Homeಬೆಂಗಳೂರುದಾಖಲೆ ಬರೆದ ಬೆಂಗಳೂರು ಲಾಲ್‌ಬಾಗ್‌ ಪ್ಲವರ್‌ ಶೋ

ದಾಖಲೆ ಬರೆದ ಬೆಂಗಳೂರು ಲಾಲ್‌ಬಾಗ್‌ ಪ್ಲವರ್‌ ಶೋ

ಬೆಂಗಳೂರು, ಆ. 18: ಗಂಗರ ಸಾಮ್ರಾಜ್ಯದ ವೈಭವವನ್ನು ಅನಾವರಣಗೊಳಿಸಿದ್ದ ಲಾಲ್‌ಬಾಗ್‌ ಫ್ಲವರ್‌ ಶೋ ಅದ್ಭುತ ದಾಖಲೆ ನಿರ್ಮಿಸಿದೆ.ಆಗಸ್ಟ್‌ 5ರಂದು ಆರಂಭವಾಗಿದ್ದ ಪುಷ್ಪ ಪ್ರದರ್ಶನಕ್ಕೆ 12 ದಿನಗಳಲ್ಲಿ ಬರೋಬ್ಬರಿ 10.12 ಲಕ್ಷ ಮಂದಿ ಭೇಟಿ ನೀಡಿದ್ದು, ಈ ಹಿಂದಿನ ಫ್ಲವರ್‌ ಶೋಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದಾರೆ ಎಂಬ ದಾಖಲೆ ನಿರ್ಮಿಸಿದೆ.

ಗಂಗರ ವಿಷಯಾಧಾರಿತವಾಗಿ ರೂಪಿಸಲಾಗಿದ್ದ ವಿಶೇಷ ಹೂವಿನ ಅಲಂಕಾರಗಳು ಹಾಗೂ ಕಲಾಕೃತಿಗಳು ಸಾರ್ವಜನಿಕರ ಗಮನ ಸೆಳೆದಿದ್ದವು. ಹೀಗಾಗಿ ಪ್ರತಿದಿನವೂ ಲಾಲ್‌ಬಾಗ್‌ನಲ್ಲಿ ಜನಸಾಗರವೇ ಹರಿದುಬರುತ್ತಿತ್ತು.

12 ದಿನಗಳ ಅವಧಿಯಲ್ಲಿ ಫ್ಲವರ್‌ ಶೋನಿಂದ ಒಟ್ಟಾರೆ 3.85 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. ಫ್ಲವರ್‌ ಶೋ ಆಯೋಜನೆಗೆ ಸರಿಸುಮಾರು 2.75 ಕೋಟಿ ರೂಪಾಯಿ ವೆಚ್ಚವಾಗಿದ್ದು, ತೋಟಗಾರಿಕಾ ಇಲಾಖೆಗೆ ಸುಮಾರು 1 ಕೋಟಿ ರೂಪಾಯಿ ಲಾಭ ಬಂದಿದೆ. ಇನ್ನು ಸ್ವಾತಂತ್ರ್ಯ ದಿನಾಚರಣೆಯಂದು ಒಂದೇ ದಿನದಲ್ಲಿ ದಾಖಲೆ ಪ್ರಮಾಣದ 1.05 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿರುವುದು ಈ ಬಾರಿಯ ಫ್ಲವರ್‌ ಶೋನ ಮತ್ತೊಂದು ವಿಶೇಷವಾಗಿದೆ.

ಒಟ್ಟಿನಲ್ಲಿ ಗಂಗರ ಇತಿಹಾಸ, ಕಲೆ ಹಾಗೂ ಸಂಸ್ಕೃತಿಯನ್ನು ಹೂವಿನ ಲೋಕದಲ್ಲಿ ಪರಿಚಯಿಸುವ ಮೂಲಕ ಲಾಲ್‌ಬಾಗ್‌‍ ಫ್ಲವರ್‌ ಶೋ ಜನಮನ ಗೆದ್ದಿದ್ದು, ದಾಖಲೆಯ ಜನಸಂದಣಿಯೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.

RELATED ARTICLES
spot_img

Latest News