Friday, May 3, 2024
Homeರಾಷ್ಟ್ರೀಯಮುಂಬೈನ ಅಂಗಡಿ, ಮಳಿಗೆಗಳ ಮೇಲೆ ದೇವನಾಗರಿ ಲಿಪಿ ಬೋರ್ಡ್ ಕಡ್ಡಾಯ

ಮುಂಬೈನ ಅಂಗಡಿ, ಮಳಿಗೆಗಳ ಮೇಲೆ ದೇವನಾಗರಿ ಲಿಪಿ ಬೋರ್ಡ್ ಕಡ್ಡಾಯ

ಮುಂಬೈ, ನ.26 (ಪಿಟಿಐ) – ದೇವನಾಗರಿ ಲಿಪಿಯಲ್ಲಿ ಹೆಸರುಗಳಿರುವ ಫಲಕಗಳನ್ನು ಹಾಕಲು ವಿಫಲವಾದ ಅಂಗಡಿಗಳು, ಹೋಟೆಲ್‍ಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳ ವಿರುದ್ಧ ಬೃಹನ್‍ಮುಂಬೈ ಮುನ್ಸಿಪಲ್ ಕಾಪೆರ್ರೇಷನ್ ಮಂಗಳವಾರದಿಂದ ಕ್ರಮ ಕೈಗೊಳ್ಳಲು ಪ್ರಾರಂಭಿಸುತ್ತದೆ ಎಂದು ನಾಗರಿಕ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಬಿಎಂಸಿ ಆಡಳಿತಾಧಿಕಾರಿ ಐ ಸಿ ಚಾಹಲ್ ಸಭೆ ನಡೆಸಿ, ಅಂಗಡಿಗಳು, ಸಂಸ್ಥೆಗಳು ಮತ್ತು ಹೋಟೆಲ್‍ಗಳ ಹೆಸರುಗಳು ದೇವನಾಗರಿ ಲಿಪಿಯಲ್ಲಿ (ಇತರ ಲಿಪಿಯ ಜೊತೆಗೆ) ಇರಬೇಕು ಎಂಬ ಸುಪ್ರೀಂ ಕೋರ್ಟ್‍ನ ನಿರ್ದೇಶನದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ನವೆಂಬರ್ 25 ರೊಳಗೆ ದೇವನಾಗರಿ ಬೋರ್ಡ್‍ಗಳನ್ನು ಹಾಕಲು ಸುಪ್ರೀಂ ಕೋರ್ಟ್ ಸಮಯ ನೀಡಿದೆ, ಆದರೆ ನಾಗರಿಕ ಸಂಸ್ಥೆ ನವೆಂಬರ್ 28 ರಿಂದ ಕ್ರಮವನ್ನು ಪ್ರಾರಂಭಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮಿಚೆಲ್ ಮಾರ್ಷ್ ವಿಶ್ವಕಪ್ ಮೇಲೆ ಕಾಲಿಟ್ಟಿರುವುದು ನೋವು ತಂದಿದೆ:ಶಮಿ

ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ ನವೆಂಬರ್ 22 ರಂದು ಮುಂಬೈನಲ್ಲಿ ಬ್ಯಾನರ್‍ಗಳನ್ನು ಪ್ರದರ್ಶಿಸಿದ್ದು, ಮರಾಠಿಯಲ್ಲಿ (ದೇವನಾಗರಿ ಲಿಪಿ) ಅಂಗಡಿಗಳು ಮತ್ತು ಹೋಟೆಲ್‍ಗಳ ಸೈನ್‍ಬೋರ್ಡ್‍ಗಳನ್ನು ಹಾಕಲು ಸುಪ್ರೀಂ ಕೋರ್ಟ್ ಗಡುವು ಪಾಲನೆಯಾಗದಿದ್ದರೆ ಆಕ್ರಮಣಕಾರಿ ಪ್ರತಿಭಟನೆಯ ಸುಳಿವು ನೀಡಿದೆ. ಅಂಗಡಿಗಳು ಮತ್ತು ಇತರ ಸಂಸ್ಥೆಗಳ ಸೈನ್‍ಬೋರ್ಡ್‍ಗಳನ್ನು ಪ್ರಾದೇಶಿಕ ಭಾಷೆಯಲ್ಲಿ (ಮಹಾರಾಷ್ಟ್ರದ ಮರಾಠಿ) ಹೊಂದಲು ಠಾಕ್ರೆ ಈ ಹಿಂದೆ ಒತ್ತಿಹೇಳಿದ್ದರು.

RELATED ARTICLES

Latest News