Friday, May 3, 2024
Homeರಾಜಕೀಯಮೈತ್ರಿ ಯಶಸ್ವಿಯಾದರೆ ಕಾಂಗ್ರೆಸ್ ಅಡ್ರೆಸ್‍ಗೆ ಇಲ್ಲದಂತಾಗುತ್ತದೆ : ಬಿಎಸ್‌ವೈ

ಮೈತ್ರಿ ಯಶಸ್ವಿಯಾದರೆ ಕಾಂಗ್ರೆಸ್ ಅಡ್ರೆಸ್‍ಗೆ ಇಲ್ಲದಂತಾಗುತ್ತದೆ : ಬಿಎಸ್‌ವೈ

ಬೆಂಗಳೂರು,ಮಾ.29- ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಯಶಸ್ವಿಯಾಗಿ ಮುನ್ನಡೆದರೆ ಆಡಳಿತಾರೂಢ ಕಾಂಗ್ರೆಸ್ ಸರ್ವನಾಶವಾಗಿ ಅಡ್ರೆಸ್‍ಗೆ ಇಲ್ಲದಂತಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.

ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನತೆಗೆ ಸುಳ್ಳು ಆಶ್ವಾಸನೆಗಳನ್ನು ಕೊಟ್ಟು ಅಧಿಕಾರದ ಮದದಿಂದ ಮೈಮರೆತಿರುವ ಸರ್ಕಾರಕ್ಕೆ ಮುಂದೆ ಏನಾಗುತ್ತದೆ ಎಂಬುದನ್ನು ನಾನು ಈ ವೇಳೆ ಹೇಳುವುದಿಲ್ಲ ಎಂದು ಕುತೂಹಲ ಹುಟ್ಟಿಸಿದರು.

ಯಾವ ಶಕ್ತಿಗಳು ಕೂಡ ಬಂದರೂ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವುದನ್ನು ತಡೆಯಲು ಸಾಧ್ಯವೇ ಇಲ್ಲ. ನಮ್ಮ ಮೈತ್ರಿ ಇದೇ ರೀತಿ ಮುಂದುವರೆದರೆ ಕಾಂಗ್ರೆಸ್ ಕರ್ನಾಟಕದಲ್ಲಿ ಅಡ್ರೆಸ್‍ಗೆ ಇರುವುದಿಲ್ಲ ಎಂದು ಎಚ್ಚರಿಸಿದರು.

ಕಾಯ ವಾಚಾ ಮನಸ್ಸ, ಯಾರೇ ಅಭ್ಯರ್ಥಿ ಆದರೂ ನೀವು ಕೆಲಸ ಮಾಡಿದರೆ 28ಕ್ಕೆ 28 ಲೋಕಸಭಾ ಕ್ಷೇತ್ರ ಗೆದ್ದು ಪ್ರಧಾನಿ ನರೇಂದ್ರಮೋದಿಯವರ ಬಳಿ ಕರೆದುಕೊಂಡು ಹೋಗಲು ನಿಮ್ಮ ಆಶೀರ್ವಾದ ಬೇಕು ಎಂದರು.ಕಿಸಾನ್ ಸಮ್ಮಾನ್ ಹಣವನ್ನು ಯಾಕೆ ನಿಲ್ಲಿಸಿದ್ದೀರಿ, ನಿಮ್ಮ ಸರ್ಕಾರ ದಿವಾಳಿಯಾಗಲು ಇದೇ ಉದಾಹರಣೆ ಅಲ್ಲವೇ, ನಮ್ಮ ಮೈತ್ರಿಯನ್ನು ಜನರು ಒಪ್ಪಿದ್ದಾರೆ.

ನಾವು ಒಟ್ಟಾಗಿ ಹೋದರೆ ಐದು ವರ್ಷಗಳ ಕಾಲ ವಿಶ್ರಾಂತಿಯಲ್ಲಿ ಇರಬಹುದು. ಕರ್ನಾಟಕ ರಾಜ್ಯ ಸರ್ಕಾರದ ಬಗ್ಗೆ ಇವಾಗ ಏನು ಮಾತಾಡೋಕೆ ಹೋಗಲ್ಲ. ಸುಳ್ಳು ಆಶ್ವಾಸನೆ ಕೊಟ್ಟು, ಅಕಾರ ಮದದಿಂದ ಮೈ ಮರೆತಿರುವ ಸರ್ಕಾರ ಮುಂದೆ ಏನಾಗುತ್ತದೆ ಎಂದು ಇವಾಗ ನಾನು ಏನು ಹೇಳುವುದಿಲ್ಲ ಎಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ತಿರುಗೇಟು ನೀಡಿದರು.

ಕರ್ನಾಟಕ ಬಿಜೆಪಿ ಉಸ್ತುವಾರಿ ರಾಧಾ ಮೋಹನ್‍ದಾಸ್ ಅಗರ್‍ವಾಲ್ ಮಾತನಾಡಿ, ಕರ್ನಾಟಕ ರಾಜಕೀಯದಲ್ಲಿ ಪ್ರಾಮಾಣಿಕ ಬದಲಾವಣೆಗೆ ಈ ಮೈತ್ರಿ ನಾಂದಿ ಹಾಡಿದೆ. ರಾಜ್ಯದ ಎಲ್ಲ ಶಕ್ತಿಗಳೂ ಒಂದಾಗಿ ವಿನಾಶಕಾರಿ ಶಕ್ತಿಗಳ ನಾಶ ಮಾಡಲಿವೆ. ಎಲ್ಲ 28 ಕಡೆಯೂ ಬಿಜೆಪಿ ಜೆಡಿಎಸ್ ಗೆಲ್ಲಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಗೆ ಈ ಚುನಾವಣೆಯಲ್ಲಿ ಬೋಣಿ ಸಹ ಆಗೋದಿಲ್ಲ ಮುನಿಸ್ವಾಮಿ ಕೋಲಾರದಲ್ಲಿ ಆಕಾಂಕ್ಷಿ ಆಗಿದ್ರು ಕ್ಷೇತ್ರ ಜೆಡಿಎಸ್ ಗೆ ಹೋಯ್ತು ಅಂತ ಅವರ ಆಕ್ಷೇಪಿಸಲಿಲ್ಲ ಜೆಡಿಎಸ್ ಗೆ ಸಹಕಾರ ಕೊಡುವುದಾಗಿ ಮುನಿಸ್ವಾಮಿ ಹೇಳಿದ್ದರು. ಹಾಸನದಲ್ಲೂ ಬಿಜೆಪಿ ಕಾರ್ಯಕರ್ತರು ಜೆಡಿಎಸ್‍ಗೆ ಸಂಪೂರ್ಣ ಬೆಂಬಲ ಕೊಡಲಿದ್ದಾರೆ ಇದೊಂದು ಐತಿಹಾಸಿಕ ಮೈತ್ರಿ ಶಕ್ತಿ ಜೆಡಿಎಸ್‍ನವರು ನಮ್ಮ ಹೆಗಲಿಗೆ ಹೆಗಲು ಕೊಟ್ಟರೆ ದೇಶಾದ್ಯಂತ ಬದಲಾವಣೆ ತರಬಹುದು.

ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದರು.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ವಿಶ್ವಾಸದಿಂದ ಕೆಲಸ ಮಾಡಿದರೆ ನಿರೀಕ್ಷೆಗೂ ಮೀರಿದ ಫಲಿತಾಂಶ ಬರಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಸಭೆ ಬಹಳ ಹಿಂದೆನೇ ಆಗಬೇಕಿತ್ತು. ಕಾರಣಾಂತರದಿಂದ ಸಭೆ ಇಂದು ನಿರ್ಧಾರವಾಗಿದೆ. ದೇಶದ ಭವಿಷ್ಯ ರೂಪಿಸುವ ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಒಂದೇ ವೇದಿಕೆಗೆ ಬಂದಿದ್ದೇವೆ ಎಂದರು.

ಜೆಡಿಎಸ್ ಜೊತೆಗಿನ ಮೈತ್ರಿ ಬಿಜೆಪಿಗೆ ಆನೆಬಲ ಬಂದಂತೆ ಆಗಿದೆ. ಮಂಡ್ಯ ಹಾಗೂ ಮೈಸೂರಲ್ಲಿ ನಾನು ಕುಮಾರಸ್ವಾಮಿ ಜಂಟಿ ಪ್ರವಾಸ ಮಾಡಿದ್ದೇವೆ. ಬಹಳಷ್ಟು ಸಲ ಹೊಂದಾಣಿಕೆ ರಾಜಕೀಯ ನಡೆದಿದೆ. ಬಿಜೆಪಿ-ಜೆಡಿಎಸ್ ಹಾಗೂ ಜೆಡಿಎಸ್ ಕಾಂಗ್ರೆಸ್ ಸಾಕಷ್ಟು ಸಲ ಹೊಂದಾಣಿಕೆಯಾಗಿದೆ. ಈ ಸಮ್ಮಿಲನ ರಾಜ್ಯದ ಜನರು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದರು.

ಬಿಜೆಪಿ-ಜೆಡಿಎಸ್ ಸಮ್ಮಿಲನ ರಾಜ್ಯದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ಕೆಲಸ ಆಗುತ್ತದೆ. ಜೆಡಿಎಸ್-ಎನ್‍ಡಿಎ ಕೂಟಕ್ಕೆ ಬಂದಿರುವುದನ್ನು ನಮ್ಮ ನಾಯಕರು ಘೋಷಣೆ ಮಾಡಿ ಹಲವು ತಿಂಗಳು ಆಗಿವೆ. ರಾಜ್ಯದ ಮತದಾರರು ಮೈತ್ರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, 28 ಜಿಲ್ಲೆಗಳಲ್ಲೂ ಕೆಲಸ ನಾವು ಒಟ್ಟಾಗಿ ಕೆಲಸ ಮಾಡಬೇಕು. ಈ ಹಿಂದೆ ಬಿಎಸ್‍ವೈ ಜೊತೆ ಸರ್ಕಾರ ಮಾಡಿದ್ದಾಗ ಒಳ್ಳೆಯ ಆಡಳಿತ ಕೊಟ್ಟಿದ್ದೇವು. ಕೆಲವು ಪರಿಸ್ಥಿತಿಗಳಲ್ಲಿ ಮೈತ್ರಿ ಮುಂದುವರೆಯಲು ಸಾಧ್ಯವಾಗಲಿಲ್ಲ. ಆಗ ನಮ್ಮ ತಂದೆಯವರಿಗೆ ಕೆಲವರು ತಪ್ಪು ಮಾಹಿತಿ ನೀಡಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ಬಾರೀ ನಾವು ಮೈತ್ರಿ ಮಾಡಿಕೊಂಡಿದ್ದೆ ರಾಜ್ಯದಲ್ಲಿ ಈಗ ಕಾಂಗ್ರೆಸ್ ಬರಲು ಸಾಧ್ಯವಾಗುತ್ತಿರಲಿಲ್ಲ. ನಮ್ಮಲ್ಲಿದ್ದ ಒಡಕುಗಳಿಂದ ಕಾಂಗ್ರೆಸ್ ಅಕಾರಕ್ಕೆ ಬರಲು ಸಾಧ್ಯವಾಯಿತು ಪ್ರತಿದಿನ ಕಾಂಗ್ರೆಸ್ ನಾಯಕರು ಜೆಡಿಎಸ್ ಪಕ್ಷ ಮುಗಿದೆ ಹೋಯಿತು ಎಂದು ಮಾತನಾಡುತ್ತಿದ್ದಾರೆ. ಮೋದಿ ಅವರು ದೇಶದ ಭದ್ರತೆಗೆ ದುಡಿಮೆ ಸದಾಕಾಲ ನೋಡಿದ್ದೇವೆ.

ಅಮಿತ್ ಶಾ ಅವರ ಮಧ್ಯಸ್ಥಿಕೆಯಿಂದ ಈ ಮೈತ್ರಿಯಾಗಿದೆ. ಅಭ್ಯರ್ಥಿ ಆಯ್ಕೆಯಲ್ಲಿ ಒಡಕು ಬಂದಿರಬಹುದು, ಅದರಿಂದಾಗಿ ತಾವು ನಿರಾಸೆ ಒಳಗಾದರೆ ಪಕ್ಷಕ್ಕೆ ಹಿನ್ನಡೆಯಾಗುತ್ತದೆ. ಕೆಲವೊಂದು ಕ್ಷೇತ್ರಗಳಲ್ಲಿ ಭಿನ್ನಾಭಿಪ್ರಾಯ ಇದ್ದಾವೆ ಅದನ್ನು ಸರಿಪಡಿಸಿಕೊಳ್ಳಬೇಕಿದೆ ಎಂದರು.

RELATED ARTICLES

Latest News