Wednesday, September 18, 2024
Homeಇದೀಗ ಬಂದ ಸುದ್ದಿಬಿಹಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಗೆದ್ದ ನಿತೀಶ್

ಬಿಹಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಗೆದ್ದ ನಿತೀಶ್

ಪಾಟ್ನಾ,ಫೆ.12-ಭಾರೀ ಕುತೂಹಲ ಕೆರಳಿಸಿದ್ದ ಬಿಹಾರ ವಿಧಾನಸಭೆಯಲ್ಲಿ ಬಹುಮತ ಸಾಬೀತು ನಿರ್ಣಯದಲ್ಲಿ ಕೊನೆಗೂ ಮುಖ್ಯಮಂತ್ರಿ ನಿತೀಶ್‍ಕುಮಾರ್ ಅಚ್ಚರಿ ರೀತಿಯಲ್ಲಿ ಗೆದ್ದು ಬೀಗಿದ್ದಾರೆ. ಒಟ್ಟು 129 ಮತಗಳು ವಿಶ್ವಾಸ ಮತ ಪರವಾಗಿ ಚಲಾವಣೆಗೊಂಡಿದ್ದು, ಸದನದಲ್ಲಿದ್ದವರಿಗೆ ಅಚ್ಚರಿ ಮೂಡಿಸಿತ್ತು. ನಿತೀಶ್‍ರ ಪರಮ ವೈರಿ ಎಂದೇ ಬಿಂಬಿತವಾಗಿದ್ದ ಆರ್‍ಜೆಡಿಯ ನಾಲ್ಕರಿಂದ ಐದು ಶಾಸಕರು ವಿಶ್ವಾಸಮತ ಚಲಾಯಿಸಿದ್ದಾರೆ.

ಜೆಡಿಯುನಲ್ಲಿ ಒಡಕಿದೆ ಎಂದು ಹೇಳುತ್ತಿದ್ದ ಆರ್‍ಜೆಡಿಯ ಎಲ್ಲ ತಂತ್ರಗಾರಿಕೆಯು ಕೈಕೊಟ್ಟಿದೆ. ಬದಲಾಗಿ ಅದಕ್ಕೆ ತಿರುಗು ಬಾಣವಾಗಿದೆ ಬಿಜೆಪಿಯ 78 ಹಾಗೂ ಜೆಡಿಯುನ 45 ಶಾಸಕರನ್ನು ಹೊಂದಿದ್ದು, ಹೊಸ ಮೈತ್ರಿಕೂಟದ ವಿಶ್ವಾಸ ಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದೆ. ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆ ಆರ್‍ಜೆಡಿಯ ಮೂವರು ಶಾಸಕರು ಆಡಳಿತ ಪಕ್ಷದ ಆಸನದತ್ತ ಕೂತಿದ್ದರು. ಇದನ್ನು ನೀಡಿದ ಆರ್‍ಜೆಡಿ ನಾಯಕ ಹಾಗೂ ಮಾಜಿ ಡಿಸಿಎಂ ತೇಜಸ್ವಿ ಯಾದವ್ ಆಕ್ಷೇಪ ವ್ಯಕ್ತಪಡಿಸಿದರು. ಆದರೂ ನಂತರ ನಡೆದ ಬೆಳವಣಿಗೆಯಲ್ಲಿ ಮೊದಲು ಬಿಜೆಪಿಯ ಶಾಸಕರಿಂದ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಯಿತು.

ನ್ಯಾಯಯುತವಾಗಿ ರಾಜ್ಯಕ್ಕೆ ತೆರಿಗೆ ಪಾಲು ಸಿಗುತ್ತಿಲ್ಲ : ಭಾಷಣದಲ್ಲಿ ರಾಜ್ಯಪಾಲ ಅಸಮಾಧಾನ

ನಂತರ ನಡೆದ ಮತದಾನದಲ್ಲಿ ಅವಿಶ್ವಾಸದ ಪರ 125 ಮತಗಳು ಬಂದರೆ ಇದಕ್ಕೆ ವಿರುದ್ಧವಾಗಿ ಕೇವಲ 112 ಶಾಸಕರು ಇದ್ದರು. ಸ್ಪೀಕರ್ ಪದಚ್ಯುತಿ ನಂತರ ಸಿಎಂ ನಿತೀಶ್‍ಕುಮಾರ್ ವಿಶ್ವಾಸ ಮತ ಯಾಚನೆ ನಿರ್ಣಯವನ್ನು ಮಂಡಿಸಿ ಬಹಳ ಚರ್ಚೆಯ ನಂತರ ಎಲ್ಲರೂ ಅಚ್ಚರಿಪಡುವಂತೆ 129 ಶಾಸಕರ ಬೆಂಬಲದೊಂದಿಗೆ ಸಂಪೂರ್ಣ ಬಹುಮತ ಸಾಬೀತುಪಡಿಸುವಲ್ಲಿ ನಿತೀಶ್ ಯಶಸ್ವಿಯಾಗಿದ್ದಾರೆ.
ಈ ಬಳಿಕ ಬಿಜೆಪಿ ಹಾಗೂ ಜೆಡಿಯು ಶಾಸಕರು ಸಂಭ್ರಮಿಸಿದರು.

RELATED ARTICLES

Latest News