Tuesday, April 30, 2024
Homeರಾಜ್ಯಅಮಿತ್ ಷಾ ನನ್ನ ಜೀವ ತೆಗೆದರು : ಸೋಮಣ್ಣ

ಅಮಿತ್ ಷಾ ನನ್ನ ಜೀವ ತೆಗೆದರು : ಸೋಮಣ್ಣ

ಬೆಂಗಳೂರು,ನ.25- ನಾನು ಎರಡು ಕ್ಷೇತ್ರದಲ್ಲಿ ಸ್ರ್ಪಧಿಸಿದ್ದೇ ಮಹಾ ಅಪರಾಧವಾಯಿತು. ಗೃಹ ಸಚಿವ ಅಮಿತ್ ಷಾ ಅವರು ನಮ್ಮ ಮನೆಯಲ್ಲೇ ಕುಳಿತು ನನ್ನ ಜೀವ ತೆಗೆದರು ಎಂದು ಮಾಜಿ ಸಚಿವ ವಿ.ಸೋಮಣ್ಣ ತಮ್ಮ ಬೇಗುದಿಯನ್ನು ಹೊರ ಹಾಕಿದ್ದಾರೆ.

ತುಮಕೂರಿನಲ್ಲಿ ಸಿದ್ದಗಂಗಾ ಮಠಕ್ಕೆ ಕುಟುಂಬ ಸಮೇತ ಭೇಟಿಕೊಟ್ಟ ಅವರು ಶ್ರೀ ಸಿದ್ದಲಿಂಗ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಬಳಿಕ ಮಠದಲ್ಲಿ ಶ್ರೀಗಳ ಜೊತೆ ಗೌಪ್ಯವಾಗಿ ಮಾತನಾಡುತ್ತಿದ್ದ ಸೋಮಣ್ಣನವರು, ನಾನು ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರವನ್ನು ಬಿಟ್ಟು ಹೋಗದಿದ್ದರೆ ನನಗೆ ಇಂದು ದುಸ್ಥಿತಿ ಬರುತ್ತಿರಲಿಲ್ಲ ಎಂದು ಸ್ವಾಮೀಜಿ ಮುಂದೆ ನೋವಿನಿಂದಲೇ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ವರುಣಾ ಹಾಗೂ ಚಾಮರಾಜನಗರ ಕ್ಷೇತ್ರಗಳಲ್ಲಿ ನಾನು ಸ್ಪರ್ಧೆ ಮಾಡಬಾರದಿತ್ತು. ಪಕ್ಷದ ಮಾತು ಕೇಳಿ ನನ್ನ ರಾಜಕೀಯ ಜೀವನಕ್ಕೆ ನಾನೇ ಕಲ್ಲು ಹಾಕಿಕೊಂಡೆ. ನಾನು ಗೋವಿಂದರಾಜನಗರ ಕ್ಷೇತ್ರ ಬಿಟ್ಟು ಬೇರೆ ಕಡೆ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದೆ. ಆದರೆ ನನಗೆ ಬಲವಂತವಾಗಿ ಸ್ಪರ್ಧೆ ಮಾಡಬೇಕೆಂದು ಒತ್ತಡ ಹಾಕಿದರೆಂದು ಹೇಳಿದರು.

ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ಅವರು ನಮ್ಮ ಮನೆಗೆ ಬಂದು ನೀವು ವರುಣಾ ಮತ್ತು ಚಾಮರಾಜನಗರದಿಂದ ಸರ್ಧೆ ಮಾಡಬೇಕೆಂದು ಬಲವಂತ ಮಾಡಿದರು. ನಾನು ವಿಧಿಯಿಲ್ಲದೆ ಒಪ್ಪಿಕೊಂಡೆ. ಅಮಿತ್ ಷಾ ನಮ್ಮ ಮನೆಗೆ ಬಂದು ಪ್ರಾಣ ತೆಗೆದರು ಎಂದು ಸೋಮಣ್ಣ ವಿಷಾದದಿಂದಲೇ ಶ್ರೀಗಳ ಜೊತೆ ತಮ್ಮ ನೋವನ್ನು ವ್ಯಕ್ತಪಡಿಸಿದರು.

ರಾಜಸ್ಥಾನದ 199 ವಿಧಾನಸಭಾ ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ

ಪ್ರಧಾನಿ ನರೇಂದ್ರಮೋದಿ ಅವರು ಕೂಡ ನನಗೆ ಬಲವಂತವಾಗಿ ಸ್ಪರ್ಧೆ ಮಾಡಬೇಕೆಂದರು. ನೀವು ರ್ಸಸಿ ನಾನು ಪ್ರಚಾರ ಮಾಡುತ್ತೇನೆ ಎಂದಾಗ ಒಲ್ಲೆ ಎಂದು ಹೇಳಲು ಆಗಲಿಲ್ಲ ಎಂದರು. ಶ್ರೀಗಳ ಜೊತೆ ಮುಕ್ತವಾಗಿ ಮಾತನಾಡುತ್ತಿದ್ದ ವೇಳೆ ಕ್ಯಾಮೆರಾಗಳನ್ನು ಕಂಡು ಸೋಮಣ್ಣ ತಮ್ಮ ಮಾತು ಬದಲಿಸಿ ಏನೇನೂ ಆಗಿಲ್ಲ ಎಂಬಂತೆ ಸಾಗಹಾಕುವ ಪ್ರಯತ್ನ ಮಾಡಿದರು.

ಕ್ಯಾರೆ ಎನ್ನದ ಸೋಮಣ್ಣ:
ಇದಕ್ಕೂ ಮುನ್ನ ಮಠಕ್ಕೆ ಆಗಮಿಸಿದ ಸೋಮಣ್ಣನವರ ಜೊತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೂರವಾಣಿ ಮೂಲಕ ಮಾತುಕತೆ ನಡೆಸುವ ಪ್ರಯತ್ನ ನಡೆಸಿದರು. ಮಠದಲ್ಲಿದ್ದ ತಮ್ಮ ಆಪ್ತರೊಬ್ಬರಿಂದ ಸೋಮಣ್ಣಗೆ ಮೊಬೈಲ್ ಫೆÇೀನ್ ಕೊಡುವಂತೆ ಬಿಎಸ್‍ವೈ ಎರಡು ಬಾರಿ ಕರೆ ಮಾಡಿದರೂ ನಾನು ಯಾರ ಜೊತೆಯೂ ಮಾತನಾಡುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದರೆಂದು ಗೊತ್ತಾಗಿದೆ.

ನಂತರ ತುಮಕೂರು ಸಂಸದ ಜಿ.ಎಸ್.ಬಸವರಾಜ್ ಜೊತೆ ಸೋಮಣ್ಣ ರಹಸ್ಯವಾಗಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಡಿಸೆಂಬರ್ 6ರಂದು ತುಮಕೂರಿನ ಸಿದ್ದಗಂಗಾ ಆವರಣದಲ್ಲಿ ಗುರುಭವನ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ತುಮಕೂರಿನ ಜನಪ್ರತಿನಿಗಳನ್ನು ಕಾರ್ಯಕ್ರಮಕ್ಕೆ ಸೋಮಣ್ಣ ಆಹ್ವಾನಿಸಿದ್ದಾರೆ.

ಡಿ.6ರ ನಂತರ ನಾನು ಕೆಲವು ವಿಷಯಗಳನ್ನು ಬಹಿರಂಗಪಡಿಸುತ್ತೇನೆ ಎಂದು ಖುದ್ದು ಸೋಮಣ್ಣನವರೇ ಹೇಳಿರುವುದರಿಂದ ಅವರ ರಾಜಕೀಯ ನಡೆ ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

RELATED ARTICLES

Latest News