Homeಬೆಂಗಳೂರುಬೆಂಗಳೂರು : ಮನೆಯ ಕಟ್ಟಡದ ಮೇಲಿನಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ

ಬೆಂಗಳೂರು : ಮನೆಯ ಕಟ್ಟಡದ ಮೇಲಿನಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ

Bengaluru: Student commits suicide by jumping from building

ಬೆಂಗಳೂರು,ಜು.15-ಶಾಲಾ ವಿದ್ಯಾರ್ಥಿಯೊಬ್ಬ ಮನೆಯ ಕಟ್ಟಡದ ಮೇಲಿನಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜ್ಞಾನಭಾರತಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ರಾಯಸಂದ್ರದ ನಿವಾಸಿ 7ನೇ ತರಗತಿ ವಿದ್ಯಾರ್ಥಿ(13) ಸ್ಥಳೀಯ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

ನಿನ್ನೆ ಸಂಜೆ ಶಾಲೆಯಿಂದ ಮನೆಗೆ ಬಂದ ಈತ ಮನೆಯ ಕಟ್ಟಡದ ಮೇಲೆ ಹೋಗಿ ಅಲ್ಲಿಂದ ಜಿಗಿದು ಗಂಭೀರ ಗಾಯಗೊಂಡಿದ್ದಾನೆ.ತಕ್ಷಣ ಪೋಷಕರು ಗಮನಿಸಿ ಆತನನ್ನು ನಾಯಂಡನಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ.

ಶಾಲೆಯಲ್ಲಿ ಶಿಕ್ಷಕರು ಈ ವಿದ್ಯಾರ್ಥಿಗೆ ಹೊಡೆದು ಅವಮಾನಿಸಿದ್ದಾರೆಂಬ ಶಂಕೆ ವ್ಯಕ್ತವಾಗಿದೆ.ಶಾಲಾ ಶಿಕ್ಷಕರು ಈತನಿಗೆ ಕಿರುಕುಳ ನೀಡಿದ್ದಾರೆಯೇ ಅಥವಾ ಬೇರೆ ಏನಾದರೂ ಕಾರಣವಿರಬಹುದೇ ಎಂಬುವುದು ಸದ್ಯಕ್ಕೆ ತಿಳಿದು ಬಂದಿಲ್ಲ.ಒಟ್ಟಾರೆ ಯಾವ ಕಾರಣಕ್ಕಾಗಿ ಈ ವಿದ್ಯಾರ್ಥಿ ಇಂತಹ ನಿರ್ಧಾರ ತೆಗೆದುಕೊಂಡ ಎಂಬುವುದರ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

RELATED ARTICLES
spot_img

Latest News