Tuesday, December 3, 2024
Homeರಾಜ್ಯವಕ್ಫ್ ವಿರುದ್ಧ ಸಮರಕ್ಕಿಳಿದ ಕೇಸರಿ ಪಡೆ, ರಾಜ್ಯಾದ್ಯಂತ ಹೋರಾಟ

ವಕ್ಫ್ ವಿರುದ್ಧ ಸಮರಕ್ಕಿಳಿದ ಕೇಸರಿ ಪಡೆ, ರಾಜ್ಯಾದ್ಯಂತ ಹೋರಾಟ

BJP launches state-wide campaign against Waqf

ಬೆಂಗಳೂರು,ನ.21- ವಿವಿಧ ಜಿಲ್ಲೆಗಳಲ್ಲಿ ರೈತರಿಗೆ ವಕ್ಫ್ ಬೋರ್ಡ್ ಮೂಲಕ ರೈತರಿಗೆ ನೋಟಿಸ್ ನೀಡುತ್ತಿರುವುದನ್ನು ವಿರೋಧಿಸಿ ಬಿಜೆಪಿ ಇಂದಿನಿಂದ ಎರಡು ದಿನಗಳ ಕಾಲ ರಾಜ್ಯಾದ್ಯಂತ ಹೋರಾಟವನ್ನು ಆರಂಭಿಸಿದೆ. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಶಾಸಕರು, ಮಾಜಿ ಸಂಸದರು, ಮಾಜಿ ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ಪದಾಧಿಕಾರಿಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು.

ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಕಲಬುರಗಿ ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ಸಂದೇಶವನ್ನು ರವಾನಿಸಲಾಯಿತು.

ಶಿವಮೊಗ್ಗದಲ್ಲಿ ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆದರೆ ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ, ಕಲಬುರಗಿಯಲ್ಲಿ ವಿಧಾನಪರಿಷತ್ನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೀಗೆ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಪ್ರತಿಭಟನೆ ನಡೆಸಿ ಯಾವುದೇ ಕಾರಣಕ್ಕೂ ರೈತರು, ದೇವಸ್ಥಾನಕ್ಕೆ ಜಮೀನುಗಳಿಗೆ ನೋಟಿಸ್ ನೀಡಬಾರದೆಂದು ಆಗ್ರಹಿಸಲಾಯಿತು.

ವಕ್ಫ್ ಬೋರ್ಡ್ ಹಿಂದೂ ಧರ್ಮವನ್ನೇ ಗುರಿಯಾಗಿಟ್ಟುಕೊಂಡು ಈ ಸಮುದಾಯಕ್ಕೆ ಸೇರಿದ ಜಮೀನುಗಳು, ರೈತರ ಜಮೀನು, ದೇವಸ್ಥಾನ, ಸಮುದಾಯ ಭವನ, ಕಲ್ಯಾಣ ಮಂಟಪ ಸೇರಿದಂತೆ ಮತ್ತಿತರ ಜಮೀನುಗಳನ್ನು ವಶಪಡಿಸಿಕೊಳ್ಳಲು ನೋಟಿಸ್ ನೀಡುತ್ತಿದೆ. ಇನ್ನು ಮುಂದೆ ಒಂದೇ ಒಂದೂ ನೋಟಿಸ್ ನೀಡಿದರೂ ಸುಮನಿರುವುದಿಲ್ಲ ಎಂದು ಪ್ರತಿಭಟನಾನಿರತರು ಎಚ್ಚರಿಕೆ ಕೊಟ್ಟರು.

ವಕ್ಫ್ ನ್ಯಾಯಾಧಿಕರಣ ರದ್ದಾಗಬೇಕು. 6.70 ಲಕ್ಷ ಎಕರೆ ವಕ್ಫ್ ಆಸ್ತಿ ಎಂದು ಸ್ವಾಧೀನಕ್ಕೆ ಯತ್ನಿಸಲಾಗುತ್ತಿದೆ. ಕರ್ನಾಟಕದಲ್ಲಿ ಜನ ಜಾಗೃತಿ ಮಾಡುವ ಅವಶ್ಯಕತೆ ಇದೆ. ಜನಜಾಗೃತಿ ಅಭಿಯಾನ ಮಾಡಿ ಜೆಪಿಸಿಗೆ ವರದಿ ಸಲ್ಲಿಕೆ ಮಾಡುತ್ತೇವೆ. ಎಷ್ಟೋ ಮಾಹಿತಿಗಳು ಇನ್ನೂ ಕೇಂದ್ರ ಸರ್ಕಾರ, ಜೆಪಿಸಿಗೆ ಸಿಕ್ಕಿಲ್ಲ. ಜಮೀರ್ ಅಹಮದ್ ಧಮ್ಕಿ ಹಾಕಿರುವ ಬಗ್ಗೆ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ ಎಂದು ಪ್ರತಿಭಟನಾನಿರತರು ಆತಂಕ ವ್ಯಕ್ತಪಡಿಸಿದರು. ಹಿಂದೂ ಸಮುದಾಯದವರನ್ನು ರಕ್ಷಣೆ ಮಾಡಬೇಕು. ನೋಟೀಸ್ ಕೊಟ್ಟಿದ್ದು ಅಷ್ಟೇ ಅಲ್ಲ, ನೋಟೀಸ್ ಕೊಡದೇ ವಕ್ಫ್ ಎಂದು ಪಹಣಿಯಲ್ಲಿ ನಮೂದು ಮಾಡಿದ್ದಾರೆ ಎಂದು ದೂರಿದರು.

RELATED ARTICLES

Latest News