Homeಇದೀಗ ಬಂದ ಸುದ್ದಿಹೊತ್ತಿ ಉರಿದ ಶೋರೂಂ: 50 ದ್ವಿಚಕ್ರ ವಾಹನಗಳು ಸುಟ್ಟು ಕರಕಲು

ಹೊತ್ತಿ ಉರಿದ ಶೋರೂಂ: 50 ದ್ವಿಚಕ್ರ ವಾಹನಗಳು ಸುಟ್ಟು ಕರಕಲು

ಬೆಂಗಳೂರು,ಜ.22-ದ್ವಿಚಕ್ರ ವಾಹನ ಶೋರೂಂ ಹಾಗೂ ಸರ್ವಿಸ್‌‍ ಸೆಂಟರ್‌ನಲ್ಲಿ ರಾತ್ರಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಪರಿಣಾಮ 50 ವಾಹನಗಳು ಸುಟ್ಟು ಕರಕಲಾಗಿರುವ ಘಟನೆ ಕೆ.ಆರ್‌ಪುರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಟಿಸಿಪಾಳ್ಯ ಸಿಗ್ನಲ್‌ ಬಳಿ ದ್ವಿಚಕ್ರ ವಾಹನ ಶೋರೂಂ ಹಾಗೂ ಸರ್ವಿಸ್‌‍ ಸೆಂಟರ್‌ ಇದ್ದು ರಾತ್ರಿ 10.30 ರ ಸುಮಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.

ತಕ್ಷಣ ಶೋರೂಂ ನಲ್ಲಿದ್ದ ಕೆಲಸಗಾರರು ಹೊರಗೆ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ನೋಡನೋಡುತ್ತಿದ್ದಂತೆ ಬೆಂಕಿ ಶೋರೂಂ ಹಾಗೂ ಸರ್ವಿಸ್‌‍ ಸೆಂಟರ್‌ ಪೂರ್ತಿ ಆವರಿಸಿಕೊಂಡಿದೆ. ಸುದ್ದಿ ತಿಳಿದ ತಕ್ಷಣ ಅಗ್ನಿ ಶಾಮಕ ಸಿಬ್ಬಂದಿ ಮೂರು ವಾಹನಗಳೊಂದಿಗೆ ಸ್ಥಳಕ್ಕೆ ಹೋಗಿ ಬೆಂಕಿಯನ್ನು ನಂದಿಸಿದ್ದಾರೆ. ಅಷ್ಟರಲ್ಲಾಗಲೇ ಹೊಸ ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು 50 ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿದೆ.

ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರ ಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಕೆಆರ್‌ಪುರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಬಸ್‌‍ನಲ್ಲಿ ಬೆಂಕಿ ಮೂವರ ಸಜೀವ ದಹನ
ಅಮರಾವತಿ,ಜ.22- ಟಯರ್‌ ಸ್ಫೋಟಗೊಂಡು ನಿಯಂತ್ರಣ ಕಳೆದುಕೊಂಡ ಖಾಸಗಿ ಕಂಪನಿಯ ಐಷಾರಾಮಿ ಬಸ್‌‍ ಮುಂದೆ ಹೋಗುತ್ತಿದ್ದ ಕಂಟೈನರ್‌ ಲಾರಿಗೆಡಿಕ್ಕಿ ಹೊಡೆದು ಧಗಧಗನೆ ಹೊತ್ತಿ ಉರಿದ ಘಟನೆ ಇಂದು ಮುಂಜಾನೆ ಆಂಧ್ರಪ್ರದೇಶದ ನಂದ್ಯಾಲ್‌ ಜಿಲ್ಲೆಯಲ್ಲಿ ನಡೆದಿದೆ.

ನಸುಕಿನ ಜಾವ 1:30 ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಬಸ್‌‍ನ ಚಾಲಕ, ಕಂಟೈನರ್‌ ಗಾರಿ ಚಾಲಕ ಹಾಗೂ ಕ್ಲೀನರ್‌ ಸೇರಿ ಮೂವರು ಸಜೀವ ದಹನವಾಗಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಕರ್ನೂಲ್‌ ಬಳಿ ಸಂಭವಿಸಿದ ಬಸ್‌‍ ದುರಂತದಲ್ಲಿ ಸುಮಾರು 20 ಮಂದಿ ಸಾವನ್ನಪ್ಪಿದ್ದರು. ಇದೀಗ ಮತ್ತೊಂದು ಘಟನೆಯಲ್ಲಿ ಮೂವರು ಸಜೀವ ದಹನವಾದ ಘಟನೆ ನಡೆದಿದೆ.

RELATED ARTICLES
spot_img

Latest News