Wednesday, September 18, 2024
Homeಕ್ರೀಡಾ ಸುದ್ದಿ | Sportsಎಲ್‍ಎಸ್‍ಜಿ ಮೆಂಟರ್ ಆಗ್ತಾರಂತೆ ರಾಹುಲ್ ದ್ರಾವಿಡ್..?

ಎಲ್‍ಎಸ್‍ಜಿ ಮೆಂಟರ್ ಆಗ್ತಾರಂತೆ ರಾಹುಲ್ ದ್ರಾವಿಡ್..?

ಬೆಂಗಳೂರು, ನ.25- ತವರಿನ ಅಂಗಳದಲ್ಲಿ ನಡೆದ 2023ರ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡ ನಂತರ ತಂಡದ ಹೆಡ್ ಕೋಚ್ ಹಾಗೂ ಕನ್ನಡಿಗ ರಾಹುಲ್ ದ್ರಾವಿಡ್ ಅವರ ನಡೆ ನಿಗೂಢವಾಗಿದೆ.

ವಿಶ್ವಕಪ್ ಟೂರ್ನಿಯೊಂದಿಗೆ ರಾಹುಲ್ ದ್ರಾವಿಡ್ ಅವರ 2 ವರ್ಷಗಳ ಹೆಡ್ ಕೋಚ್ ಹುದ್ದೆಯ ಅವಧಿಯು ಮುಕ್ತಾಯವಾಗಿದ್ದು, ಅವರನ್ನೇ ಈ ಹುದ್ದೆಯಲ್ಲಿ ಮುಂದುವರೆಸಲು ಬಿಸಿಸಿಐ ಒಲವು ತೋರಿದೆ ಎಂದು ಹೇಳಲಾಗುತ್ತಿದೆ.

ಆದರೆ ರಾಹುಲ್ ದ್ರಾವಿಡ್ ಅವರು ತಮ್ಮ ಕುಟುಂಬದೊಂದಿಗೆ ಹೆಚ್ಚಿನ ಸಮಯವನ್ನು ಕಳೆಯ ಬೇಕೆಂದು ಬಯಸಿರುವುದರಿಂದ ಅವರು ಈ ಹುದ್ದೆಯಲ್ಲಿ ಮುಂದುವರೆಯುವುದು ಅನುಮಾನ. ಈ ಬಗ್ಗೆ ಅವರು ಬಿಸಿಸಿಐನ ಉನ್ನತ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಡಿ.1ರಿಂದ ವಾಹನಗಳಲ್ಲಿ ತುರ್ತು ಪ್ಯಾನಿಕ್ ಬಟನ್ ಅಳವಡಿಕೆಗೆ ಆದೇಶ

ವಿವಿಎಸ್ ಲಕ್ಷ್ಮಣ್ ಹೆಡ್ ಕೋಚ್..?
ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟಿ 20 ಸರಣಿ ಸಲುವಾಗಿ ಟೀಮ್‍ಇಂಡಿಯಾದೊಂದಿಗೆ ಹೆಡ್ ಕೋಚ್ ರೂಪದಲ್ಲಿ ತೆರಳಿರುವ ಎನ್‍ಸಿಎ ಅಧ್ಯಕ್ಷ ವಿವಿಎಸ್ ಲಕ್ಷ್ಮಣ್ ಅವರೇ ಭಾರತ ತಂಡದ ಮುಂದಿನ ಮುಖ್ಯ ತರಬೇತುದಾರರಾಗುತ್ತಾರೆ ಎಂಬ ಸುದ್ದಿಗಳು ಕೂಡ ದಟ್ಟವಾಗಿ ಹರಡಿದೆ.

`ಲಕ್ಷ್ಮಣ್ ಅವರು ಟೀಮ್ ಇಂಡಿಯಾದ ಹೆಡ್ ಕೋಚ್ ಹುದ್ದೆಯನ್ನು ಅಲಂಕರಿಸಲು ತುಂಬಾ ಉತ್ಸುಕರಾಗಿದ್ದಾರೆ. ವಿಶ್ವಕಪ್ ಟೂರ್ನಿಯ ವೇಳೆಯೇ ಲಕ್ಷ್ಮಣ್ ಅವರು ಬಿಸಿಸಿಐನ ಉನ್ನತ ಮಟ್ಟದ ಅಕಾರಿಗಳೊಂದಿಗೆ ಅಹಮದಾಬಾದ್‍ನಲ್ಲಿ ಒಂದು ಸುತ್ತಿನ ಮಾತುಕತೆಯನ್ನು ನಡೆಸಿದ್ದು, ಸುದೀರ್ಘ ಕಾಲದವರೆಗೆ ಭಾರತ ತಂಡದ ಮುಖ್ಯ ತರಬೇತುದಾರರನಾಗಿ ಕಾರ್ಯನಿರ್ವಹಿಸಲು ಸಿದ್ಧವಿದ್ದೇನೆ ಎಂದು ಸಹಿ ಹಾಕಲು ಸಿದ್ಧವಿದ್ದಾರಂತೆ.

ಅದರ ಅಂಗವಾಗಿಯೇ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಲಕ್ಷ್ಮಣ್ ಅವರು ಹಂಗಾಮಿ ಹೆಡ್ ಕೋಚ್ ಕಾರ್ಯ ನಿರ್ವಹಿಸುತ್ತಿದ್ದು, ಮುಂಬರುವ ದಕ್ಷಿಣ ಆಫ್ರಿಕಾದ ಸರಣಿಯಿಂದ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ಅಕಾರ ಸ್ವೀಕರಿಸಲಿದ್ದಾರೆ’ ಎಂದು ಬಿಸಿಸಿಐನ ಮೂಲಗಳು ತಿಳಿಸಿವೆ ಎಂದು ವರದಿ ಆಗಿದೆ.

ಐಪಿಎಲ್ ಮೆಂಟರ್ ಆಗ್ತಾರಾ ಮಹಾಗೋಡೆ..?
2022ರಿಂದ ಐಪಿಎಲ್‍ನಲ್ಲಿ ಮಹಾ ಅಲೆ ಎಬ್ಬಿಸಿರುವ ಲಖನೌ ಸೂಪರ್ ಜಯಂಟ್ಸ್ ತಂಡದ ಮೆಂಟರ್ ಸ್ಥಾನವನ್ನು ವಿಶ್ವಕಪ್ ವಿಜೇತ ಆಟಗಾರ ಗೌತಮ್ ಗಂಭೀರ್ ತ್ಯಜಿಸಿದ್ದು, ಇವರ ಸ್ಥಾನವನ್ನು ತುಂಬಲು ತಂಡದ ಫ್ರಾಂಚೈಸಿಗಳು ಮುಂದಾಗಿದ್ದಾರೆ ಎಂಬ ಸುದ್ದಿಗಳು ಹರದಾಡುತ್ತಿವೆ. ಮತ್ತೊಂದೆಡೆ 2008ರ ಐಪಿಎಲ್ ವಿಜೇತ ತಂಡವಾದ ರಾಜಸ್ಥಾನ್ ರಾಯಲ್ಸ್ ಕೂಡ ಭಾರತ ತಂಡದ ಮಹಾಗೋಡೆ ರಾಹುಲ್ ದ್ರಾವಿಡ್ ಅವರನ್ನು ಮೆಂಟರ್ ಆಗಿಸಲು ಹೊರಟಿದೆ ಎಂದು ತಿಳಿದುಬಂದಿದೆ.

ಅಮಿತ್ ಷಾ ನನ್ನ ಜೀವ ತೆಗೆದರು : ಸೋಮಣ್ಣ

ಟ್ರೋಫಿ ಮೇಲೆ ಕಣ್ಣಿಟ್ಟಿರುವ ಎಲ್‍ಎಸ್‍ಜಿ:
ಕಳೆದೆರಡು ಐಪಿಎಲ್ ಆವೃತ್ತಿಗಳಲ್ಲೂ ಅದ್ಭುತ ಪ್ರದರ್ಶನ ನೀಡುತ್ತಿರುವ ಕನ್ನಡಿಗ ಕೆ.ಎಲ್.ರಾಹುಲ್ ನಾಯಕತ್ವದ ಲಖನೌ ಸೂಪರ್ ಜಯಂಟ್ಸ್ ತಂಡವು ಫೈನಲ್ ಹಂತ ತಲುಪಲು ಎಡವಿದೆ. ಆದರೆ 2024ರ ಆವೃತ್ತಿಯಲ್ಲಿ ಟ್ರೋಫಿ ಗೆಲ್ಲುವ ಲೆಕ್ಕಾಚಾರದಲ್ಲಿರುವ ಫ್ರಾಂಚೈಸಿಗಳು ಈಗಾಗಲೇ ಕೆಲವು ಬದಲಾವಣೆ ಮಾಡಿಕೊಂಡಿದ್ದು ಹೆಡ್ ಕೋಚ್ ಆಂಡಿ ಪ್ಲವರ್ ಸ್ಥಾನಕ್ಕೆ ಜಸ್ಟಿನ್ ಲ್ಯಾಂಗರ್‍ರನ್ನು ಕರೆ ತಂದಿದ್ದು, ಈಗ ಮೆಂಟರ್ ಸ್ಥಾನಕ್ಕೆ ರಾಹುಲ್ ದ್ರಾವಿಡ್‍ರನ್ನು ಕರೆತರುವ ಮುಂದಾಗಿದೆ ಎಂದು ತಿಳಿದುಬಂದಿದೆ.

RELATED ARTICLES

Latest News