Homeಬೆಂಗಳೂರುಅನಾರೋಗ್ಯದಿಂದ ಮನನೊಂದು ಪತ್ನಿಯನ್ನು ಕೊಂದು 85 ವರ್ಷದ ವೃದ್ಧ ಆತ್ಮಹತ್ಯೆ

ಅನಾರೋಗ್ಯದಿಂದ ಮನನೊಂದು ಪತ್ನಿಯನ್ನು ಕೊಂದು 85 ವರ್ಷದ ವೃದ್ಧ ಆತ್ಮಹತ್ಯೆ

85-year-old man commits suicide after killing wife due to illness

ಬೆಂಗಳೂರು,ಜೂ.23- ಅನಾರೋಗ್ಯದಿಂದ ಮನನೊಂದು ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಎಂಬತೈದು ವರ್ಷದ ವೃದ್ಧರೊಬ್ಬರು ಆತಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಸಂಪಿಗೆಹಳ್ಳಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಬಿಹಾರ ಮೂಲದ ಶಿವಾನಂದನ್‌ ಪ್ರಸಾದ್‌(85) ಎಂಬುವವರೇ ಪತ್ನಿ ಸುಮಿತ್ರಾದೇವಿ (77) ಅವರನ್ನು ಕೊಲೆ ಮಾಡಿ ಆತಹತ್ಯೆಗೆ ಶರಣಾದವರು.

ಶಿವಾನಂದನ್‌ ಅವರಿಗೆ ಹೃದಯ ಸಂಬಂಧಿ ಖಾಯಿಲೆ ಇದೆ. ಇವರ ಪತ್ನಿ ಸುಮಿತ್ರಾದೇವಿ ಅಂಧರು ಹಾಗೂ ಕಿವಿ ಕೇಳಿಸುವುದಿಲ್ಲ.ನಗರದ ರಾಚೇನಹಳ್ಳಿ ಲೇಕ್‌ ಸಮೀಪದ ಚೊಕ್ಕನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ವೊಂದ ರಲ್ಲಿ ಶಿವಾನಂದನ್‌ ಅವರ ಪುತ್ರ ಕಿರಣ್‌ಕುಮಾರ್‌ ಕಶ್ಯಪ್‌ ಅವರು ಪತ್ನಿ, ಮಗಳು, ಮಗನೊಂದಿಗೆ ವಾಸವಿದ್ದಾರೆ. ಕಿರಣ್‌ಕುಮಾರ್‌ ಕಶ್ಯಪ್‌ ಅವರು ನಿವೃತ್ತ ಯೋಧರಾಗಿದ್ದು, ಸೆಕ್ಯೂರಿಟಿ ಏಜೆನ್ಸಿಯೊಂದರಲ್ಲಿ ಸೀನಿಯರ್‌ ಸೂಪರ್‌ವೈಸರ್‌ರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಒಂದು ತಿಂಗಳ ಹಿಂದೆ ಮಗನ ಮನೆಗೆ ವೃದ್ಧ ದಂಪತಿ ಬಂದಿದ್ದಾರೆ. ಕಶ್ಯಪ್‌ ಅವರ ಸಹೋದರ ಧೀರಜ್‌ ಮದುವೆ ನಿಮಿತ್ತ ವಾರದ ಹಿಂದೆ ಪತ್ನಿ ಹಾಗೂ ಮಗ ನವಾಡಾಗೆ ಹೋಗಿದ್ದಾರೆ. ವೃದ್ಧ ಪೋಷಕರನ್ನು ನೋಡಿಕೊಂಡು ಕಶ್ಯಪ್‌ ಅವರು ಮಗಳೊಂದಿಗೆ ಮನೆಯಲ್ಲಿದ್ದರು.

ನಿನ್ನೆ ರಾತ್ರಿ 9 ಗಂಟೆ ಸುಮಾರಿನಲ್ಲಿ ರೂಮ್‌ನಲ್ಲಿದ್ದ ತಂದೆ ತಾಯಿಗೆ ಊಟ ಕೊಟ್ಟಿದ್ದಾರೆ. ನಂತರ ಮಗಳು ಬೆಡ್‌ ರೂಮ್‌ನಲ್ಲಿ ಮಲಗಿಕೊಂಡರೆ, ಕಶ್ಯಪ್‌ ಅವರು ಹಾಲ್‌ನಲ್ಲಿ ಮಲಗಿದ್ದಾರೆ. ಇಂದು ಬೆಳಗಿನ ಜಾವ 5 ಗಂಟೆಗೆ ಅಪ್ಪ, ಮಗಳು ಎದ್ದು ತಿಂಡಿ ತಯಾರಿಸಿದ್ದಾರೆ.6 ಗಂಟೆ ಸುಮಾರಿನಲ್ಲಿ ತಂದೆ ತಾಯಿ ಮಲಗಿದ್ದ ರೂಮ್‌ ಬಳಿ ಹೋಗಿ ಎಬ್ಬಿಸಲು ಬಾಗಿಲು ತಟ್ಟಿದ್ದಾರೆ. ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಗಾಬರಿಯಾಗಿ ಸುತ್ತಿಗೆಯಿಂದ ಬಾಗಿಲು ಒಡೆದು ನೋಡಿದಾಗ ತಂದೆ, ತಾಯಿ ಮೃತಪಟ್ಟಿರುವುದು ಕಂಡು ಅಘಾತಗೊಂಡಿದ್ದಾರೆ.

ಪಿಜಿ ಮಾಲೀಕನನ್ನೇ ಬ್ಯಾಟ್‌ನಿಂದ ಹೊಡೆದು ಕೊಂದ ಇಬ್ಬರು ವಿದ್ಯಾರ್ಥಿಗಳು

ಕಶ್ಯಪ್‌ ಮಗಳು ಆಂಬ್ಯುಲೆನ್ಸ್ ಗೆ ಕರೆ ಮಾಡಿ ನಂತರ ಪೊಲೀಸರಿಗೂ ವಿಷಯ ತಿಳಿಸಿದ್ದಾರೆ. ನಮಗೆ ತೊಂದರೆ ಕೊಡಬಾರದೆಂದು ತಾಯಿ ಯನ್ನು ನಮ ತಂದೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ಸಹ ರೂಮಿನ ಕಿಟಕಿಗೆ ಲುಂಗಿಯಿಂದ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದಾರೆಂದು ಮಗ ಕಿರಣ್‌ಕುಮಾರ್‌ ಕಶ್ಯಪ್‌ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವೃದ್ಧ ದಂಪತಿಯ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬೆಂಗಳೂರನ್ನು ಬೆಚ್ಚಿಬೀಳಿಸಿದ ತ್ರಿವಳಿ ಕೊಲೆ : ಪ್ರಿಯಕರನ ಜೊತೆ ಸೇರಿ ಅಪ್ಪ, ಅಮ್ಮ, ತಂಗಿಯನ್ನು ಕೊಂದ ಮಗಳು

RELATED ARTICLES

Latest News