Friday, November 22, 2024
Homeರಾಷ್ಟ್ರೀಯ | Nationalಕೋಟಿ ಕೋಟಿ ಹಣ ಪತ್ತೆಯಾದ ಕಾಂಗ್ರೆಸ್ ಸಂಸದನ ಬಂಧನಕ್ಕೆ ಮರಾಂಡಿ ಒತ್ತಾಯ

ಕೋಟಿ ಕೋಟಿ ಹಣ ಪತ್ತೆಯಾದ ಕಾಂಗ್ರೆಸ್ ಸಂಸದನ ಬಂಧನಕ್ಕೆ ಮರಾಂಡಿ ಒತ್ತಾಯ

ರಾಂಚಿ, ಡಿ 9 (ಪಿಟಿಐ) ಬಿಜೆಪಿಯ ಜಾರ್ಖಂಡ್ ಘಟಕದ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಾಂಡಿ ಅವರು ಕಾಂಗ್ರೆಸ್‍ನ ರಾಜ್ಯಸಭಾ ಸಂಸದ ಧೀರಜ್ ಪ್ರಸಾದ್ ಸಾಹು ಅವರ ನಿವೇಶನದಿಂದ ಲೆಕ್ಕದಲ್ಲಿ ಇಲ್ಲದ ನಗದು ಪತ್ತೆಯಾಗಿರುವುದರಿಂದ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.

ಒಡಿಶಾ ಮೂಲದ ಬೌದ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್ ಮತ್ತು ಅದಕ್ಕೆ ಸಂಬಂಧಿಸಿದ ಸಂಸ್ಥೆಗಳ ವಿರುದ್ಧ ಆದಾಯ ತೆರಿಗೆ ಇಲಾಖೆ ನಡೆಸಿದ ಶೋಧದ ಮೂಲಕ ಇದುವರೆಗೆ ಸುಮಾರು 225 ಕೋಟಿ ರೂ. ಲೆಕ್ಕಕ್ಕೆ ಸಿಗದ ನಗದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಹು ವಿರುದ್ಧ ಎಫ್‍ಐಆರ್ ದಾಖಲಿಸಿ ಬಂಧಿಸಬೇಕು ಎಂದು ಇದೇ ಸಂದರ್ಭದಲ್ಲಿ ಮರಾಂಡಿ ಆಗ್ರಹಿಸಿದ್ದಾರೆ.
ಇಷ್ಟು ದೊಡ್ಡ ಪ್ರಮಾಣದ ನಗದು ದಂಧೆ ಅಭೂತಪೂರ್ವವಾಗಿದೆ ಎಂದು ಒತ್ತಿ ಹೇಳಿದ ಅವರು, ಈ ವಿಷಯದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು ಮತ್ತು ಹಣವು ಉನ್ನತ ಕಾಂಗ್ರೆಸ್ ನಾಯಕತ್ವ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್‍ಗೆ ಸಂಬಂಧಿಸಿದೆ ಎಂದು ಆರೋಪಿಸಿದರು.

ಅಸ್ಸಾಂ ಎಂದಿಗೂ ಮ್ಯಾನ್ಮಾರ್ ಭಾಗವಾಗಿರಲಿಲ್ಲ : ಹಿಮಂತ ಬಿಸ್ವಾ ಶರ್ಮಾ

ಐಟಿ ಇಲಾಖೆಯಿಂದ ಮೂರು ಡಜನ್ ಎಣಿಕೆ ಯಂತ್ರಗಳನ್ನು ನಿಯೋಜಿಸಲಾಗಿದೆ. ಯಂತ್ರಗಳು ಸೀಮಿತ ಸಾಮಥ್ರ್ಯ ಹೊಂದಿರುವುದರಿಂದ ಎಣಿಕೆ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸಾಹು ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಮತ್ತು ಅವರು ಲಭ್ಯವಿಲ್ಲ ಎಂದು ಅವರ ಕಚೇರಿ ಮೂಲಗಳು ಪಿಟಿಐಗೆ ತಿಳಿಸಿದೆ.

ಅಲ್ಮಿರಾಗಳಲ್ಲಿ ಬಚ್ಚಿಟ್ಟಿದ್ದ 200 ಕೋಟಿ ರೂಪಾಯಿ ನಗದು, ಒಡಿಶಾದ ಬೋಲಂಗಿರ್ ಜಿಲ್ಲೆಯ ಡಿಸ್ಟಿಲರಿ ಗುಂಪಿನ ಆವರಣದಿಂದ ವಶಪಡಿಸಿಕೊಂಡರೆ, ಉಳಿದ ಮೊತ್ತವು ಒಡಿಶಾದ ಸಂಬಲ್‍ಪುರ ಮತ್ತು ಸುಂದರ್‍ಗಢ್ , ಬೊಕಾರೊ ಮತ್ತು ರಾಂಚಿಯಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

Latest News