Homeಬೆಂಗಳೂರುಯುವತಿಗಾಗಿ ಹರಿಯಾಣದಿಂದ ಬೆಂಗಳೂರಿಗೆ ಬಂದ ಪಾಗಲ್‌ ಪ್ರೇಮಿ ಅರೆಸ್ಟ್

ಯುವತಿಗಾಗಿ ಹರಿಯಾಣದಿಂದ ಬೆಂಗಳೂರಿಗೆ ಬಂದ ಪಾಗಲ್‌ ಪ್ರೇಮಿ ಅರೆಸ್ಟ್

ಬೆಂಗಳೂರು,ಜ.21-ಇನ್‌ಸ್ಟಾದಲ್ಲಿ ಯುವತಿಯನ್ನು ನೋಡಿ ಮನಸೋತ ಪಾಗಲ್‌ ಪ್ರೇಮಿಯೊಬ್ಬ ಅಶ್ಲೀಲ ಮೆಸೇಜ್‌ ಮಾಡಿದ್ದಲ್ಲದೆ ಆಕೆಯನ್ನು ಹುಡುಕಿಕೊಂಡು ಹರಿಯಾಣದಿಂದ ನಗರಕ್ಕೆ ಬಂದಿದ್ದ ಆರೋಪಿ ಇದೀಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಹರಿಯಾಣ ಮೂಲದ ಸುಧೀರ್‌ಕುಮಾರ್‌ (27) ಬಂಧಿತ ಆರೋಪಿ.ಈತ ವೃತ್ತಿಯಲ್ಲಿ ಜಿಮ್‌ ಟ್ರೈನರ್‌. ಇನ್‌ಸ್ಟಾದಲ್ಲಿ ಹರಿಯಾಣದವರೇ ಆದ ಯುವತಿಯನ್ನು ನೋಡಿ ಸ್ನೇಹ ಬೆಳೆಸಿದ್ದಾನೆ. ಈ ಯುವತಿ ಫಿಟ್ನೆಸ್‌‍, ನ್ಯೂಟ್ರೀಷಿಯನ್‌ ಇನ್‌ಫ್ಲೂಯೆನ್ಸರ್‌ ಆಗಿ ಕೆಲಸ ಮಾಡುತ್ತಿದ್ದಾರೆ.
ಇನ್‌್ಸಸ್ಟಾ ಮೂಲಕ ಪರಿಚಯವಾದ ಯುವತಿ ಜೊತೆ ಆತ ಸ್ನೇಹ ಬೆಳೆಸಿದ್ದಾನೆ. ಬಳಿಕ ವಾಟ್ಸಪ್‌ ನಂಬರ್‌ ಪಡೆದುಕೊಂಡು ಲೈಂಗಿಕವಾಗಿ ಪ್ರಚೋದಿಸುವಂತೆ ಯುವತಿಗೆ ಮೆಸೇಜ್‌ ಮಾಡಿ ಹಿಂಸೆ ನೀಡುತ್ತಿದ್ದನಲ್ಲದೇ ಅಶ್ಲೀಲ ಮೆಸೇಜ್‌ ಕಳುಹಿಸಿದ್ದಾನೆ.

ಈ ಯುವತಿ ಬನಶಂಕರಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಆಕೆಯನ್ನು ಹುಡುಕಿಕೊಂಡು ಹರಿಯಾಣದಿಂದ ನಗರಕ್ಕೆ ಬಂದ ಆರೋಪಿ ಸುಧೀರ್‌ಕುಮಾರ್‌ ಜಿಮ್‌ ಸಹೋದ್ಯೋಗಿಗಳ ಬಳಿ ವಿಚಾರಿಸಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಯುವತಿ ಭಯ ಭೀತಿಯಿಂದ ದಕ್ಷಿಣ ವಿಭಾಗ ಮಹಿಳಾ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಮಾಹಿತಿ ಕಲೆಹಾಕಿ ಹರಿಯಾಣ ಮೂಲದ ಸುಧೀರ್‌ಕುಮಾರ್‌ ಎಂಬಾತನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News