Sunday, May 5, 2024
Homeರಾಜ್ಯಪೀಣ್ಯ ಮೇಲ್ಸೇತುವೆ ಬಂದ್, ವಾಹನ ಸವಾರರು-ಪ್ರಯಾಣಿಕರು ಹೈರಾಣು

ಪೀಣ್ಯ ಮೇಲ್ಸೇತುವೆ ಬಂದ್, ವಾಹನ ಸವಾರರು-ಪ್ರಯಾಣಿಕರು ಹೈರಾಣು

ಬೆಂಗಳೂರು, ಜ.17- ರಾಜಧಾನಿಯಿಂದ ಪ್ರಮುಖ ಜಿಲ್ಲೆ ಹಾಗೂ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ತುಮಕೂರು ರಸ್ತೆ ಪೀಣ್ಯ ಎಲಿವೇಟೆಡ್ ಹೈವೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿರುವ ಹಿನ್ನಲೆಯಲ್ಲಿ ಇಂದು ವಾಹನ ಸವಾರರು ಸಂಚಾರ ದಟ್ಟಣೆಯಲ್ಲಿ ಸಿಲುಕಿ ಪರದಾಡುವಂತಾಗಿತ್ತು.

ಮೇಲ್ಸೇತುವೆಯಲ್ಲಿ ವಯಾಡಕ್ಟ್ ದುರಸ್ಥಿ ಕಾರ್ಯವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಕೈಗೊಳ್ಳಲಾಗಿದ್ದು ಇದೀಗ ವಯಾಡಕ್ಟ್‍ನ ಗುಣಮಟ್ಟ ಮತ್ತು ಸಮಗ್ರತೆ ಪರಿಶೀಲನೆಗಾಗಿ ಲೋಡ್ ಟೆಸ್ಟಿಂಗ್ ಮಾಡುತ್ತಿರುವ ಹಿನ್ನಲೆಯಲ್ಲಿ ಕಳೆದ ರಾತ್ರಿ 11 ರಿಂದ ಜ.19ರ ಬೆಳಗ್ಗೆ 11 ಗಂಟೆವೆರಗೂ ಮೇಲ್ಸೇತುವೆ ಮೇಲೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದ್ದು ಸರ್ವೀಸ್ ರಸ್ತೆಯಲ್ಲಿ ಸಂಚರಿಸುವಂತೆ ಸಂಚಾರಿ ಪೊಲೀಸರು ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮನವಿ ಮಾಡಿದ್ದಾರೆ.

ತುಮಕೂರು ರಸ್ತೆಯಲ್ಲಿ ಸಾಮಾನ್ಯವಾಗಿ ವಾಹನಗಳ ದಟ್ಟಣೆ ಹೆಚ್ಚಾಗಿಯೇ ಇರುತ್ತದೆ ಹಗಲು ರಾತ್ರಿ ಒಂದೇ ರಿತಿ ಇರುತ್ತದೆ. ಲಕ್ಷಾಂತರ ವಾಹನಗಳು ಈ ರಸ್ತೆಯ ಮೂಲಕ ಸಂಚರಿಸುತ್ತವೆ. ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ದಾವಣಗೆರೆ, ಬಳ್ಳಾರಿ, ರಾಯಚೂರು, ಬೆಳಗಾವಿ, ಹುಬ್ಬಳ್ಳಿ. ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುತ್ತದೆ ಜೊತೆಗೆ ಪುಣೆ, ಮುಂಬೈ, ಮಹಾರಾಷ್ಟ, ರಾಜ್ಯಗಳಿಗೂ ಸಹ ಇದೆ ರಸ್ತೆ ಬಳಸಲಾಗುತ್ತದೆ ಹಾಗಾಗಿ ಈ ರಸ್ತೆ ಸದಾ ಒತ್ತಡದಿಂದ ಕೂಡಿರುತ್ತೆ.

ಮೂರು ದಿನ ಮೇಲ್ಸೇತುವೆ ಬಂದ್ ಆದ ಹಿನ್ನೆಲೆಯಲ್ಲಿ ಏಕ ಕಾಲದಲ್ಲಿ ಭಾರಿ ಹಾಗೂ ಲಘು ವಾಹನಗಳು ಸರ್ವಿಸ್ ರಸ್ತೆಗೆ ಇಳಿದಿದ್ದರಿಂದ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು ಗೊರಗುಂಟೆ ಪಾಳ್ಯದಿಂದ ಎಂಟನೇ ಮೈಲಿ ತಲುಪಲು ಗಂಟೆಗಳೇ ಬೇಕಾಗುತ್ತಿದೆ. ಜೊತೆಗೆ ಸಿಗ್ನಲ್‍ನಿಂದ ಪ್ರಯಾಣಿಕರು ಹಾಗೂ ವಾಹನ ಸವಾರರು ರಾತ್ರಿಯಿಂದ ಟ್ರಾಫಿಕ್‍ನಲ್ಲಿ ಸಿಲುಕಿ ಹೈರಾಣರಾಗಿದ್ದಾರೆ. ಸಂಚಾರ ದಟ್ಟಣೆ ನಿಯಂತ್ರಿಸಲು ಸಂಚಾರಿ ಪೊಲೀಸರು ಹರಸಾಹಸ ಪಡುವಂತಾಗಿದೆ.

ಕೆನಡಾದಲ್ಲಿ ಕ್ಷೀಣಿಸಿದ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ

ಮೇಲ್ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಎರಡು ವರ್ಷಗಳೇ ಆಗಿದೆ. ಅಂದಿನಿಂದ ಬಸ್ ಲಾರಿಗಳು ಸರ್ವಿಸ್ ರಸ್ತೆಯಲ್ಲೇ ಸಂಚರಿಸುತ್ತಿವೆ. ಈಗ ಮೇಲ್ಸೇತುವೆ ಬಂದ್ ಆಗಿದ್ದರಿಂದ ಲಘುವಾಹನಗಳೂ ಕೂಡ ಸರ್ವಿಸ್ ರಸ್ತೆಯಲ್ಲಿ ಸಂಚಸರಿಸುತ್ತಿರುವುದರಿಂದ ದಟ್ಟಣೆ ಹೆಚ್ಚಾಗಿದೆ . ಈ ಮಾರ್ಗಕ್ಕೆ ಬರುವ ಸವಾರರು ಆದಷ್ಟು ಬದಲಿ ಮಾರ್ಗ ಬಳಸಿ ಇಲ್ಲವೆ ನಿಮ್ಮ ಪ್ರಯಾಣವನ್ನು ಮೂರು ದಿನ ಮೂಂದೂಡಿ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಮೊದಲ ದಿನವಾದ ಇಂದು ಬೆಳಗ್ಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮೇಲ್ಸೇತುವೆ ಮೇಲೆ ಲೋಡ್ ಮಾಡಲಾಗಿದ್ದ ಭಾರಿ ಲಾರಿಗಳನ್ನು ಪರೀಕ್ಷಾರ್ಥವಾಗಿ ವಯಾಡಕ್ಟ್ ನ ಸಮಗ್ರತೆ ಹಾಗೂ ಗುಣಮಟ್ಟವನ್ನು ಹಂತ ಹಂತವಾಗಿ ಪರಿಶೀಲಿಸುತ್ತಿದ್ದಾರೆ.

RELATED ARTICLES

Latest News