Thursday, December 12, 2024
Homeಬೆಂಗಳೂರುಸರ್ಕಾರಿ ಕೆಲಸದ ಆಸೆ ತೋರಿಸಿ 47 ಲಕ್ಷ ರೂ. ಚಿನ್ನಾಭರಣಕ್ಕೆ ಪಂಗನಾಮ ಹಾಕಿದ ಹೆಡ್ ಕಾನ್ಸ್‌ಟೇಬಲ್‌

ಸರ್ಕಾರಿ ಕೆಲಸದ ಆಸೆ ತೋರಿಸಿ 47 ಲಕ್ಷ ರೂ. ಚಿನ್ನಾಭರಣಕ್ಕೆ ಪಂಗನಾಮ ಹಾಕಿದ ಹೆಡ್ ಕಾನ್ಸ್‌ಟೇಬಲ್‌

Cheating Case

ಬೆಂಗಳೂರು, ಅ.20– ಮಕ್ಕಳಿಗೆ ಸರ್ಕಾರ ಹುದ್ದೆ ಕೊಡಿಸುವುದಾಗಿ ಮಹಿಳೆಯೊಬ್ಬರಿಂದ 47 ಲಕ್ಷ ರೂ. ಹಾಗೂ 857 ಗ್ರಾಂ ಚಿನ್ನಾಭರಣವನ್ನು ಪಡೆದು ವಂಚಿಸಿ ಜೀವ ಬೆದರಿಕೆ ಹಾಕಿ ಪರಾರಿಯಾಗಿರುವ ಸಿ ಎ ಆರ್ ಹೆಡ್ಕಾನ್ ಸ್ಟೇಬಲ್ ಹಾಗೂ ಆತನ ಇಬ್ಬರು ಸಹಚರರ ಪತ್ತೆಗೆ ನಂದಿನಿ ಲೇಔಟ್ ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಚಾಮರಾಜಪೇಟೆಯಲ್ಲಿರುವ ಸಿಎಆರ್ ಪೊಲೀಸ್ ವಿಭಾಗದ ಹೆಡ್ಕಾನ್ಸ್ಟೇಬಲ್ ಆಗಿರುವ ಎಚ್.ಆರ್. ಪ್ರಶಾಂತ್ ಕುಮಾರ್ ಅವರ ಇಬ್ಬರು ಸಹಚರರಾದ ಪ್ರಶಾಂತ್ ಹಾಗೂ ಅವರ ಪತ್ನಿ ದೀಪಾ ವಿರುದ್ಧ ವಂಚನೆಗೆ ಒಳಗಾಗಿರುವ ಭಾಗ್ಯ ಎಂಬುವವರು ಪೊಲೀಸರಿಗೆ ದೂರು ನೀಡಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ಘಟನೆ ವಿವರ: ಮಹಾಲಕ್ಷ್ಮೀ ಲೇಔಟ್ನಲ್ಲಿ ವಾಸವಾಗಿದ್ದ ಭಾಗ್ಯ ಎಂಬುವವರು ಕಳೆದ 2021ರಲ್ಲಿ ತಮ ಊರಿನವರೇ ಆದ ಹೆಡ್ಕಾನ್ಸ್ಟೇಬಲ್ ಪ್ರಶಾಂತ್ಕುಮಾರ್ ಅವರ ಪರಿಚಯವಾಗಿದ್ದು, ಆತ ನಾನು ಎಡಿಜಿಪಿ ಅವರ ಬಳಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದು, ನನಗೆ ಹಲವಾರು ಸರ್ಕಾರಿ ಅಧಿಕಾರಿಗಳು ಮತ್ತು ಕೆಪಿಎಸ್ಸಿ ಯಲ್ಲಿ ಪರಿಚಯವಿದ್ದು, ತಮ ಇಬ್ಬರು ಮಕ್ಕಳಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿದ್ದರು.

ಇದನ್ನು ನಂಬಿದ ಭಾಗ್ಯ ಅವರು ತಮ ಪತಿ ಮುದ್ದೇಗೌಡ ಅವರಿಗೆ ತಿಳಿಸಿದ್ದು, ಆರೋಪಿ ಪ್ರಶಾಂತ್ ಕುಮಾರ್ ವಾಸಿಸುತ್ತಿದ್ದ ಬ್ಯಾಟರಹಳ್ಳಿ ಸಮೀಪದ ಭರತ್ನಗರದಲ್ಲಿರುವ ಅವರ ಮನೆಗೆ ಹೋಗಿ ಮಾತುಕತೆ ನಡೆಸಿದ್ದರು ಆಗ ಆರೋಪಿ ಪ್ರಶಾಂತ್ ಡಿ ಮತ್ತು ಅವರ ಪತ್ನಿ ದೀಪಾ ಅವರು ಜೊತೆ ಮೊಬೈಲ್ನಲ್ಲಿ ಮಾತನಾಡಿಸಿದ್ದಾರೆ.

ಮಗ ಕಾರ್ತಿಕ್ಗೆ ಎಸ್ಡಿಎ ಮತ್ತು ಮಗಳಿಗೆ ಎಫ್ಡಿಎ ಸರ್ಕಾರಿ ಹುದ್ದೆಯನ್ನು ಮೂರು ತಿಂಗಳಲ್ಲಿ ನೇರ ನೇಮಕಾತಿ ಮೂಲಕ ಕೊಡಿಸುವುದಾಗಿ ಹೇಳಿ ಅದರಂತೆ ಎಸ್ಡಿಎಗೆ 15 ಲಕ್ಷ ಮತ್ತು ಎಫ್ಡಿಎ ಗೆ 25 ಲಕ್ಷ ಆಗುತ್ತದೆ ಎಂದು ಹೇಳಿದ್ದರು. ನಂತರ ಮುಂಗಡವಾಗಿ ಇಂತಿಷ್ಟು ಹಣ ನೀಡಬೇಕೆಂದು ಕೂಡ ಆರೋಪಿ ತಿಳಿಸಿದ್ದ.

ಇದನ್ನು ನಂಬಿ ಎರಡು- ಮೂರು ದಿನಗಳ ನಂತರ ನಾನು ಮತ್ತು ನನ್ನ ಮಗ ಕಾರ್ತಿಕ್ ಅವರ ಮನೆಗೆ ಹೋಗಿ 3.5 ಲಕ್ಷ ರೂ. ಹಣವನ್ನು ಪ್ರಶಾಂತ್ಕುಮಾರ್ ಅವರಿಗೆ ನೀಡಿದ್ದು, ನಂತರದ ದಿನಗಳಲ್ಲಿ ಪದೇ ಪದೇ ಫೋನ್ ಮಾಡಿ ಬೇಗ ಹಣ ನೀಡಬೇಕೆಂದು ಒತ್ತಾಯಿಸಿ ನಂತರ ನನ್ನ ಮನೆಗೆ ಪರಿಚಿತರೊಬ್ಬರನ್ನು ಕಳುಹಿಸಿ ಎರಡು ಲಕ್ಷ ರೂ. ಹಣವನ್ನು ಪಡೆದುಕೊಂಡಿದ್ದಾರೆ ಎಂದು ಭಾಗ್ಯ ಅವರು ದೂರಿನಲ್ಲಿ ವಂಚನೆಗೊಳಗಾದ ಘಟನೆಯನ್ನು ಎಳೆಎಳೆಯಾಗಿ ವಿವರಿಸಿದ್ದಾರೆ.

ಈ ನಡುವೆ ಪ್ರಶಾಂತ್ ಕುಮಾರ್ ಅವರು ಪ್ರಶಾಂತ್ ಡಿ ಅವರನ್ನು ಪರಿಚಯಿಸಿ ಇವರು ಮಂಜುನಾಥ್ ಪ್ರಸಾದ್ ಬಳಿ ಪಿಎ ಆಗಿದ್ದು, ನಿಮ ಮಕ್ಕಳಿಗೆ ಕೆಲಸ ಕೊಡುವ ವಿಚಾರದಲ್ಲಿ ಹಣ ಸಹಾಯ ಮಾಡುತ್ತಾರೆ ಎಂದು ಹೇಳಿ ಬೇಗ ಹಣ ನೀಡುವಂತೆ ಒತ್ತಾಯ ಮಾಡಿದ್ದಾರೆ.

ಆಗ ನಾನು ಮಲ್ಲೇಶ್ವರಂ ನ ಶ್ರೀರಾಮ ಕೋ-ಆಪರೇಟಿವ್ ಬ್ಯಾಂಕ್ನಲ್ಲಿ ನನ್ನ ಪತಿಯ ಹೆಸರಿನಲ್ಲಿ 30 ಲಕ್ಷ ರೂ. ಲೋನ್ ಮಾಡಿಸಿ ಅದರಲ್ಲಿ 10 ಲಕ್ಷ ರೂ.ಗಳನ್ನು ನನ್ನ ಮಗಳು ದಿವ್ಯಾ ಅವರ ಬ್ಯಾಂಕ್ ಖಾತೆಗೆ ಹಾಕಿದ್ದು, ನಂತರ ಅದನ್ನು ಆ್ಯಕ್ಸಿಸ್ ಬ್ಯಾಂಕ್ ಚೆಕ್ನ್ನು ಪ್ರಶಾಂತ್ ಕುಮಾರ್ ಹಾಗೂ ದೀಪಾ ಅವರಿಗೆ ನೀಡಿದ್ದಾರೆ.

ನಂತರ ಮಹೇಶ್ ಎಂಬುವರು ಈ ಹಣವನ್ನು ಬ್ಯಾಂಕ್ನಿಂದ ಪಡೆದುಕೊಂಡಿದ್ದಾರೆ. ಈ ನಡುವೆ ನಾವು ಎಸ್ಬಿಐ ಬ್ಯಾಂಕ್ನಲ್ಲಿ ಅಡಮಾನ ಇಟ್ಟಿದ್ದ 915 ಗ್ರಾಂ ಚಿನ್ನದ ವಡವೆಗಳನ್ನು ಪ್ರಶಾಂತ್ ಕುಮಾರ್ ದೀಪಾ ಅವರು ತಮ ಸ್ನೇಹಿತ ನಾರಾಯಣ ಸ್ವಾಮಿ ಕ್ಷಮಕ್ಷಮದಲ್ಲಿ ಕಳೆದ 2025ರ ಜನವರಿ 25ರಂದು ತಾವೇ 25 ಲಕ್ಷ ರೂ. ಗಳನ್ನು ಬ್ಯಾಂಕ್ಗೆ ಕಟ್ಟಿ ವಡವೆಗಳನ್ನು ಬಿಡಿಸಿಕೊಂಡು ಅದರಲ್ಲಿ 58 ಗ್ರಾಂ ವಡವೆ ಮಾತ್ರ ವಾಪಸ್ ನೀಡಿ 857 ಗ್ರಾಂ ವಡವೆ ಅವರೇ ತೆಗೆದುಕೊಂಡು ಹೋಗಿದ್ದಾರೆ.

ಇದೇ ರೀತಿ ಹಂತಹಂತವಾಗಿ ಹಣ ಪಡೆದು ಕಳೆದ ಏಪ್ರಿಲ್ 6ರಂದು ಆರೋಪಿ ಪ್ರಶಾಂತ್ ಅವರು ವಿಧಾನಸೌಧದ ಬಳಿ ಇರುವ ಎಂಎಸ್ ಬಿಲ್ಡಿಂಗ್ ಬಳಿ ಕರೆಸಿಕೊಂಡು ನಿಮ ಕೆಲಸ ಸಿಕ್ಕಿದೆ ಎಂದು ಹೇಳಿ ದಾಖಲಾತಿ ಪತ್ರವೊಂದನ್ನು ನೀಡುತ್ತಾರೆ. ಮತ್ತು ದಾಖಲಾತಿ ಪತ್ರಗಳನ್ನು ಕೂಡ ತೆಗೆದುಕೊಂಡು ಹೋಗಿದ್ದಾರೆ.

ಪುನಃ ಜೂನ್ 12ರಂದು ಆರೋಪಿ ಪ್ರಶಾಂತ್ ಡಿ. ಮನೆ ಬಳಿ ಬಂದು ಆಯ್ಕೆ ಪ್ರತಿ ನೀಡಿ 5 ಲಕ್ಷ ರೂ. ಹಣ ನೀಡುವಂತೆ ನಮಗೆ ಒತ್ತಾಯ ಮಾಡಿದಾಗ ಅನುಮಾನಗೊಂಡು ಅದನ್ನು ಪರಿಶೀಲಿಸಿದಾಗ ಅದು ನಕಲಿ ಎಂದು ತಿಳಿದು ಬಂದಿದೆ.

ಈ ಬಗ್ಗೆ ಪ್ರಶಾಂತ್ ಕುಮಾರ್ ಅವರನ್ನು ವಿಚಾರಿಸಿದಾಗ ಕೆಲಸ ಆಗಿಲ್ಲ. ನಿಮ 58 ಲಕ್ಷ ರೂ. ಗಳನ್ನು ವಾಪಸ್ ನೀಡುತ್ತೇವೆ ಎಂದು ಪ್ರಶಾಂತ್ ಮತ್ತು ದೀಪಾ ಅವರ ಜೊತೆಗೂಡಿ ಚೆಕ್ ನೀಡಿದ್ದಾರೆ. ನಾವು ಅದನ್ನು ಬ್ಯಾಂಕ್ಗೆ ನಗದೀಕರಣಕ್ಕೆ ಹಾಕಿದಾಗ ಅದು ಬೌನ್‌್ಸ ಆಗಿತ್ತು.
ಪುನಃ ಇದರ ಬಗ್ಗೆ ವಿಚಾರಿಸಲು ಹೋದಾಗ ನಮನ್ನು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಹಣ ಕೊಡುವುದಿಲ್ಲ. ಏನೂ ಬೇಕಾದರೂ ಮಾಡಿಕೊಳ್ಳಿ ಎಂದು ದಮಕಿ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ನನ್ನಿಂದ ಹಂತಹಂತವಾಗಿ 47 ಲಕ್ಷ ರೂ. ಹಾಗೂ 857 ಗ್ರಾಂ ಚಿನ್ನದ ವಡವೆಗಳನ್ನು ತೆಗೆದುಕೊಂಡು ಹೋಗಿ ವಂಚನೆ ಮಾಡಿರುವ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ್ದಾರೆ.ಪ್ರಸ್ತುತ ಆರೋಪಿಗಳು ತಲೆಮರೆಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ನಂದಿನಿ ಲೇಔಟ್ ಪೊಲೀಸರು ತನಿಖೆ ಕೈಗೊಂಡು ಪತ್ತೆಕಾರ್ಯ ಚುರುಕುಗೊಳಿಸಿದ್ದಾರೆ.

RELATED ARTICLES

Latest News