Homeಬೆಂಗಳೂರುಜಿಬಿಎ ವೈದ್ಯಾಧಿಕಾರಿಗಳಿಗೆ ಧನ್ವಂತರಿ ಪ್ರಶಸ್ತಿ

ಜಿಬಿಎ ವೈದ್ಯಾಧಿಕಾರಿಗಳಿಗೆ ಧನ್ವಂತರಿ ಪ್ರಶಸ್ತಿ

GBA Medical Officers to receive Dhanvantari Award

ಬೆಂಗಳಳೂರು, ಜು.1- ಜಿಬಿಎ ವ್ಯಾಪ್ತಿಯ ಪಾಲಿಕೆಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ವೈದ್ಯರುಗಳಿಗೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಾಳೆ ಧನ್ವಂತರಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ವೈದ್ಯರ ದಿನಾಚರಣೆ ಹಾಗೂ ಪಾಲಿಕೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಆರೋಗ್ಯಾಧಿಕಾರಿ, ವೈದ್ಯಕೀಯ ಅಧೀಕ್ಷಕರು, ಆರೋಗ್ಯ ವೈದ್ಯಾಧಿಕಾರಿ ಮತ್ತು ವೈದ್ಯರಿಗೆ ಧನ್ವಂತರಿ ಪ್ರಶಸ್ತಿ ಪ್ರದಾನ ಮಾಡಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಅಮೃತ್‌ರಾಜ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಬಿಎ ಕೇಂದ್ರ ಕಚೇರಿಯಲ್ಲಿರುವ ನೌಕರರ ಭವನದಲ್ಲಿ ನಾಳೆ 12 ಗಂಟೆಗೆ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌, ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್‌, ವಿಶೇಷ ಆಯುಕ್ತ ವೆಂಕಟಚಲಪತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ, ಮುಖ್ಯ ಆರೋಗ್ಯಾಧಿಕಾರಿ ಡಾ ಸೈಯದ್‌ ನಿರಾಜುದ್ದೀನ್‌ ಮದನಿ, ಡಾ.ನಿರ್ಮಲಾ ಬುಗ್ಗಿ, ಡಾ. ಶಿವಕುಮಾರ್‌ ಎಂ, ಡಾ.ಬಾಲಸುಂದರ್‌ ಹಾಗೂ ಡಾ ಸಿದ್ದಪ್ಪಾಜಿ ಮತ್ತಿತರ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳುತ್ತಿದ್ದಾರೆ.

ಜಿಬಿಎ ವ್ಯಾಪ್ತಿಯ ಆರೋಗ್ಯ ವಿಭಾಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಆರೋಗ್ಯಾಧಿಕಾರಿ ಡಾ.ಮನೋರಂಜನ್‌ ಹೆಗ್ಡೆ, ವೈದ್ಯಕೀಯ ಅಧೀಕ್ಷಕ ಡಾ. ಬಿ. ವೆಂಕಟೇಶ್‌, ಡಾ ಕೋಮಲ ಕೆ.ಆರ್‌, ಡಾ ಮಂಜುಳ ಡಿ, ಡಾ.ಲಲಿತಾ, ಮಂಜುಳಾ ಮತ್ತಿತರರಿಗೆ ಧನ್ವಂತರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
spot_img

Latest News