Monday, October 7, 2024
Homeರಾಜ್ಯಭಾರತ್‍ ಜೋಡೋ ನ್ಯಾಯಯಾತ್ರೆಗೆ ಬಿಜೆಪಿ ಅಡ್ಡಿ ಖಂಡಿಸಿ ಪ್ರತಿಭಟನೆ

ಭಾರತ್‍ ಜೋಡೋ ನ್ಯಾಯಯಾತ್ರೆಗೆ ಬಿಜೆಪಿ ಅಡ್ಡಿ ಖಂಡಿಸಿ ಪ್ರತಿಭಟನೆ

ಬೆಂಗಳೂರು,ಜ.23- ರಾಹುಲ್‍ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಅಸ್ಸಾಂನಲ್ಲಿ ಬಿಜೆಪಿ ಸರ್ಕಾರ ಅಡ್ಡಿಪಡಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ನಗರದ ಫ್ರೀಡಂಪಾರ್ಕ್‍ನಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ದೇಶಾದ್ಯಂತ ಪ್ರತಿ ಜಿಲ್ಲೆ ಹಾಗೂ ಬ್ಲಾಕ್ ಕಾಂಗ್ರೆಸ್ ಮಟ್ಟದಲ್ಲಿ ಪ್ರತಿಭಟನೆಗಳನ್ನು ನಡೆಸಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣಭೈರೇಗೌಡ, ಹಿರಿಯ ಕಾಂಗ್ರೆಸಿಗ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ವಿಧಾನಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಡಿ.ಕೆ.ಶಿವಕುಮಾರ್ ಮಾತನಾಡಿ, ಬಿಜೆಪಿಯವರಿಗೆ ರಾಹುಲ್‍ಗಾಂಧಿ ಯಾತ್ರೆಯಿಂದ ಭಯ ಶುರುವಾಗಿದೆ. ಅದಕ್ಕಾಗಿ ಅದನ್ನು ನಿಲ್ಲಿಸುವ ಷಡ್ಯಂತ್ರ ನಡೆಸುತ್ತಿದ್ದಾರೆ. ಆದರೆ ಕಾಂಗ್ರೆಸಿಗರು ಬಿಜೆಪಿಯವರ ತಂತ್ರಗಾರಿಕೆಗಳು, ಬೆದರಿಕೆ ಹಾಗೂ ಕೇಸುಗಳಿಗೆ ಹೆದರುವುದಿಲ್ಲ ಎಂದರು.ದೇಶಾದ್ಯಂತ ರಾಹುಲ್‍ಗಾಂಧಿ ಪರವಾಗಿ ಪ್ರತಿಭಟನೆ ನಡೆಸಿ ಯಾತ್ರೆಯನ್ನು ಮುಂದುವರೆಸಬೇಕು ಎಂಬ ಸಂದೇಶ ರವಾನಿಸಿದ್ದೇವೆ. ಬಿಜೆಪಿಯವರ ಹುನ್ನಾರಗಳಿಗೆ ದೇಶದ ಜನ ತಕ್ಕ ಉತ್ತರ ನೀಡುತ್ತಾರೆ ಎಂದು ಹೇಳಿದರು.

ಬಿಜೆಪಿಯವರಿಗೆ ಅಧಿಕಾರ ಕಳೆದುಕೊಂಡ ಬಳಿಕ ಹೊಟ್ಟೆಹುರಿ ಹೆಚ್ಚಾಗಿದೆ. ಅದಕ್ಕಾಗಿ ಕೈಕೈ ಹಿಸುಕಿಕೊಂಡು ರಾಜ್ಯದಲ್ಲಿ ನಮ್ಮನ್ನು ಹಿಂದೂ ವಿರೋಧಿಗಳು ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಾವು ಹಿಂದೂಗಳೇ. ರಾಮನನ್ನು ಪೂಜಿಸುತ್ತೇವೆ. ಧಾರ್ಮಿಕ ಪಾಠಗಳನ್ನು ಬಿಜೆಪಿಯವರಿಂದ ಕಲಿಯಬೇಕಿಲ್ಲ. ಮುಜರಾಯಿ ಇಲಾಖೆಯಿಂದ ಸರ್ಕಾರಿ ಆದೇಶ ಹೊರಡಿಸಿ ವಿಶೇಷ ಪೂಜೆಗೆ ಅವಕಾಶ ಮಾಡಿಕೊಟ್ಟಿದ್ದೆವು ಎಂದರು.

ಶ್ರೀರಾಮನಿಗೆ 11 ಕೋಟಿ ಮೌಲ್ಯದ ವಜ್ರಖಚಿತ ಕಿರೀಟ ಸಮರ್ಪಿಸಿದ ಉದ್ಯಮಿ ಮುಖೇಶ್ ಪಟೇಲ್‍

ಮುಂದಿನ ಲೋಕಸಭೆ ಚುನಾವಣೆ ವೇಳೆ ಬಿಜೆಪಿ, ಜೆಡಿಎಸ್ ಒಂದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೂ ತಲೆ ಕೆಡಿಸಿಕೊಳ್ಳಬೇಡಿ. ಕಾರ್ಯಕರ್ತರಿಗೆ ವಹಿಸಲಾದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿ. ವಿಧಾನಪರಿಷತ್ ಮತ್ತು ಲೋಕಸಭಾ ಚುನಾವಣೆಯನ್ನು ಸ್ವಂತ ಜವಾಬ್ದಾರಿ ಎಂದು ಭಾವಿಸಿ ಕೆಲಸ ಮಾಡಬೇಕು ಎಂದು ಹೇಳಿದರು. ಇನ್ನು ಮುಂದೆ ಕಾರ್ಯಕರ್ತರು, ಮುಖಂಡರು ನನ್ನ ಮನೆಗೆ ಬರುವುದನ್ನು ನಿಲ್ಲಿಸಬೇಕು. ಪ್ರತಿದಿನ ರಾತ್ರಿ 2.30 ರವರೆಗೂ ಕಾದು ಕುಳಿತುಕೊಳ್ಳುವುದನ್ನು ನಿಲ್ಲಿಸಬೇಕು. ಪಕ್ಷದ ಕೆಲಸಗಳಿದ್ದರೆ ಕಾಂಗ್ರೆಸ್ ಕಚೇರಿಯಲ್ಲಿ, ಸರ್ಕಾರದ ಕೆಲಸ ಇದ್ದರೆ ಉಪಮುಖ್ಯಮಂತ್ರಿಯವರ ಕ್ವಾರ್ಟಸ್‍ಗೆ ಬಂದು ಭೇಟಿ ಮಾಡಬೇಕು ಎಂದು ಹೇಳಿದರು.

ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಶ್ರೀರಾಮ ಕೇವಲ ಹಿಂದೂಗಳಿಗೆ ಸೇರಿದ ಆಸ್ತಿಯಲ್ಲ. ಪ್ರತಿಯೊಬ್ಬರೂ ರಾಮನನ್ನು ಗೌರವಿಸುತ್ತಾರೆ. ಅವರು ಹಾಕಿಕೊಟ್ಟ ಹಾದಿಯಲ್ಲೇ ನಡೆಯುತ್ತಾರೆ. ಆದರೆ ಬಿಜೆಪಿಯವರು ರಾಜಕೀಯಕ್ಕಾಗಿ ರಾಮನನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದರು. ಆಂಜನೇಯನನ್ನು ಗೌರವಿಸುತ್ತೇವೆ. ಆದರೆ ಬಜರಂಗಬಲಿಯ ಹೆಸರಿನಲ್ಲಿ ಬಜರಂಗದಳ ಕಟ್ಟಿಕೊಂಡು ಮಹಿಳೆಯರ ಮೇಲೆ ದೌರ್ಜನ್ಯ ಮಾಡುವುದನ್ನು ಸಹಿಸಲಾಗುವುದಿಲ್ಲ. ಇವರು ಏನೆಲ್ಲಾ ಅಪಪ್ರಚಾರ ಮಾಡಿದರೂ ಜನ ತಕ್ಕ ಪಾಠ ಕಲಿಸಿದ್ದಾರೆ. ರಾಜಸ್ಥಾನದಲ್ಲಿ ವಾಮಮಾರ್ಗ ಹಿಡಿದು ಅಕಾರ ಹಿಡಿದಿದ್ದಾರೆ. ಉಪಚುನಾವಣೆಯಲ್ಲಿ ಸ್ರ್ಪಸಿದ್ದ ಬಿಜೆಪಿಯ ಸಚಿವನನ್ನೆ ಸೋಲಿಸಿದ್ದಾರೆ ಎಂದು ಹೇಳಿದರು.

ಕಾಂಗ್ರೆಸಿಗರು ಬ್ರಿಟಿಷರ ಗುಂಡಿಗೇ ಹೆದರಲಿಲ್ಲ. ಬಿಜೆಪಿಯವರ ಬೆದರಿಕೆಗೆ ಬಗ್ಗುತ್ತೇವಾ? ರಾಜಕೀಯದಲ್ಲಿ ಸೋಲು-ಗೆಲುವು ಸಾಮಾನ್ಯ. ಬಿಜೆಪಿಯವರು ಶಾಶ್ವತವಾಗಿ ಅಕಾರದಲ್ಲಿರುತ್ತಾರೆ ಎಂಬ ಭ್ರಮೆಯಲ್ಲಿದ್ದಾರೆ. ಆದರೆ ಅದು ಶೀಘ್ರವೇ ಸುಳ್ಳಾಗಲಿದೆ. ಕಾಂಗ್ರೆಸ್‍ನಲ್ಲಿ ಬೆಳೆದು ಉಪಮುಖ್ಯಮಂತ್ರಿಯಾಗಿ ಬಿಜೆಪಿ ಸೇರಿ ಅಸ್ಸಾಂನ ಮುಖ್ಯಮಂತ್ರಿಯಾಗಿರುವ ಹೀಮಂತ್ ಭಿಶ್ವಾಸ್ ಕಾಂಗ್ರೆಸ್ ಯಾತ್ರೆಯನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ರಾಹುಲ್‍ಗಾಂಯವರನ್ನು ದೇವಸ್ಥಾನಕ್ಕೆ ಹೋಗದಂತೆ ನಿರ್ಬಂಸಲಾಗಿದೆ.

ಈ ಹಿಂದೆ ಸವರ್ಣೀಯರು ಸೇರಿದಂತೆ ಮೇಲ್ವರ್ಗದವರು ಮಾತ್ರ ದೇವಸ್ಥಾನಕ್ಕೆ ಹೋಗಬೇಕು ಎಂಬ ಪದ್ಧತಿ ಮಾಡಿದ್ದರು. ಈಗ ಬಿಜೆಪಿಯವರು ಅದನ್ನೇ ಮತ್ತೆ ಜಾರಿಗೊಳಿಸುತ್ತಿದ್ದಾರೆ ಎಂದು ದೂರಿದರು. ಬಿಜೆಪಿಯವರಿಗೆ ಅಭಿವೃದ್ಧಿ ಬೇಕಿಲ್ಲ. ಜಿಡಿಪಿ ಕುಸಿದರೂ ಚಿಂತೆಯಿಲ್ಲ, ಕೋವಿಡ್ ಸರಿಯಾಗಿ ನಿಯಂತ್ರಿಸಲಿಲ್ಲ. ಕಾರ್ಮಿಕರನ್ನು ಬೀದಿಪಾಲು ಮಾಡಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

Latest News