Wednesday, February 28, 2024
Homeರಾಜ್ಯಭ್ರಷ್ಟರ ಪೋಷಕ ಸಿದ್ದರಾಮಯ್ಯ: ಬಿಜೆಪಿ ಕಿಡಿ

ಭ್ರಷ್ಟರ ಪೋಷಕ ಸಿದ್ದರಾಮಯ್ಯ: ಬಿಜೆಪಿ ಕಿಡಿ

ಬೆಂಗಳೂರು, ನ.25- ಕಾಂಗ್ರೆಸ್‍ನ ಭ್ರಷ್ಟಾಚಾರ, ಗೂಂಡಾಗಳ ಮಹಾಪೋಷಕರು ಮುಖ್ಯಮಂತ್ರಿ ಸಿದ್ದರಾಮಯ್ಯ. ಭ್ರಷ್ಟರ ಪಾಲಿನ ಆಲದಮರ ಹಾಗೂ ಪೋಷಕ. ಅರಸಿ ಬಂದವರಿಗೆಲ್ಲ ನೀರು, ನೆರಳು ಒದಗಿಸುವ ಮಹಾಸಂರಕ್ಷಕರ ಭ್ರಷ್ಟ ಸಾಧನೆಯ ಪಕ್ಷಿನೋಟ ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ.

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು 380 ಪಟ್ಟು ಅಕ್ರಮ ಆಸ್ತಿ ಪ್ರಕರಣದಿಂದ ಪಾರು ಮಾಡಿದ್ದೇ ಈ ಭ್ರಷ್ಟ ಪೋಷಕ. ಕೆಪಿಸಿಎಲ್‍ನ 447 ಕೋಟಿ ಮೆಗಾ ಹಗರಣದಿಂದ ಡಿಕೆಶಿ ಅವರನ್ನು ಸಂರಕ್ಷಿಸಿದ್ದೂ ಈ ಭ್ರಷ್ಟ ಪೋಷಕ ಎಂದು ವಾಗ್ದಾಳಿ ನಡೆಸಿದೆ.

ಪಿಎಫ್‍ಐನ 175 ಗೂಂಡಾಗಳ ಮೇಲಿದ್ದ ಕೇಸುಗಳನ್ನು ವಜಾ ಮಾಡಿದ್ದೇ ಈ ಭ್ರಷ್ಟ ಪೋಷಕ. 1,700 ಪಿಎಫ್‍ಐ ಪ್ರಕರಣಗಳನ್ನು ಹಿಂಪಡೆದದ್ದು ಈ ಭ್ರಷ್ಟ ಪೋಷಕ, ಹೈಕಮಾಂಡ್‍ಗೆ 1,000 ಕೋಟಿ ಕಪ್ಪ ಸಾಗಿಸಿದ ಎಂಎಲ್‍ಸಿ ಗೋವಿಂದರಾಜು ಅವರನ್ನು ರಕ್ಷಿಸಿದ್ದೇ ಈ ಭ್ರಷ್ಟ ಪೋಷಕ. ಖಡಕ್ ಅಧಿಕಾರಿ ಅನುರಾಗ್ ತಿವಾರಿ, ಗಣಪತಿ ಅವರನ್ನು ಸಾವಿಗೆ ತಳ್ಳಿ ಕುಚುಕು ಗೆಳೆಯ ಕೆ. ಜೆ. ಜಾರ್ಜ್ ರಕ್ಷಿಸಿದ್ದೇ ಈ ಭ್ರಷ್ಟ ಪೋಷಕ ಎಂದು ಗುಡುಗಿದೆ.

ಇಜಿಎಲ್ ಅಕ್ರಮದಲ್ಲಿ ಕೆ. ಜೆ. ಜಾರ್ಜ್‍ಗೆ ದಡ ಮುಟ್ಟಿಸಿದ್ದೂ ಈ ಭ್ರಷ್ಟ ಪೋಷಕರೇ. ಕಾಂಗ್ರೆಸ್ ಭ್ರಷ್ಟರ ಕೂಪ, ಇವರ ಹೈಕಮಾಂಡೇ ಮುಖ್ಯ ಅತಿಥಿ. ಹಾಗಾಗಿ, ಸಿದ್ದರಾಮಯ್ಯರವರಿಗೆ ಭ್ರಷ್ಟರ ಸಂಕುಲ ವಿಸ್ತರಣೆ ಪರಮ ಕರ್ತವ್ಯವೂ, ಕಲ್ಯಾಣಕಾರಿಯೂ ಆಗಿರುವುದು ನಾಡಿನ ದುರಂತ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕುಟುಕಿದೆ.

ರಾಜಸ್ಥಾನದ 199 ವಿಧಾನಸಭಾ ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ

ಭ್ರಷ್ಟರ ಕೂಪ, ಇವರ ಹೈಕಮಾಂಡೇ ಮುಖ್ಯ ಅತಿಥಿ. ಹಾಗಾಗಿ, ಸಿದ್ದರಾಮಯ್ಯರವರಿಗೆ ಭ್ರಷ್ಟರ ಸಂಕುಲ ವಿಸ್ತರಣೆ ಪರಮ ಕರ್ತವ್ಯವೂ, ಕಲ್ಯಾಣಕಾರಿಯೂ ಆಗಿರುವುದು ನಾಡಿನ ದುರಂತ ಎಂದಿದೆ.

RELATED ARTICLES

Latest News