ಶಾಸಕ ಮಾಡಾಳ್ ವಿರೂಪಾಕ್ಷಪ್ಪರ ಪುತ್ರನ ಮನೆಯಲ್ಲಿ 6 ಕೋಟಿ ಹಣ ಪತ್ತೆ

ಬೆಂಗಳೂರು,ಮಾ.3- ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮಾಡಾಳ್ ಅವರ ಮನೆಯಲ್ಲೂ ಮೂಟೆಗಳಲ್ಲಿ ಕಟ್ಟಿಡಲಾಗಿದ್ದ ಗರಿ ಗರಿ ನೋಟಿನ ಕಂತೆಗಳು ಪತ್ತೆಯಾಗಿವೆ. ಸಂಜಯನಗರದಲ್ಲಿರುವ ಪ್ರಶಾಂತ್ ಅವರ ನಿವಾಸದ ಮೇಲೆ ದಾಳಿ ನಡೆಸಿದಾಗ ಅವರ ಮನೆಯಲ್ಲಿ 6 ಕೋಟಿ ರೂ.ಗೂ ಹೆಚ್ಚಿನ ನಗದು ಪತ್ತೆಯಾಗಿದೆ ಎಂದು ಲೋಕಾಯುಕ್ತರು ತಿಳಿಸಿದ್ದಾರೆ. ನಿರ್ದಿಷ್ಟ ದೂರು ಆಧರಿಸಿ ನಿನ್ನೆ ಪ್ರಶಾಂತ್ ಮಾಡಾಳ್ ಅವರಿಗೆ ಸೇರಿದ ಕೃಮಾರಕೃಪ ಸಮೀಪ ಇರುವ ಖಾಸಗಿ ಕಚೇರಿ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು 2.2 […]

ಎಟಿಎಂಗೆ ತುಂಬಿಸಬೇಕಿದ್ದ 1.3 ಕೋಟಿ ಹಣದೊಂದಿಗೆ ಪರಾರಿಯಾದವನಿಗೆ ಶೋಧ

ಬೆಂಗಳೂರು, ಫೆ.7- ಎಟಿಎಂಗಳಿಗೆ ತುಂಬಬೇಕಿದ್ದ 1 ಕೋಟಿ 3 ಲಕ್ಷ ಹಣದೊಂದಿಗೆ ಪರಾರಿಯಾಗಿರುವ ಎಟಿಎಂ ಕಸ್ಟೋಡಿಯನ್‍ಗಾಗಿ ಮಡಿವಾಳ ಠಾಣಾ ಪೊಲೀಸರು ಶೋಧ ಕೈಗೊಂಡಿದ್ದಾರೆ. ಆರೋಪಿ ರಾಜೇಶ್ ಮೆಸ್ತಾ ಬಂಧನಕ್ಕೆ ಎರಡು ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ಈಗಾಗಲೇ ಕಾರ್ಯಾನ್ಮುಖವಾಗಿವೆ. ಮೂಲತಃ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ರಾಜೇಶ್ ನಗರದ ವೆಂಕಟಾಪುರದಲ್ಲಿ ವಾಸವಾಗಿದ್ದುಕೊಂಡು ಎಟಿಎಂ ಕೇಂದ್ರಗಳಿಗೆ ಹಣ ತುಂಬುವ ಸೆಕ್ಯೂರ್ ವ್ಯಾಲ್ಯೂ ಇಂಡಿಯಾ ಲಿಮಿಟೆಡ್ ಎಂಬ ಎಜೆನ್ಸಿಯಲ್ಲಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದನು. ಬೆಂಗಳೂರಿನಲ್ಲಿ ಮತ್ತೆ […]

ನಾಗಾಲ್ಯಾಂಡ್‍ನಲ್ಲಿ 1 ಕೋಟಿ ಹಣದೊಂದಿಗೆ ಮಹಿಳೆ ಬಂಧನ

ಕೊಹಿಮಾ, ಫೆ.2 – ಚುನಾವಣೆ ಕೆಲವೇ ದಿನಗಳು ಬಾಕಿ ಇರುವಾಗ ನಾಗಾಲ್ಯಾಂಡ್‍ನ ಕೊಹಿಮಾ ಜಿಲ್ಲೆಯ ಮಣಿಪುರ ಗಡಿಯ ಬಳಿ ಒಂದು ಕೋಟಿ ರೂಪಾಯಿ ಹಣವನ್ನು ಸಾಗಿಸುತ್ತಿದ್ದ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ. ಖುಜಾಮಾ ಅಂತರಾಜ್ಯಚೆಕ್‍ಪೊಸ್ಟ್ ಗೇಟ್‍ನಲ್ಲಿ ಮಣಿಪುರ-ನೋಂದಾಯಿತ ವಾಹನವನ್ನು ತಪಾಸಣೆ ಮಾಡುವಾಗ 1 ಕೋಟಿ ನಗದು ಹಣವನ್ನುವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಿಯಮಾನುಸಾರ ಆದಾಯ ತೆರಿಗೆ ಇಲಾಖೆಯು ಹಸ್ತಾಂತರಿಸಲಾಗಿದೆ ಎಂದು ಜಿಲ್ಲಾ ಚುನಾವಣಾಕಾರಿ ಹಾಗೂ ಜಿಲ್ಲಾಧಿಕಾರಿ ಶಾನವಾಸ್ ಸಿ ತಿಳಿಸಿದ್ದಾರೆ. ಕೇಂದ್ರ ಬಜೆಟ್-2023 ಹೈಲೈಟ್ಸ್ ಯಾವುದೇ ರಾಜಕೀಯ ಪಕ್ಷಕ್ಕೆ ನಗದನ್ನು […]

ರೈಲು ನಿಲ್ದಾಣದಲ್ಲಿ 1.71 ಕೋಟಿ ನಗದು, ಚಿನ್ನದ ಬಿಸ್ಕತ್ತು ಪತ್ತೆ

ಥಾಣೆ, ಅ. 3 – ಮಹಾರಾಷ್ಟ್ರದ ಥಾಣೆ ಜಿಲ್ಲಾಯ ಟಿಟ್ವಾಲಾ ರೈಲು ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ಮೂಟೆಯಲ್ಲಿ ಸಾಗಿಸುತ್ತಿದ್ದ 1.71 ಕೋಟಿ ರೂಪಾಯಿ ಮೌಲ್ಯದ ನಗದು ಹಾಗು ಎರಡು ಚಿನ್ನದ ಬಿಸ್ಕತ್ತುಗಳನ್ನು ಆರ್‍ಪಿಎಫ್ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ರೈಲ್ವೆ ನಿಲ್ದಾಣದ ಪ್ಲಾಟ್‍ಫಾರ್ಮ್‍ನಲ್ಲಿ ಅನುಮಾನಾಸ್ಪದವಾಗಿ ಚಲಿಸುತ್ತಿದ್ದ ವ್ಯಕ್ತಿಯನ್ನು ಗಮನಿಸಿ ಆರ್‍ಪಿಎಫ್ ಸಿಬ್ಬಂದಿ ಆತನನ್ನು ವಿಚಾರಿಸಿದ್ದಾರೆ ಅದರೆ ಆತ ತಡಬಡಾಯಿಸಿದಾಗ ಬೆನ್ನ ಹಿಂದೆ ಹೊತ್ತಿಕೊಂಡಿದ್ದ ಮೂಟೆಯೊಂದಿಗೆ ಠಾಣೆಗೆ ಕರೆತಂದಿದ್ದಾರೆ. ನಂತರ ವಿಚಾರಣೆ ಬಳಿಕ ಆತ ನನ್ನ ಹೆಸರು ಗಣೇಶ್ ಮೊಂಡಲ್ ವ್ಯಾಪಾರಿ […]

ಟಿಎಂಸಿ ಶಾಸಕ ಇದ್ರಿಸ್ ಅಲಿ ಮನೆ ಧ್ವಂಸಗೊಳಿಸಿದ ಅವರದೇ ಪಕ್ಷದ ಕಾರ್ಯಕರ್ತರು

ಕೋಲ್ಕತ್ತಾ, ಆ.9- ಸ್ಥಳೀಯ ಸಂಸ್ಥೆಯಲ್ಲಿ ಕೆಲಸ ಕೊಡಿಸುವುದಾಗಿ ಹಲವರಿಂದ ಹಣ ಪಡೆದು ವಂಚಿಸಲು ಯತ್ನಿಸಿದ ಪಶ್ಚಿಮ ಬಂಗಾಳದ ಮುರ್ಷಿದಾ ಬಾದ್ ಜಿಲ್ಲೆಯ ಭಾಗೋ ಬಂಗೋಲಾದಲ್ಲಿ ಟಿಎಂಸಿ ಶಾಸಕ ಇದ್ರಿಸ್ ಅಲಿ ಅವರ ಮನೆಯನ್ನು ಅವರದೇ ಪಕ್ಷದ ಕಾರ್ಯಕರ್ತರೇ ಧ್ವಂಸಗೊಳಿಸಿದ್ದಾರೆ. ಸ್ಥಳೀಯ ಟಿಎಂಸಿ ನಾಯಕರು ಸೇರಿ ನೂರಾರು ಜನರ ಗುಂಪು ಕಳೆದ ರಾತ್ರಿ ಶಾಸಕರ ಮನೆಗೆ ನುಗ್ಗಿ ಧಾಂದಲೆ ನಡೆಸಿದ್ದು, ವಾಹನಗಳನ್ನು ಜಖಂಗೊಳಿಸಿ ಕೆಲ ವಸ್ತುಗಳನ್ನು ದೊಚ್ಚಿದ್ದಾರೆ. ಪಕ್ಷದ ಪ್ರಮುಖ ಹುದ್ದೆಗಳನ್ನು ಹಂಚಿಕೆ ಮಾಡುವ ಸಂದರ್ಭದಲ್ಲೂ ಹಣ ಪಡೆದಿದ್ದಾರೆ […]

BIG NEWS : ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅರೆಸ್ಟ್

ಕೋಲ್ಕತ್ತಾ,ಜು.23-ಸರ್ಕಾರಿ ಶಾಲೆಗಳ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಪಟ್ಟಂತೆ 20 ಕೋಟಿ ರೂ. ನಗದು ಪತ್ತೆಯಾದ ದಿನದ ಒಳಗಾಗಿ ಜಾರಿ ನಿರ್ದೇಶನಾಲಯ ಪಶ್ಚಿಮ ಬಂಗಾಳದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಾರ್ಥ ಚಟರ್ಜಿ ಹಾಗೂ ಅವರ ಆಪ್ತೆ ಅರ್ಪಿತ ಮುಖರ್ಜಿ ಅವರನ್ನು ಬಂಧಿಸಿದೆ. ಶನಿವಾರ ಬೆಳಗ್ಗೆ ಜಾರಿನಿರ್ದೇಶನಾಲಯದ 8ಕ್ಕೂ ಹೆಚ್ಚು ಅಧಿಕಾರಿಗಳು ಸಚಿವ ಪಾರ್ಥ ಅವರನ್ನು ವಿಚಾರಣೆಗೊಳಪಡಿಸಿದರು. ಸತತ ವಿಚಾರಣೆ ಬಳಿಕ ತೃಪ್ತಿದಾಯಕ ಉತ್ತರಗಳು ದೊರೆಯದ ಕಾರಣ ಸಚಿವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ನಿನ್ನೆ ಜಾರಿನಿರ್ದೇಶನಾಲಯ ಅರ್ಪಿತ […]

ನೇಪಾಳದಲ್ಲಿ ಅಕ್ರಮ ಹಣ ಸಾಗಿಸುತ್ತಿದ್ದ ಭಾರತೀಯನ ಬಂಧನ

ಕಠ್ಮಂಡು, ಜು 21 – ಯಾವುದೇ ದಾಖಲೆಗಳಿಲ್ಲದೆ 41.55 ಲಕ್ಷ ರೂ (ಭಾರತೀಯ ಹಣ) ನಗದು ಸಾಗಿಸುತ್ತಿದ್ದ ಭಾರತೀಯನನ್ನುಇಲ್ಲಿ ವಿಶೇಷ ಪೊಲೀಸರ ತಂಡ ಬಂಸಿದೆ. ಸುಮಾರು 41,55,000 ನಗದು ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ನೇಪಾಳದಲ್ಲಿ ಯಾವುದೇ ಪೂರಕ ದಾಖಲೆಗಳಿಲ್ಲದೆ 25,000 ರೂ.ಗಿಂತ ಹೆಚ್ಚಿನ ಹಣವನ್ನು ಸಾಗಿಸುವುದು ಕಾನೂನುಬಾಹಿರವಾಗಿದೆ. ಭಾರತ ಮೂಲದ ವ್ಯಕ್ತಿಯು ಮೋಟಾರು ಬೈಕ್‍ನ ಸೀಟಿನ ಕೆಳಗೆ ಮತ್ತು ಪೆಟ್ರೋಲ್ ಟ್ಯಾಂಕ್‍ನಲ್ಲಿ ನೋಟುಗಳನ್ನು ಬಚ್ಚಿಟ್ಟಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಭಂದಿಸಿದಂತೆ ರಾಯಭಾರ […]