Thursday, December 12, 2024
Homeರಾಜ್ಯಸಾಲು ಸಾಲು ರಜೆ ಮುಗಿಸಿಕೊಂಡು ವಾಪಸಾಗುತ್ತಿದ್ದವರಿಗೆ ಟ್ರಾಫಿಕ್‌ ಜಾಮ್‌ ಕಿರಿಕಿರಿ..!

ಸಾಲು ಸಾಲು ರಜೆ ಮುಗಿಸಿಕೊಂಡು ವಾಪಸಾಗುತ್ತಿದ್ದವರಿಗೆ ಟ್ರಾಫಿಕ್‌ ಜಾಮ್‌ ಕಿರಿಕಿರಿ..!

ಬೆಂಗಳೂರು, ನ.4- ಸಾಲು ಸಾಲು ರಜೆ ಮುಗಿಸಿಕೊಂಡು ನಗರಕ್ಕೆ ಹಿಂದಿರುಗುತ್ತಿದ್ದ ಜನರು ಬೆಳ್ಳಂಬೆಳಗ್ಗೆ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿ ಪರದಾಡುತ್ತಿದ್ದ ದೃಶ್ಯಗಳು ನಗರಕ್ಕೆ ಪ್ರವೇಶಿಸುವ ಪ್ರಮುಖ ಮುಖ್ಯರಸ್ತೆಯಲ್ಲಿಂದು ಕಂಡು ಬಂದವು. ದೀಪಾವಳಿ, ಕನ್ನಡರಾಜ್ಯೋತ್ಸವ, ವಾರಾಂತ್ಯದ ರಜೆ ಹೀಗೆ ನಾಲ್ಕು ದಿನ ಸಾಲು ಸಾಲು ರಜೆ ಬಂದ ಹಿನ್ನೆಲೆಯಲ್ಲಿ ನಗರ ನಿವಾಸಿಗಳು ತಮ ತಮ ಊರು, ಪ್ರವಾಸಿ ತಾಣಗಳಿಗೆ ತರಳಿ ಎಂಜಾಯ್‌ ಮಾಡಿಕೊಂಡು ರಿಲ್ಯಾಕ್‌್ಸ ಮೂಡ್‌ನಲ್ಲಿ ನಗರಕ್ಕೆ ಪ್ರಯಾಣಿಸಿದ್ದು, ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿ ಗಂಟೆಗಟ್ಟಲೆ ಪರದಾಡಿದರು.

ಸುಮಾರು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ತುಮಕೂರು ರಸ್ತೆಯಲ್ಲಂತೂ ಎಲ್ಲಿ ನೋಡಿದರೂ ವಾಹನಗಳ ಸಾಲು ಕಂಡು ಬಂದವು. ಬಹುತೇಕ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು, ನೆಲಮಂಗಲದ ಬಳಿ ರಸ್ತೆಗಳು ಸಂಗಮವಾಗುತ್ತವೆ . ಅಲ್ಲಿಂದ ಪ್ರಾರಂಭವಾದ ಟ್ರಾಫಿಕ್‌ ಎಂಟನೇ ಮೈಲಿ, ಜಾಲಹಳ್ಳಿ ಕ್ರಾಸ್‌‍, ದಾಸರಹಳ್ಳಿ, ಗೊರಗುಂಟೆಪಾಳ್ಯ, ಯಶವಂತಪುರದಲ್ಲೂಂತೂ ಕಿಕ್ಕಿರಿದು ವಾಹನಗಳು ಒಮೆಲೆ ಬಂದಿದ್ದರಿಂದ ಕಿಲೋಮಿಟರ್‌ಗಟ್ಟಲೆ ಜಾಮ್‌ ಉಂಟಾಗಿ ನಿಂತಲ್ಲೇ ನಿಂತು ಸವಾರರು ಹಾಗೂ ಪ್ರಯಾಣಿಕರು ಹೈರಾಣಾರಾಗಿಬಿಟ್ಟಿದ್ದಾರೆ.

ನಿನ್ನೆ ಮಧ್ಯಾಹ್ನದಿಂದಲೆ ಜನರು ವಾಪಸಾಗುತ್ತಿದ್ದು, ರಾತ್ರಿಯಿಡಿ ವಾಹನ ಸಂಚಾರ ಮಾಮೂಲಿನಂತಿತ್ತು. ಪೊಲೀಸರಂತೂ ಸಂಚಾರ ದಟ್ಟಣೆ ನಿಯಂತ್ರಿಸುವಲ್ಲಿ ಸುಸ್ತು ಹೊಡೆದು ಹೋಗಿಬಿಟ್ಟಿದ್ದಾರೆ. ಅದೇ ರೀತಿ ಮೈಸೂರು ರಸ್ತೆಯಲ್ಲೂ ಸಹ ಇದೆ ವಾತಾವರಣ ಮುಂದು ವರೆದಿತ್ತು. ಇಲ್ಲಿ ಹೆಚ್ಚಾಗಿ ಕಾರುಗಳ ಸಾಲೇ ಕಂಡುಬಂದವು. ಮೈಸೂರು, ಕೊಡಗು, ಊಟಿ ಕಡೆ ಪ್ರವಾಸಕ್ಕೆ ತೆರಳಿದ್ದ ಜನರು ನಗರಕ್ಕೆ ವಾಪಸಾಗುತ್ತಿದ್ದು, ಎಕ್‌್ಸಪ್ರೆಸ್‌‍ವೇನಲ್ಲಿ ವೇಗವಾಗಿ ಬಂದ ವಾಹನಗಳಿಗೆ ನಗರದ ಪ್ರವೇಶ ದ್ವಾರ ಬಿಡದಿ ಬಳಿಯೇ ಸ್ಪೀಡ್‌ಗೆ ಬ್ರೇಕ್‌ ಹಾಕಿದಂತಾಯಿತು. ಅಷ್ಟರಮಟ್ಟಿಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಬಸ್‌‍, ರೈಲ್ವೆ ನಿಲ್ದಾಣಗಳಲ್ಲೂ ಜನವೋ ಜನ:
ಕೆಲವರು ತಮ ತಮ ಸ್ವಂತ ವಾಹನಗಳಲ್ಲಿ ತೆರಳಿದ್ದರೆ, ಇನ್ನೂ ಕೆಲವರು ಕೆಎಸ್‌‍ಆರ್‌ಟಿಸಿ, ಖಾಸಗಿ ಹಾಗೂ ರೈಲುಗಳಲ್ಲಿ ತೆರಳಿದ್ದು ವಾಪಸ್‌‍ ಬರಲು ಏಕಕಾಲಕ್ಕೆ ನಿಲ್ದಾಣಗಳಿಗೆ ಜನರು ಬಂದಿದ್ದು, ಜನ ಜಾತ್ರೆಯೇ ಸೇರಿತ್ತು. ಬೆಂಗಳೂರು ಕಡೆಗೆ ತೆರಳುವ ಸಾರಿಗೆ ಬಸ್‌‍ಗಳು ನಿಲ್ದಾಣಕ್ಕೆ ಎಂಟ್ರಿಯಾಗುತ್ತಿದ್ದಂತೆ ಜೇನು ನೋಣದಂತೆ ಪ್ರಯಾಣಿಕರು ಮುತ್ತಿಕೊಳ್ಳುತ್ತಿದ್ದ ದೃಶ್ಯಗಳು ಜಿಲ್ಲಾ, ತಾಲೂಕು ಕೇಂದ್ರಗಳ ಬಸ್‌‍ ನಿಲ್ದಾಣಗಳಲ್ಲಿ ಕಂಡು ಬಂದವು.

ಸೀಟಿರಲಿ ನಿಂತು ಕೊಳ್ಳಲು ಜಾಗ ಸಿಕ್ಕರೆ ಸಾಕು ಎಂದು ತಳ್ಳುತ್ತಾ-ನೂಕುತ್ತಾ ಬಸ್‌‍ ಹತ್ತುತ್ತಿದ್ದರು. ಕೆಲವರು ಮುಂಜಾಗ್ರತಾ ಕ್ರಮವಾಗಿ ಮುಂಗಡವಾಗಿ ಟಿಕೆಟ್‌ ಕಾಯ್ದಿರಿಸಿಕೊಂಡಿದ್ದು ಅಂತವರಿಗೇನೂ ಸಮಸ್ಯೆಯಾಗಲಿಲ್ಲ.ರೈಲುಗಳಲ್ಲೂ ಸಹ ಯಾವ ಬೋಗಿಗಳೂ ಖಾಲಿ ಇಲ್ಲದಂತೆ ಜನರು ತುಂಬಿ ತುಳುಕಿತ್ತಿದ್ದರು.

ಹೇಗೋ ಹರಸಾಹಸಪಟ್ಟು ನಗರ ಪ್ರವೇಶಿಸಿದ ಜನರು ಮನೆಗಳಿಗೆ ತೆರಳಲು ಇನ್ನಷ್ಟು ಪರದಾಡಿದರು. ಚಿಕ್ಕಮಗಳೂರು, ಹಾಸನ, ತುಮಕೂರು, ದಾವಣಗೆರೆ, ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದ ಜನರು ಮೆಜೆಸ್ಟಿಕ್‌ನಲ್ಲಿ ಬಸ್‌‍ ಇಳಿದು ತಮ ತಮ ಮನೆಗಳಿಗೆ ತೆರಳಲು ಬಿಎಂಟಿಸಿ ಬಸ್‌‍ ನಿಲ್ದಾಣಕ್ಕೆ ಬಂದಿದ್ದು, ಅಲ್ಲೂ ಕೂಡ ಜನಸಂದಣಿ ಕಂಡು ಬಂತು.

ಒಂದು ಕಡೆ ಲೇಟಾಯ್ತು ಕೆಲಸಕ್ಕೆ ಹೋಗಬೇಕು, ಮಕ್ಕಳು ಶಾಲಾ-ಕಾಲೇಜುಗಳಿಗೆ ತೆರಳಬೇಕು- ಹೀಗೆ ಈ ಟ್ರಾಫಿಕ್‌ ಯಾವಾಗ ಕ್ಲಿಯರ್‌ ಆಗುತ್ತದೆಯೋ ಎಂದು ಸಂಕಟಪಡುವಂತಾಗಿತು. ಒಟ್ಟಿನಲ್ಲಿ ರಜೆ ಮಗಿಸಿಕೊಂಡು ರಿಲ್ಯಾಕ್‌್ಸ ಮೂಡ್‌ನಲ್ಲಿ ಬಂದ ಜನರು ಸಂಚಾರ ದಟ್ಟಣೆಯಲ್ಲಿ ಸಿಲುಕಿ ಕಷ್ಟ ಪಡುವಂತಾಗಿತ್ತು.

RELATED ARTICLES

Latest News