Sunday, May 5, 2024
Homeರಾಜ್ಯಜನಾರ್ದನ ರೆಡ್ಡಿ ಮೇಲೆ ಕಾಂಗ್ರೆಸ್ ನಾಯಕರು ಆರೋಪ ಸತ್ಯಕ್ಕೆ ದೂರವಾದದ್ದು : ಭೀಮಾಶಂಕರ ಪಾಟೀಲ್

ಜನಾರ್ದನ ರೆಡ್ಡಿ ಮೇಲೆ ಕಾಂಗ್ರೆಸ್ ನಾಯಕರು ಆರೋಪ ಸತ್ಯಕ್ಕೆ ದೂರವಾದದ್ದು : ಭೀಮಾಶಂಕರ ಪಾಟೀಲ್

ಬೆಂಗಳೂರು,ಮಾ.29-ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕರು,ಮಾಜಿ ಸಚಿವರಾದ ಜಿ ಜನಾರ್ದನ ರೆಡ್ಡಿ ಅವರ ಮೇಲೆ ಕಾಂಗ್ರೆಸ್ ಪಕ್ಷ ನಾಯಕರು ನೀಡಿರುವ ದೂರು ಸತ್ಯಕ್ಕೆ ದೂರವಾದದ್ದು ಎಂದು ಬಿಜೆಪಿ ಮುಖಂಡರು ಭೀಮಾಶಂಕರ ಪಾಟೀಲ್ ಹೇಳಿದ್ದಾರೆ.

ಬಿಜೆಪಿ ಪಕ್ಷದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ವಿಲೀನಗೊಳಿಸುವ ಮೊದಲು ಕಾನೂನು ಬದ್ಧವಾದ ಎಲ್ಲಾ ಪ್ರಕ್ರಿಯೆಗಳನ್ನು ಮಾಡಲಾಗಿದೆ.ವೀಲಿನಕ್ಕೆ ಮುನ್ನ ಪಕ್ಷದ ರಾಜ್ಯ ಪದಾದಿಕಾರಿಗಳ ಸಭೆ ಕರೆದು ಪಕ್ಷದ ಅಧ್ಯಕ್ಷರಾಗಿದ್ದ ಜಿ ಜನಾರ್ದನ ರೆಡ್ಡಿ ಅವರು ತಗೆದುಕೊಳ್ಳುವ ತೀರ್ಮಾನಗಳಿಗೆ ಬದ್ಧರಾಗಿ ಇರುವುದಾಗಿ ಸರ್ವಾನುಮತದ ಬೆಂಬಲ ನೀಡಿಲಾಗಿತ್ತು.

ನಂತರ ವೀಲಿನ ಪ್ರಕ್ರಿಯೆ ಮತ್ತು ಬಿಜೆಪಿ ಸೇರ್ಪಡೆ ಸಂಪೂರ್ಣ ಕಾನೂನು ಬದ್ಧವಾಗಿಯೇ ನಡೆದಿದೆ ಆದರೆ ಕಾಂಗ್ರೆಸ್ ಪಕ್ಷ ನಾಯಕರಜನಾರ್ದನ ರೆಡ್ಡಿ ಅವರ ಮೇಲಿನ ಭಯಕ್ಕೆ ಸ್ಪೀಕರ್‍ಗೆ ದೂರು ನೀಡಿ ಕುಟಿಲ ತಂತ್ರ ಅನುಸರಿಸುತ್ತಿದೆ ಎಂದು ದೂರಿದ್ದಾರೆ.

ಜನಾರ್ದನ ರೆಡ್ಡಿ ಅವರು ರಾಜ್ಯ ರಾಜಕಾರಣದ ದೊಡ್ಡ ಶಕ್ತಿ.ಲೋಕಸಭಾ ಚುನಾವಣೆಯಲ್ಲಿ ಅವರನ್ನು ರಾಜಕೀಯವಾಗಿ ಎದುರಿಸಲು ಆಗದೆ ಈ ರೀತಿಯ ಕುತಂತ್ರ ಕಾಂಗ್ರೆಸ್ ಮಾಡುತ್ತಿದೆ.ಇಂಥಹವುಗಳನ್ನು ನಮ್ಮ ನಾಯಕರು ಅವರ ರಾಜಕೀಯ ಜೀವನದಲ್ಲಿ ಅದೇಷ್ಟೋ ನೋಡಿದ್ದಾರೆ ಇವುಗಳಿಗೆ ಬೆದರುವ ಜಾಯಮಾನ ನಮ್ಮ ನಾಯಕರದಲ್ಲ ಎಂದಿದ್ದಾರೆ.

ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷವನ್ನು ಗೆಲ್ಲಿಸಿಕೊಂಡು ಬಂದು ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಮುನ್ನುಡಿ ಬರೆಯುವ ಸಂಕಲ್ಪ ನಾವು ನಮ್ಮ ನಾಯಕರು ಮಾಡುತ್ತೇವೆ ಕಾಂಗ್ರೆಸ್ ಪಕ್ಷ ಈ ರೀತಿ ಹುಳುಕು ಹುಡುಕುವ ಕೆಲಸ ಮಾಡುವುದು ಬಿಟ್ಟು ಲೋಕಸಭೆ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳ ಠೇವಣಿ ಉಳಿಸಿಕೊಳ್ಳುವ ಕಡೆಗೆ ಗಮನಹರಿಸಲಿ ಎಂದು ಭೀಮಾಶಂಕರ ಪಾಟೀಲ್‍ಟೀಕಿಸಿದ್ದಾರೆ.

RELATED ARTICLES

Latest News