Thursday, December 5, 2024
Homeರಾಷ್ಟ್ರೀಯ | Nationalಮಧ್ಯಪ್ರದೇಶ : ನಿಗೂಢ ಸ್ಫೋಟಕ್ಕಿ ಇಬ್ಬರು ಮಹಿಳೆಯರು ಬಲಿ

ಮಧ್ಯಪ್ರದೇಶ : ನಿಗೂಢ ಸ್ಫೋಟಕ್ಕಿ ಇಬ್ಬರು ಮಹಿಳೆಯರು ಬಲಿ

Blast at Morena house kills 2 women, injures 5; cops suspect illegal Firecracker storage

ಮೊರೆನಾ,ನ. 26 (ಪಿಟಿಐ) ನಿಗೂಢ ಸ್ಪೋಟಕ್ಕೆ ಇಬ್ಬರು ಮಹಿಳೆಯರು ಸಾವನ್ನಪ್ಪಿ, ಇತರ ಹಲವಾರು ಮಂದಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ಮೊರೆನಾ ನಗರದಲ್ಲಿ ಮಧ್ಯರಾತ್ರಿಯ ಸುಮಾರಿಗೆ ಮೂರು ಮನೆಗಳು ಸ್ಪೋಟಗೊಂಡ ನಂತರ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ ಐವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ರಾಥೋಡ್‌ ಕಾಲೋನಿಯಲ್ಲಿ ನಡೆದ ಘಟನೆಯ ನಂತರ ಇನ್ನೂ ಕೆಲವರು ಅವಶೇಷಗಳಡಿ ಸಿಲುಕಿರುವ ಭಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸ್ಫೋಟಕ್ಕೆ ಕಾರಣವೇನು ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ ಎಂದು ಪೊಲೀಸ್‌‍ ವರಿಷ್ಠಾಧಿಕಾರಿ ಸಮೀರ್‌ ಸೌರಭ್‌ ಹೇಳಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಸ್ಫೋಟದ ಕಾರಣವನ್ನು ಕಂಡುಹಿಡಿಯಲು ಫೋರೆನ್ಸಿಕ್‌ ತಂಡವೂ ಸ್ಥಳದಲ್ಲಿದೆ ಎಂದು ಅವರು ಹೇಳಿದರು.

RELATED ARTICLES

Latest News