Thursday, December 5, 2024
Homeಇದೀಗ ಬಂದ ಸುದ್ದಿವಕ್ಫ್ ವಿರುದ್ಧ ಕೆರಳಿದ ಕೇಸರಿ ಪಡೆ: ಜಮೀರ್‌ ರಾಜಿನಾಮೆಗೆ ಬಿಜೆಪಿ ಆಗ್ರಹ

ವಕ್ಫ್ ವಿರುದ್ಧ ಕೆರಳಿದ ಕೇಸರಿ ಪಡೆ: ಜಮೀರ್‌ ರಾಜಿನಾಮೆಗೆ ಬಿಜೆಪಿ ಆಗ್ರಹ

ಬೆಂಗಳೂರು,ನ.4- ವಕ್ಫ್ ಭೂಮಿ ವಿಚಾರವಾಗಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರನ್ನು ಸಂಪುಟದಿಂದ ಕೈಬಿಡುವುದು, ತಕ್ಷಣವೇ ಗೆಜೆಟ್‌ ಅಧಿಸೂಚನೆ ಹಿಂಪಡೆಯುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಿದೆ. ರಾಜಧಾನಿ ಬೆಂಗಳೂರು, ಮೈಸೂರು, ಚಾಮರಾಜನಗರ, ಹಾಸನ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ, ಹಾವೇರಿ, ಧಾರವಾಡ, ಬೆಳಗಾವಿ, ಕಲಬುರಗಿ, ಬಳ್ಳಾರಿ, ರಾಯಚೂರು, ಕೊಪ್ಪಳ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತು.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸಿದರೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಬೆಂಗಳೂರಿನ ಕೆಆರ್‌ಪುರಂ ಹೀಗೆ ಸಂಸದರು, ಶಾಸಕರು, ವಿಧಾನಪರಿಷತ್‌ ಸದಸ್ಯರು, ಮಾಜಿ ಶಾಸಕರು, ಪಕ್ಷದ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಜಿಲ್ಲಾ ಕಚೇರಿ, ತಹಸೀಲ್ದಾರ್‌ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಿ ಸರ್ಕಾರದ ಮೇಲೆ ಟೀಕೆಗಳ ಸುರಿಮಳೆಗೈದರು.

ಬಳ್ಳಾರಿಯಲ್ಲಿ ವಿಜಯೇಂದ್ರ ಅವರಿಗೆ ಶಾಸಕ ಜನಾರ್ಧನ ರೆಡ್ಡಿ, ಮಾಜಿ ಸಚಿವ ಬಿ.ಶ್ರೀರಾಮುಲು, ಸಂಡೂರು ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು, ಸಂಸದ ಗೋವಿಂದ ಕಾರಜೋಳ ಮತ್ತಿತರರು ಸಾಥ್‌ ನೀಡಿದರು. ಈ ವೇಳೆ ಮಾತನಾಡಿದ ವಿಜಯೇಂದ್ರ, ಪ್ರಧಾನಿ ನರೇಂದ್ರಮೋದಿ ಅವರು ಈ ಹಿಂದೆ ವಿಧಾನಸಭೆ ಚುನಾವಣೆಯ ಪ್ರಚಾರದ ವೇಳೆ ಏನು ಭವಿಷ್ಯ ನುಡಿದಿದ್ದರೋ ಅದು ಇಂದು ಅಕ್ಷರಶಃ ಸತ್ಯವಾಗುತ್ತಿದೆ. ಕಾಂಗ್ರೆಸ್‌‍ ಅಧಿಕಾರಕ್ಕೆ ಬಂದರೆ ನಿಮ ಆಸ್ತಿಗಳನ್ನು ಕಿತ್ತುಕೊಳ್ಳುತ್ತದೆ ಎಂದು ಹೇಳಿದ್ದು ಇಂದು ನಿಜವಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಇದುವರೆಗೂ ನೋಟಿಸ್‌‍ ಕೊಟ್ಟಿಲ್ಲ ಎಂದು ಹೇಳುತ್ತಿದ್ದ ಸರ್ಕಾರ ಈಗ ರೈತರು ಬೀದಿಗೆ ಬಂದ ಮೇಲೆ ನೋಟಿಸ್‌‍ ಕೊಡಬೇಡಿ ಎಂದು ಹೇಳಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಮತದಾರರು ತಿರುಗಿ ಬೀಳಬಹುದೆಂಬ ಭಯದಿಂದ ಈಗ ನೋಟಿಸ್‌‍ ನೀಡದಂತೆ ಸೂಚಿಸಿರುವುದಾಗಿ ಹೇಳುತ್ತಾರೆ. ಫಲಿತಾಂಶ ಬಂದ ನಂತರ ನೋಟಿಸ್‌‍ ಕೊಡುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿಯಾದರೂ ಏನು ಪ್ರಶ್ನಿಸಿದರು.

ನಮ ಹೋರಾಟ ಯಾವುದೇ ವ್ಯಕ್ತಿ ಅಥವಾ ಧರ್ಮದ ವಿರುದ್ಧವಲ್ಲ. ನಮ ಹಿಂದೂಗಳ ಆಸ್ತಿ ಉಳಿಯಬೇಕೆಂಬುದೇ ನಮ ಕಳಕಳಿ. ರೈತರ ಕೃಷಿ ಜಮೀನು, ದೇವಸ್ಥಾನ, ಸಮುದಾಯ ಭವನ, ಕಟ್ಟಡಗಳು ಈಗ ಎಲ್ಲದಕ್ಕೂ ನೋಟಿಸ್‌‍ ಕೊಟ್ಟರೆ ನಾವು ಎಲ್ಲಿಗೆ ಹೋಗಬೇಕೆಂದು ವಿಜಯೇಂದ್ರ ಸಿಡಿಮಿಡಿಗೊಂಡರು. ಕೆ.ಆರ್‌.ಪುರಂನಲ್ಲಿ ಪ್ರತಿಭಟನೆ ನಡೆಸಿದ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ಹಿಂದೂಗಳಿಗೆ ಸೇರಿದ ಆಸ್ತಿಯನ್ನು ಕಿತ್ತುಕೊಂಡು ವಕ್‌್ಫಗೆ ಸೇರಿಸಲು ಸಚಿವ ಜಮೀರ್‌ ಅಹಮದ್‌ ಖಾನ್‌ಗೆ ಅಧಿಕಾರ ಕೊಟ್ಟವರು ಯಾರು? ಒಂದು ವೇಳೆ ವಕ್‌್ಫ ಬೋರ್ಡ್‌ಗೆ ಆಸ್ತಿ ನೀಡಬೇಕೆಂಬ ಕಳಕಳಿ ಅವರಿಗಿದ್ದರೆ ಜಮೀರ್‌ಗೆ ಸೇರಿದ್ದ ಸ್ವಂತ ಜಮೀನನ್ನು ನೀಡಲಿ ಅದಕ್ಕೆ ನಮ ತಕರಾರರು ಎಂದು ಸ್ಪಷ್ಟಪಡಿಸಿದರು.

ವಿಧಾನಸೌಧದಲ್ಲಿ ಮೂವರು ಸಚಿವರು ಪತ್ರಿಕಾಗೋಷ್ಠಿ ನಡೆಸಿ ನಾವು ಯಾವುದೇ ನೋಟಿಸ್‌‍ ಕೊಡುವುದಿಲ್ಲ ಎಂದು ಹೇಳಿದ್ದರು. ಅದಾದ ನಂತರವೂ ಅನೇಕ ಕಡೆ ರೈತರು ದೇವಸ್ಥಾನ ಮತ್ತಿತರ ಕಡೆ ನೋಟಿಸ್‌‍ ಕೊಡಲಾಗುತ್ತಿದೆ. ಇದನ್ನು ಪ್ರಶ್ನೆ ಮಾಡಿದರೆ ನಾವು ರಾಜಕೀಯ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಇದು ನಾಡಿನ ದೌರ್ಭಾಗ್ಯ ಎಂದು ವ್ಯಂಗ್ಯವಾಡಿದರು.
ಬೇಡಿಕೆಗಳೇನು?:

  • 1974ರಲ್ಲಿ ಸರ್ಕಾರ ಹೊರಡಿಸಿದ್ದ ಗೆಜೆಟ್‌ ನೊಟೀಫಿಕೇಶನ್‌ ರದ್ದು ಮಾಡಬೇಕು.
  • ಈಗ ರೈತರಿಗೆ ಕೊಟ್ಟಿರುವ ನೊಟೀಸ್‌‍ ವಾಪಸ್‌‍ ಪಡೆಯಬೇಕು.
  • ಇನ್ನು ಮುಂದೆ ಯಾವುದೇ ರೈತರಿಗೆ ನೊಟೀಸ್‌‍ ಕೊಡಬಾರದು.
  • ರೈತರ ಜಮೀನಿನಲ್ಲಿ ವಕ್‌್ಫ ಆಸ್ತಿ ಎಂದುನಮೂದು ಆಗಿರುವ ದಾಖಲಾತಿ ರೈತರ ಹೆಸರಿಗೇ ಮಾಡಿಕೊಡಬೇಕು.
  • ನೊಟೀಸ್‌‍ ಕೊಟ್ಟ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಆಗಬೇಕು.
  • ರೈತರಿಗೆ ವಿರೋಧಿಯಾಗಿರುವ ಹಾಗೂ ವಕ್‌್ಫ ನೊಟೀಸ್‌‍ ಕೊಡಲು ಪ್ರೇರೇಪಿಸಿದ ಸಚಿವ ಜಮೀರ್‌ ತಲೆ ದಂಡವಾಗಬೇಕು.
RELATED ARTICLES

Latest News