Monday, June 17, 2024
Homeರಾಷ್ಟ್ರೀಯಒಡಿಶಾ ಸಿಎಂ ನೇಮಕಕ್ಕೆ ಕೇಂದ್ರ ವೀಕ್ಷಕರಾಗಿ ರಾಜನಾಥ್‌ ಸಿಂಗ್‌ ಮತ್ತು ಭೂಪೇಂದರ್‌ ಯಾದವ್‌ ನೇಮಕ

ಒಡಿಶಾ ಸಿಎಂ ನೇಮಕಕ್ಕೆ ಕೇಂದ್ರ ವೀಕ್ಷಕರಾಗಿ ರಾಜನಾಥ್‌ ಸಿಂಗ್‌ ಮತ್ತು ಭೂಪೇಂದರ್‌ ಯಾದವ್‌ ನೇಮಕ

ನವದೆಹಲಿ,ಜೂ.10- ಒಡಿಶಾ ಮುಖ್ಯಮಂತ್ರಿ ನೇಮಕಕ್ಕೆ ಕೇಂದ್ರ ವೀಕ್ಷಕರಾಗಿ ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌ ಮತ್ತು ಭೂಪೇಂದರ್‌ ಯಾದವ್‌ ಅವರನ್ನು ಬಿಜೆಪಿ ನೇಮಿಸಿದೆ. ಒಡಿಶಾದ ಶಾಸಕಾಂಗ ಪಕ್ಷದ ಸಭೆಯ ನಾಯಕರ ಆಯ್ಕೆಗೆ ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌ ಮತ್ತು ಭೂಪೇಂದರ್‌ ಯಾದವ್‌ ಅವರನ್ನು ಬಿಜೆಪಿ ಸಂಸದೀಯ ಮಂಡಳಿ ನೇಮಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಮನಾರ್ಹವೆಂದರೆ ಜೂನ್‌ 9ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜನಾಥ್‌ ಸಿಂಗ್‌ ಮತ್ತು ಭೂಪೇಂದರ್‌ ಯಾದವ್‌ ಅವರು ನೂತನ ಸರ್ಕಾರದ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ನಾಳೆ ಬಿಜೆಪಿ ಸಭೆ ಸೇರುವ ಸಾಧ್ಯತೆ ಇದೆ.

ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಭುವನೇಶ್ವರದ ಜನತಾ ಮೈದಾನದಲ್ಲಿ ಬುಧವಾರ ನಡೆಯಲಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ.

ಈ ಹಿಂದೆ ಪಕ್ಷದ ಹಿರಿಯ ನಾಯಕ ಮತ್ತು ಸಂಸದರಾದ ಧರ್ಮೇಂದ್ರ ಪ್ರಧಾನ್‌ ಮತ್ತು ಜುಯಲ್‌ ಓರಂ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಮುಂಚೂಣಿಯಲ್ಲಿ ಪರಿಗಣಿಸಲಾಗಿತ್ತು. ಆದರೆ ನಿನ್ನೆ ಸಂಜೆ ಕೇಂದ್ರ ಸಚಿವ ಸಂಪುಟಕ್ಕೆ ಇಬ್ಬರೂ ಸೇರ್ಪಡೆಗೊಂಡ ನಂತರ ರೇಸ್‌‍ನಿಂದ ಅವರು ಹೊರಗುಳಿಯುತ್ತಾರೆ ಎಂದು ಹೇಳಲಾಗಿದೆ.

RELATED ARTICLES

Latest News