Monday, May 6, 2024
Homeಕ್ರೀಡಾ ಸುದ್ದಿಮಿಚೆಲ್ ಮಾರ್ಷ್ ವಿಶ್ವಕಪ್ ಮೇಲೆ ಕಾಲಿಟ್ಟಿರುವುದು ನೋವು ತಂದಿದೆ:ಶಮಿ

ಮಿಚೆಲ್ ಮಾರ್ಷ್ ವಿಶ್ವಕಪ್ ಮೇಲೆ ಕಾಲಿಟ್ಟಿರುವುದು ನೋವು ತಂದಿದೆ:ಶಮಿ

ಬೆಂಗಳೂರು, ನ.25- ಟೀಮ್ ಇಂಡಿಯಾ ವಿರುದ್ಧ ನಡೆದ 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ 6 ವಿಕೆಟ್‍ಗಳ ಗೆಲುವು ಸಾಧಿಸಿದ ನಂತರ ಆಸ್ಟ್ರೇಲಿಯಾದ ಸ್ಟಾರ್ ಆಲ್‍ರೌಂಡರ್ ವಿಶ್ವಕಪ್ ಮೇಲೆ ಕಾಲಿಟ್ಟಿರುವುದು ನನಗೆ ಅತೀವ ನೋವು ತಂದಿದೆ ಎಂದು ಅನುಭವಿ ವೇಗಿ ಮೊಹಮ್ಮದ್ ಶಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವೆಂಬರ್ 19 ರಂದು ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ರೋಹಿತ್ ಶರ್ಮಾ ಬಳಗ 240 ರನ್‍ಗಳ ಗಳಿಸಿತ್ತು. ಈ ಗುರಿಯನ್ನು ಹಿಂಬಾಲಿಸಿದ ಆಸ್ಟ್ರೇಲಿಯಾ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅವರ ಶತಕ (137 ರನ್) ಹಾಗೂ ಮಾರ್ನಸ್ ಲಬುಶೇನ್ ( ಅಜೇಯ 58 ರನ್) ನೆರವಿನಿಂದ 6 ವಿಕೆಟ್‍ಗಳ ಗೆಲುವು ಸಾಧಿಸಿದ ಕಾಂಗರೂ ಪಡೆ 6ನೇ ಬಾರಿ ಟ್ರೋಫಿ ಗೆದ್ದಿತ್ತು.

ಎಲ್‍ಎಸ್‍ಜಿ ಮೆಂಟರ್ ಆಗ್ತಾರಂತೆ ರಾಹುಲ್ ದ್ರಾವಿಡ್..?

ವಿಶ್ವಕಪ್ ಗೆದ್ದ ನಂತರ ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ಸಾಕಷ್ಟು ಚಿತ್ರಗಳನ್ನು ತಮ್ಮ ಇನಾಸ್ಟಾಗ್ರಾಮ್‍ನಲ್ಲಿ ಹಾಕಿದ್ದರು. ಇದರಲ್ಲಿ ಒಂದು ಚಿತ್ರದಲ್ಲಿ ಮಿಚೆಲ್ ಮಾರ್ಷ್ ವಿಶ್ವಕಪ್ ಮೇಲೆ ತಮ್ಮ ಎರಡು ಕಾಲುಗಳನ್ನಿಟ್ಟು ವಿಶ್ರಾಂತಿ ಪಡೆಯುತ್ತಿದ್ದ ಚಿತ್ರವೂ ಇತ್ತು. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳು ಕಟುವಾಗಿ ಟೀಕಿಸಿದ್ದರು. ಈಗ ಮೊಹಮ್ಮದ್ ಶಮಿ ಕೂಡ ಪ್ರತಿಕ್ರಿಯಿಸಿದ್ದಾರೆ.

`ಮಿಚೆಲ್ ಮಾರ್ಷ್ ಅವರ ನಡೆಯು ನನಗೆ ತುಂಬಾ ಬೇಸರ ತರಿಸಿದೆ. ಎಲ್ಲಾ 10 ತಂಡಗಳು ಕೂಡ ವಿಶ್ವಕಪ್ ಗೆದ್ದು ತಲೆ ಮೇಲೆ ಹೊತ್ತು ಮೆರೆಯಬೇಕೆಂದು ಹಾತೊರೆಯುತ್ತಿದ್ದರು. ಆದರೆ ಅದೇ ಟ್ರೋಫಿ ಮೇಲೆ ಮಿಚೆಲ್ ಮಾರ್ಷ್ ಕಾಲುಗಳನ್ನು ಇಟ್ಟಿರುವುದು ನನಗೆ ಬೇಸರ ಮೂಡಿಸಿದೆ’ ಎಂದು ಶಮಿ ಹೇಳಿದ್ದಾರೆ. 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 7 ಪಂದ್ಯಗಳನ್ನು ಆಡಿದ್ದ ಮೊಹಮ್ಮದ್ ಶಮಿ, ಸೆಮಿಫೈನಲ್‍ನಲ್ಲಿ 7 ವಿಕೆಟ್ ಸಾಧನೆ ಸೇರಿದಂತೆ 24 ವಿಕೆಟ್‍ಗಳನ್ನು ಪಡೆದು ಟಾಪ್ ವಿಕೆಟ್ ಟೇಕರ್ ಆಗಿದ್ದರು.

RELATED ARTICLES

Latest News