊಂದು ತಂಡ ಮಹಾರಾಷ್ಟ್ರಕ್ಕೆ ತೆರಳಿವೆ. ಇನ್ನೊಂದು ತಂಡ ನಗರದಲ್ಲೇ ಇದ್ದು ಕಾರ್ಯಾಚರಣೆ ನಡೆಸುತ್ತಿದೆ.

ತುಂಡರಿಸುವ ದೂರಾಲೋಚನೆ!
ಪ್ರೇಯಸಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಬಳಿಕ, ದೇಹದ ಭಾಗಗಳನ್ನು ತುಂಡರಿಸಿ ಹೊರಗೆ ಸಾಗಿಸುವ ದುರಾಲೋಚನೆಯನ್ನು ಆರೋಪಿ ಮಾಡಿದ್ದಾನೆ, ಅದು ಸಾಧ್ಯವಾಗದಿದ್ದಾಗ ಶವವನ್ನು ರೂಂನಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ನಗರದಲ್ಲಿ ವಾಸವಿರುವ ಅಕ್ಕನಿಗೆ ಶುಕ್ರವಾರ ಕಾಲ್ ಮಾಡಿ ಆಫೀಸ್ನಲ್ಲಿ ಪಾರ್ಟಿ ಇದೆ ರಾತ್ರಿ ಬರಲ್ಲ ಎಂದು ಹೇಳಿದ ಮಾಯಾ, ನಂತರ ಶನಿವಾರ ಸಹ ಮೆಸೇಜ್ ಮಾಡಿ ಇಂದೂ ಪಾರ್ಟಿ ಇರುವುದರಿಂದ ರಾತ್ರಿ ಬರಲ್ಲ ಎಂದು ಹೇಳಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಆರೋಪಿ ಶನಿವಾರ ರಾತ್ರಿ ಪ್ರೇಯಸಿಯನ್ನು ಕೊಲೆ ಮಾಡಿರಬಹುದು. ಏಕೆಂದರೆ ಭಾನುವಾರದಿಂದ ಮಾಯಾ ತನ್ನ ಅಕ್ಕನಿಗೆ ಯಾವುದೇ ಮೆಸೇಜ್ ಮಾಡಿಲ್ಲ.

6 ತಿಂಗಳಿನಿಂದ ಪ್ರೀತಿಯ ಬಲೆಯಲ್ಲಿ:
ಸಾಮಾಜಿಕ ಜಾಲತಾಣದಲ್ಲಿ ಪರಿಚಿತನಾದ ಕೇರಳದ ಹಂತಕ ಆರವ್ನನ್ನು 6 ತಿಂಗಳಿನಿಂದಷ್ಟೇ ಪ್ರೀತಿಸುತ್ತಿದ್ದ ಮಾಯಾ ಆತನ ಮಾತುಗಳಿಂದ ಮರುಳಾಗಿ ಪ್ರೇಮದ ಬಲೆಗೆ ಬಿದ್ದು, ಸಂಪೂರ್ಣವಾಗಿ ನಂಬಿ ಆತ ಕರೆದನೆಂದು ಲಾಡ್‌್ಜಗೆ ಹೋಗಿ ತನ್ನ ಜೀವವನ್ನೇ ಅಂತ್ಯಗೊಳಿಸಿಕೊಂಡಿರುವುದು ದುರಂತದ ಸಂಗತಿ. ಆರೋಪಿ ಸಿಕ್ಕಿದ ನಂತರವೇ ಕೊಲೆಗೆ ನಿಖರವಾದ ಕಾರಣ ತಿಳಿದುಬರಲಿದೆ.

RELATED ARTICLES

Latest News