Homeಬೆಂಗಳೂರುಹದಿನೈದು ನಿಮಿಷದಲ್ಲೇ ಕಳೆದು ಹೋಗಿದ್ದ ಮೊಬೈಲ್‌ ಪತ್ತೆ ಹಚ್ಚಿದ ಪೊಲೀಸರು

ಹದಿನೈದು ನಿಮಿಷದಲ್ಲೇ ಕಳೆದು ಹೋಗಿದ್ದ ಮೊಬೈಲ್‌ ಪತ್ತೆ ಹಚ್ಚಿದ ಪೊಲೀಸರು

Police find lost mobile phone within 15 minutes

ಬೆಂಗಳೂರು,ಮೇ 6- ಮೊಬೈಲ್‌ ಫೋನ್‌ ಕಳೆದು ಹೋದ ಹದಿನೈದು ನಿಮಿಷದಲ್ಲಿ ಫೈಂಡ್‌ ಹಬ್‌ ಆ್ಯಪ್‌ ಬಳಸಿ ಪತ್ತೆಹಚ್ಚುವಲ್ಲಿ ರಾಮಮೂರ್ತಿನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ರಾಮಮೂರ್ತಿನಗರ ಪೊಲೀಸ್‌‍ ಠಾಣೆ ವ್ಯಾಪ್ತಿಯ ಚಂದ್ರವದನ ಲೇಔಟ್‌ನ ರೆಸಿಡೆನ್ಸಿ ಮನೆಯೊಂದರ ಸಮೀಪ ಪ್ರವೀಣ್‌ ಎಂಬುವವರ ಮೊಬೈಲ್‌ ಕಳೆದು ಹೋಗಿದ್ದು, ಕೂಡಲೇ ಸಹಾಯವಾಣಿ ನಮ-112 ಕ್ಕೆ ಕರೆ ಮಾಡಿ ದೂರು ನೀಡಿದ್ದಾರೆ.

ಕೂಡಲೇ ಕಾರ್ಯಪ್ರವೃತ್ತರಾದ ನಮ-112 ಸಿಬ್ಬಂದಿಯವರು ರಾಮಮೂರ್ತಿನಗರ ಪೊಲೀಸ್‌‍ ಠಾಣೆಯ ಹೊಯ್ಸಳ-49 ರಲ್ಲಿ ಕರ್ತವ್ಯದಲ್ಲಿದ್ದ ಎಎಸ್‌‍ಐ ಚೌಡಪ್ಪ ಮತ್ತು ಎಪಿಸಿ ಬಸವರಾಜ್‌ ಅವರಿಗೆ ಮಾಹಿತಿ ರವಾನಿಸಲಾಗಿತ್ತು.

ಹದಿನೈದು ನಿಮಿಷದಲ್ಲೇ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಫೈಂಡ್‌ ಹಬ್‌ ಆ್ಯಪ್‌ ಬಳಸಿ ಮೊಬೈಲ್‌ ಇರುವ ಸ್ಥಳವನ್ನು ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.

RELATED ARTICLES

Latest News