Sunday, April 28, 2024
Homeರಾಷ್ಟ್ರೀಯಸರ್ಕಾರ ಬರೆದುಕೊಟ್ಟಿದ್ದ ಭಾಷಣವನ್ನು ಓದಲ್ಲ ಎಂದು ಹೊರ ನಡೆದ ರಾಜ್ಯಪಾಲ

ಸರ್ಕಾರ ಬರೆದುಕೊಟ್ಟಿದ್ದ ಭಾಷಣವನ್ನು ಓದಲ್ಲ ಎಂದು ಹೊರ ನಡೆದ ರಾಜ್ಯಪಾಲ

ಚನ್ನೈ, ಫೆ.12 – ರಾಜ್ಯ ಬಜೆಟ್ ಅವೇಶನದಲ್ಲಿ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ. ಸರ್ಕಾರ ಬರೆದುಕೊಟ್ಟಿದ್ದ ಭಾಷಣವನ್ನು ಓದಲ್ಲ ಅಂತ ಹೇಳುವ ಮೂಲಕ ತಮಿಳುನಾಡು ರಾಜ್ಯಪಾಲರಾದ ಆರ್.ಎನ್.ರವಿ ಹೊಸ ವಿವಾದ ಸೃಷ್ಟಿಸಿದ್ದಾರೆ. ನಾನು ನನ್ನ ಧ್ವನಿಯನ್ನು ನೀಡಿದರೆ, ಅದು ಸಾಂವಿಧಾನಿಕ ಅಪಹಾಸ್ಯಕ್ಕೆ ಕಾರಣವಾಗುತ್ತದೆ ಎಂದು ಆರ್.ಎನ್.ರವಿ ಅೀಧಿವೇಶನದಲ್ಲಿ ಹೇಳಿದರು.

ರಾಜ್ಯಪಾಲರು ತಮ್ಮ ವಾಡಿಕೆ ಭಾಷಣವನ್ನು ಎರಡು ನಿಮಿಷಗಳಲ್ಲಿ ಮುಗಿಸಿದ್ದಾರೆ. ಭಾಷಣದ ಪ್ರಾರಂಭ ಮತ್ತು ಕೊನೆಯಲ್ಲಿ ರಾಷ್ಟ್ರಗೀತೆಯನ್ನು ಹಾಡಲು ನಿರಾಕರಿಸಿದ್ದಾರಂತೆ. ತಮಿಳುನಾಡು ವಿಧಾನಸಭೆಯಲ್ಲಿನ ಸಮಾವೇಶದ ಪ್ರಕಾರ, ಭಾಷಣದ ಮೊದಲು ರಾಜ್ಯಗೀತೆ ಮತ್ತು ನಂತರ ರಾಷ್ಟ್ರಗೀತೆಯನ್ನು ಹಾಕಲಾಗುತ್ತೆ. ಆದರೆ ರಾಜ್ಯಪಾಲರು ಆರ್.ಎನ್.ರವಿ ಇದಕ್ಕೆ ನಿರಾಕರಿಸಿದ್ದಾರೆ.

ರಾಜ್ಯಪಾಲರ ಭಾಷಣದಲ್ಲಿ ಉಪ್ಪು, ಹುಳಿ, ಖಾರ ಯಾವುದೂ ಇಲ್ಲ : ಕುಮಾರಸ್ವಾಮಿ

ತಮಿಳುನಾಡು ವಿಧಾನಸಭೆ ಸೇರುತ್ತಿದ್ದಂತೆ ತಮಿಳುನಾಡು ರಾಜ್ಯಪಾಲ ರವಿ ಅವರು ಕೇರಳದಲ್ಲಿ ನಡೆದಂತೆ ತಮ್ಮ ಭಾಷಣವನ್ನು ಪೂರ್ತಿಯಾಗಿ ಓದಲಿಲ್ಲ.ತಮಿಳುನಾಡು ಸರ್ಕಾರ ತಮಗಾಗಿ ಸಿದ್ಧಪಡಿಸಿರುವ ಭಾಷಣದಲ್ಲಿ ಮಾಡಿರುವ ಕೆಲವು ಟೀಕೆಗಳನ್ನು ಒಪ್ಪುವುದಿಲ್ಲ ಎಂದು ಹೇಳಿ ಭಾಷಣ ಮುಗಿಸಿದರು. ಕೆಲವೇ ನಿಮಿಷಗಳಲ್ಲಿ ರಾಜ್ಯಪಾಲರು ಭಾಷಣ ಮುಗಿಸಿದರು.

ಕೇರಳ ರಾಜ್ಯದಲ್ಲೂ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಜಟಾಪಟಿ ಏರ್ಪಟ್ಟಿತ್ತು. ಕಳೆದ ತಿಂಗಳು ಅಲ್ಲಿ ವಿಧಾನಸಭೆ ಅವೇಶನ ನಡೆದಾಗ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ಚಟುವಟಿಕೆಗಳು ಚರ್ಚೆಗೆ ಗ್ರಾಸವಾಗಿತ್ತು.

RELATED ARTICLES

Latest News