Tuesday, February 27, 2024
Homeರಾಜ್ಯಉತ್ತರ ಕರ್ನಾಟಕಕ್ಕೆ ಸಿಗದ ನ್ಯಾಯ : ಯತ್ನಾಳ್ ಬಂಡಾಯ

ಉತ್ತರ ಕರ್ನಾಟಕಕ್ಕೆ ಸಿಗದ ನ್ಯಾಯ : ಯತ್ನಾಳ್ ಬಂಡಾಯ

ಬೆಳಗಾವಿ,ಡಿ.4- ಉತ್ತರ ಕರ್ನಾಟಕಕ್ಕೆ ನ್ಯಾಯ ಒದಗಿಸುವವರಿಗೂ ನಾನು ಶಾಸಕಾಂಗ ಸಭೆಗೆ ಹಾಜರಾಗುವುದಿಲ್ಲ ಎಂದು ಬಿಜೆಪಿ ಬಂಡಾಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷದ ವರಿಷ್ಠರಿಗೆ ಬಹಿರಂಗವಾಗಿಯೇ ಸಡ್ಡು ಹೊಡೆದಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆಯ ಪ್ರತಿಪಕ್ಷದ ನಾಯಕನ ಸ್ಥಾನವನ್ನು ಉಕ ಭಾಗದವರಿಗೆ ನೀಡಬೇಕಿತ್ತು. ಪಕ್ಷದ ವರಿಷ್ಠರು ಈ ಭಾಗಕ್ಕೆ ಯಾವುದೇ ಪ್ರಾಶಸ್ತ್ಯ ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕಕ್ಕೆ ನ್ಯಾಯ ಸಿಗುವವರೆಗೂ ನನ್ನ ಹೋರಾಟ ಮುಂದುವರೆಯುತ್ತಲೇ ಇರುತ್ತದೆ. ನಾನು ಯಾರಿಗೂ ಅಂಜುವವನ್ನಲ್ಲ. ಈ ಭಾಗಕ್ಕೆ ನ್ಯಾಯ ಸಿಗಬೇಕು ಎಂಬ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಶಾಸಕಾಂಗ ಸಭೆಗೆ ನಾನು ಹಾಜ ರಾಗುವುದಿಲ್ಲ ಎಂದು ಸವಾಲು ಹಾಕಿದರು.

ಈ ಭಾಗದಲ್ಲಿ ಅಧಿವೇಶನ ನಡೆಯುವ ವೇಳೆ ಉತ್ತರಕರ್ನಾಟಕದ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಸುಮ್ಮನೆ ಬೇಕಾಬಿಟ್ಟಿ ಚರ್ಚೆ ನಡೆದರೆ ಅಧಿವೇಶನದ ಉದ್ದೇಶ ಈಡೇರುವುದಿಲ್ಲ. ನಾನು ಇಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲು ವಿಧಾನಸಭೆಯ ಸ್ಪೀಕರ್ ಅವರಿಗೆ ಮನವಿ ಮಾಡುತ್ತೇನೆ. ಚರ್ಚೆಯನ್ನು ನಾನೇ ಮೊದಲು ಆರಂಭಿಸುತ್ತೇನೆ ಎಂದರು.

ಲೋಕಸಭೆಯಲ್ಲಿ ಮೊಳಗಿದ ‘ತೀಸ್ರಿ ಬಾರ್ ಮೋದಿ ಸರ್ಕಾರ್’ ಘೋಷಣೆ

ಸುಮ್ಮನೆ ತವಡು ಕುಟ್ಟಿ ಹೋಗುವುದರಲ್ಲಿ ಅರ್ಥವಿಲ್ಲ. ಕಲಾಪದಲ್ಲಿ ಉತ್ತಮ ಚರ್ಚೆಯಾಗಬೇಕು. ಅದಕ್ಕೆ ಎಲ್ಲ ಪಕ್ಷದ ಶಾಸಕರು ಸಹಕಾರ ಕೊಡಬೇಕು. ಸ್ಪೀಕರ್ ಇದಕ್ಕಾಗಿ ಹೆಚ್ಚಿನ ಆದ್ಯತೆ ನೀಡಲಿ ಎಂದು ಯತ್ನಾಳ್ ಮನವಿ ಮಾಡಿದರು. ದೇಶದಲ್ಲಿ ಬರುವ ದಿನಗಳಲ್ಲಿ ಕುಟುಂಬ ರಾಜಕಾರಣ ಸಂಪೂರ್ಣವಾಗಿ ನಿರ್ಮೂಲನೆಯಾಗಲಿದೆ. ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶ ಕುಟುಂಬ ರಾಜಕಾರಣ ಮಾಡುವವರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.

ರಾಜಕಾರಣದಲ್ಲಿ ನಾವೇ ಇರಬೇಕೆಂದು ಪ್ರತಿಪಾದಿಸುವವರಿಗೆ ಈ ಫಲಿತಾಂಶ ಎಚ್ಚರಿಕೆಯ ಘಂಟೆ. ಮುಂದಿನ ದಿನಗಳಲ್ಲಿ ಕುಟುಂಬ ರಾಜಕಾರಣ ಸಂಪೂರ್ಣವಾಗಿ ನಿರ್ಮೂಲನೆಯಾಗಲಿದೆ ಎಂದು ಹೇಳಿದರು.ಹಿಂದುತ್ವ ಮತ್ತು ಅಭಿವೃದ್ಧಿ ಪರವಾಗಿ ಇರುವವರಿಗೆ ಮತದಾರರು ಕೈ ಹಿಡಿಯಲಿದ್ದಾರೆ ಎಂಬುದಕ್ಕೆ ಈ ಫಲಿತಾಂಶವೇ ಸಾಕ್ಷಿ. ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣ ಸಂಪೂರ್ಣವಾಗಿ ನಿರ್ಮೂಲನೆಯಾಗಲಿದೆ.

ಜನ ನಕಾರಾತ್ಮಕತೆಯನ್ನು ತಿರಸ್ಕರಿಸಿದ್ದಾರೆ : ಮೋದಿ

ಯಾವುದೇ ಕಾರಣಕ್ಕೂ ಮತದಾರ ಇದನ್ನು ಸಹಿಸುವುದಿಲ್ಲ. ಇದಕ್ಕೆ ನಿನ್ನೆಯ ಫಲಿತಾಂಶವೇ ಸಾಕ್ಷಿ ಎಂದರು.ದೇಶದಲ್ಲಿ ಮೋದಿಯವರ ಜನಪ್ರಿಯತೆ, ಅಭಿವೃದ್ಧಿಪರವಾದ ಕೆಲಸಕ್ಕೆ ಮತದಾರ ಮತ ಹಾಕಿದ್ದಾನೆ. ಯಾರು ಏನೇ ಹೇಳಿದರೂ ಮುಂದಿನ ದಿನಗಳಲ್ಲಿ ಮೋದಿಯವರೇ ಪ್ರಧಾನಿಯಾಗಲಿದ್ದಾರೆ. ಪ್ರತಿಪಕ್ಷಗಳ ತಂತ್ರ, ಕುತಂತ್ರ ಯಾವುದೂ ನಡೆಯುವುದಿಲ್ಲ. ಹಿಂದುತ್ವ ಮತ್ತು ಅಭಿವೃದ್ಧಿ ದೇಶದಲ್ಲಿ ಉಳಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

RELATED ARTICLES

Latest News