Saturday, December 6, 2025
Homeಬೆಂಗಳೂರುಮೌಂಟ್‌ ಎವರೆಸ್ಟ್‌ನಲ್ಲಿ ಭಾರತದ ಧ್ವಜ ಹಾರಿಸಲು ಚಂದ್ರಶೇಖರ್ ಸಿದ್ಧತೆ

ಮೌಂಟ್‌ ಎವರೆಸ್ಟ್‌ನಲ್ಲಿ ಭಾರತದ ಧ್ವಜ ಹಾರಿಸಲು ಚಂದ್ರಶೇಖರ್ ಸಿದ್ಧತೆ

ಬೆಂಗಳೂರು, ಡಿ.5 ಭಾರತದ ಧ್ವಜವನ್ನು ಮೌಂಟ್ ಎವರೆಸ್ಟ್ ಶಿಖರದಲ್ಲಿ ಎತ್ತಿಹಿಡಿಯುವ ಗುರಿಯೊಂದಿಗೆ ಚಂದ್ರಶೇಖರ್ ಸಜ್ಜಾಗುತ್ತಿದ್ದಾರೆ. ಭಾರತದ ಯುವ ಪರ್ವತಾರೋಹಕರಲ್ಲಿ ತನ್ನದೇ ಆದ ಗುರುತನ್ನು ನಿರ್ಮಿಸಿಕೊಂಡಿರುವ ಚಂದ್ರಶೇಖರ್. ಆರ್ ಅವರು ಎತ್ತರದ ಕನಸುಗಳನ್ನು ದಿಟ್ಟ ಸಂಕಲ್ಪದೊಂದಿಗೆ ಬೆನ್ನಟ್ಟುತ್ತಿರುವ ಹೈ-ಅಲ್ಟಿಟ್ಯೂಡ್ ಅಥೀಟ್ ಆಗಿದ್ದರೆ. ಶಿಸ್ತು, ಪರಿಶ್ರಮ ಮತ್ತು ವಿಶ್ವ ಮಟ್ಟದಲ್ಲಿ ಭಾರತಕ್ಕೆ ಸ್ಥಾನವನ್ನು ಹೆಚ್ಚಿಸುವ ಗುರಿಯೊಂದಿಗೆ ತಮ್ಮ ಪ್ರಯಾಣ ಆರಂಭಿಸಿದ್ದಾರೆ.

ಪರ್ವತಾರೋಹಣದ ಕ್ಷೇತ್ರದಲ್ಲಿ ವೃತ್ತಿಪರ ನೈಪುಣ್ಯವನ್ನು ಪಡೆಯಲು, ಚಂದ್ರಶೇಖರ್ ಅವರು ಭಾರತೀಯ ಸೇನೆಯ ಅನುಭವಿಗಳಾದ ತರಬೇತುದಾರರ ಮಾರ್ಗದರ್ಶನದಲ್ಲಿ ತಾಂತ್ರಿಕ ತರಬೇತಿಯನ್ನು ಪಡೆದಿದ್ದಾರೆ. ಜೊತೆಗೆ ASSWF Foundation ಮೂಲಕ ಮೇಜರ್ ಜನರಲ್ ಅತಲ್ ಕೌಶಿಕ್ ಸರ್ ಅವರ ನೇರ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನ ಇವರಿಗೆ ದೊಡ್ಡ ಶಕ್ತಿ ಆಗಿದೆ. ಹೈ-ಅಲ್ಟಿಟ್ಯೂಡ್ ತಂತ್ರಜ್ಞಾನ, ಜೀವಸುರಕ್ಷತಾ ನಿರ್ಧಾರ, ಮಾನಸಿಕ ಸಹನೆ ಮತ್ತು ನಾಯಕತ್ವದ ಗುಣಗಳನ್ನು ವೃತ್ತಿಪರ ಮಟ್ಟದಲ್ಲಿ ಬೆಳೆಸಲು ಈ ತರಬೇತಿ ಮಹತ್ವದ ಪಾತ್ರ ವಹಿಸಿದೆ.

ಈ ಹಿಂದೆ ಇವರು ಕಠಿಣ ಹವಾಮಾನ ಮತ್ತು ಕಡಿಮೆ ಆಮ್ಲಜನಕದ ನಡುವೆಯೇ ಕೇವಲ 9 ಗಂಟೆಗಳಲ್ಲಿ ಕನಾಮೋ ಶಿಖರ ಏರಿದ್ದರು. ಇದು ಅವರ ತಾಳ್ಮೆ, ತೀವ್ರ ಫಿಟೈಸ್, ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸಿದರು. ಜನವರಿ 26 ರ ಗಣರಾಜ್ಯೋತ್ಸವ ದಿನದಂದು ಕಿಲಿಮಂಜಾರೋ ಶಿಖರ ತಲುಪುವ ಗುರಿ ಹೊಂದಿದ್ದಾರೆ , ಅವರ ದೇಶಭಕ್ತಿ ಮತ್ತು ಕ್ರೀಡಾ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಮುಂದಿನ ದಿನಗಲ್ಲಿ ಮೌಂಟ್ ಎವರೆಸ್ಟ್ ಏರುವ ಅಸೆ ಇದೆ, ಅದು ಅಂತಿಮ ಗುರಿಯಲ್ಲ. ಜಗತ್ತಿನ ಎಲ್ಲ 8000 ಮೀಟ‌ರ್ ಪರ್ವತಗಳ ಏರುವ ಗುರಿ ಹೊಂದಿದ್ದಾರೆ. ಇದು ಅತ್ಯಂತ ಸಂಕೀರ್ಣ ಮತ್ತು ಜಾಗತಿಕ ಮಟ್ಟದಲ್ಲಿ ದುರ್ಗಮವಾದ ಗುರಿ; ಭಾರತದಲ್ಲಿ ಕೇವಲ ಕೆಲವೇ ಮಂದಿ ಈ ಕನಸನ್ನು ಬೆನ್ನಟ್ಟಿದ್ದಾರೆ.

“ನಾನು ಪರ್ವತಾರೋಹಣವನ್ನು ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯ ಕ್ರೀಡೆಯಾಗಿ ರೂಪಿಸಲು ಮತ್ತು ನಮ್ಮ ರಾಜ್ಯದ ಯುವಕರನ್ನು ಹಿಮಾಲಯ ಮತ್ತು ಜಗತ್ತಿನ ಪರ್ವತಗಳತ್ತ ಪ್ರೇರೇಪಿಸಲು ಬದ್ಧನಾಗಿದ್ದೇನೆ. ಕರ್ನಾಟಕದ ಯುವಕರಿಗೆ ಸಾಹಸ, ಶಿಸ್ತು, ಮಾನಸಿಕ ದೃಢತೆ ಮತ್ತು ಎತ್ತರದ ಗುರಿಗಳನ್ನು ಬೆನ್ನಟ್ಟುವ ಸಂಸ್ಕೃತಿಯನ್ನು ನಿರ್ಮಿಸುವುದು ನನ್ನ ಮುಖ್ಯ ಧೈಯ.” ವಾಗಿದೆ ಎಂದು ಚಂದ್ರಶೇಖರ್ ಹೇಳುತ್ತಾರೆ.

RELATED ARTICLES

Latest News